ಬಾಲಿವುಡ್ ನ ಬಹುನಿರೀಕ್ಷಿತ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದ ಮೊದಲ ಹಾಡು ಜಿಂದಾ ಬಂದಾ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಶಾರುಖ್ ಖಾನ್ 1000ಕ್ಕೂ ಹೆಚ್ಚು ನರ್ತಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಆಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ಸಹ ಅಭಿನಯಿಸಿದ್ದಾರೆ.
ಹಾಡು ಬಿಡುಗಡೆಯಾದ 19 ಗಂಟೆಯ ಒಳಗೆ 2,80,73,838 ವ್ಯೂಸ್ ಬಂದಿದ್ದು, ಜಿಂದಾ ಬಂದಾ ಹಾಡು ದೊಡ್ಡದಾಗಿ ಸದ್ದು ಮಾಡಿದೆ. ಇದೇ ವರ್ಷದ ಸೆಪ್ಟಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಈ ಚಿತ್ರದ ನಿರ್ಮಾಣ ಗೌರಿ ಖಾನ್, ಸಹ-ನಿರ್ಮಾಣ ಗೌರವ್ ವರ್ಮಾ, ಡಿಒಪಿ ಜಿಕೆ.ವಿಷ್ಣು, ಎಡಿಟರ್ ರೂಬೆನ್, ಪ್ರೊಡಕ್ಷನ್ ಡಿಸೈನರ್ ಆಗಿ ಟಿ ಮುತ್ತುರಾಜ್ ಕೆಲಸ ನಿರ್ವಹಿಸಿದ್ದಾರೆ.




