ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಗಳಿಸಿದ ಹಣ ಎಷ್ಟು ಕೋಟಿ?

3 years ago

#How #many #crores #RockyAurRaniPremKahani #earn #RARPK #karanjohar #ranaveershingh #aliabhat #bollywood #entertainment

ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಸಿನಿಮಾ ಬಿಡುಗಡೆಯಾಗಿ ಭಾರೀ ಸದ್ದು ಮಾಡ್ತಿದೆ. ರಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಜೋಡಿಯ ಈ ಚಿತ್ರ ನಿನ್ನೆಯ ಭಾನುವಾರ ಒಂದೇ ದಿನ ಬರೋಬ್ಬರಿ 19 ಕೋಟಿ ಗಳಿಸಿದೆ. ಬಿಡುಗಡೆಯಾಗಿ ಮೂರು ದಿನಕ್ಕೆ ಚಿತ್ರದ ಒಟ್ಟು ಗಳಿಕೆ 46 ಕೋಟಿಗೆ ಏರಿಕೆಯಾಗಿದೆ.

ಕರಣ್ ಜೋಹರ್ ಬಹಳ ವರ್ಷಗಳ ನಂತರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಕೂಡ ಅಭಿನಯಿಸಿರುವುದು ವಿಶೇಷ. ಪ್ರೇಮ, ಭಾವನಾತ್ಮಕ ಸನ್ನಿವೇಶ ಮತ್ತು ಕುಟುಂಬವನ್ನು ಒಳಗೊಂಡಿರುವ ಕಥಾಹಂದರದ ಸಿನಿಮಾ ಬಾಲಿವುಡ್ ಸಿನಿಪ್ರಿಯರನ್ನು ಆಕರ್ಷಿಸಿದೆ. ನೀವು ಈ ಸಿನಿಮಾ ನೋಡಿದ್ದೀರಾ?

ನಿಮ್ಮ ಹತ್ತಿರದಲ್ಲೆಲ್ಲಾದರೂ ಚಿತ್ರಮಂದಿರದಲ್ಲಿ ಈ ಚಿತ್ರದ ಪ್ರದರ್ಶನವಿದ್ದರೆ ನೀವೂ ಕೂಡ ನೋಡಬಹುದು…

Leave a Reply