ದಾವಣಗೆರೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾ ಕಚೇರಿ ಬಳಿ, ಸ್ವತಂತ್ರ, ಸ್ವಾಭಿಮಾನಿ ರಾಜಕಾರಣದ 16 ವರ್ಷಗಳನ್ನು ಪೂರೈಸಿ 17ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮಾಡಲಾಯಿತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಎ ಆರ್ ತಾಹೀರ್, 16 ವರ್ಷಗಳ ಪ್ರತಿರೋಧ, ದಬ್ಬಾಳಿಕೆ ಹೊರತಾಗಿ ನಾವು ಸದೃಢವಾಗಿ ನಿಂತಿದ್ದೇವೆ. ದೇಶವು ಇದುವರೆಗೆ ಕಂಡ ಅತ್ಯಂತ ಭ್ರಷ್ಟ ದಬ್ಬಾಳಿಕೆಯ ನಿರಂಕುಶ ಆಡಳಿತ ಒಂದರ ನೆರಳಿನಲ್ಲಿ ಇಂದು ನಾವು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 17ನೆ ಸ್ಥಾಪನ ದಿನವನ್ನು ಆಚರಿಸುತ್ತಿದ್ದೇವೆ ಎಂದರು.
16 ವರ್ಷಗಳ ಹಿಂದೆ 2009 ಜೂನ್ 21ರಂದು ಪಕ್ಷವು ದಮನಿತರ ರಾಜಕೀಯ ಶಕ್ತಿಯಾಗಿ ಹುಟ್ಟಿತು. ಹೋರಾಟ, ತ್ಯಾಗ, ನ್ಯಾಯ ಸಮಾನತೆ, ಧರ್ಮನಿರಪೇಕ್ಷತೆ, ಎಂಬ ಅಡಿಗಲ್ಲುಗಳ ಮೇಲೆ ಸ್ಥಾಪಿಸಲ್ಪಟ್ಟ ಈ ಪಕ್ಷವು ಇಂದು ಕೂಡ ತನ್ನ ಮೂಲ ತತ್ವಗಳಲ್ಲಿ ದೃಢವಾಗಿ ನಿಂತಿದೆ. ಆದರೆ ಇವತ್ತು, ಈ ತತ್ವಗಳು ಅಪಾಯದಲ್ಲಿವೆ ಎಂದರು.
ಇಂದಿನ ಆಡಳಿತ ವರ್ಗವು ಜಾತ್ಯತೀತ ಮುಖವಾಡ ಧರಿಸಿಕೊಂಡು ಚುನಾವಣಾ ನಿರಂಕುಶ ಅಧಿಕಾರದ ಮೂಲಕ ಭಿನ್ನ ಧ್ವನಿಗಳನ್ನು ಅಡಗಿಸುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿವೆ. ಮತ್ತು ಕೇಂದ್ರೀಯ ಏಜೆನ್ಸಿಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೇಟೆಯಾಡುತ್ತಿವೆ. ಈ ನಿರಂಕುಶಾಧಿಕಾರವನ್ನು ಕೊನೆಗೊಳಿಸಲು, ಎಸ್ ಡಿ ಪಿ ಐ ಪಕ್ಷದ ತತ್ವಗಳನ್ನು ಗಟ್ಟಿಗೊಳಿಸಲು ಮತ್ತು ಅಧಿಕಾರವನ್ನು ಜನರೊಡೆಗೆ ತೆಗೆದುಕೊಂಡು ಹೋಗಲು ಕಟ್ಟಿಬದ್ಧರಾಗಬೇಕೆಂದು ಕರೆ ನೀಡಿದರು.
ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಶೋಷಿತ ದಮನಿತ ವರ್ಗಗಳ ಪರ ಹೋರಾಟ ಮಾಡುವ ನಾವು ಸದಾ ಜನರ ಸಂಕಷ್ಟಗಳಿಗೆ ಮಿಡಿಯುತ್ತೇವೆ. ಆದರೆ ನಾವು ಈಗ ಹೋರಾಟ ಪ್ರತಿಭಟನೆ, ಇವೆಲ್ಲರ ಜೊತೆಗೂ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನ್ಯಾಯ ಬದ್ಧ ಹಕ್ಕುಗಳನ್ನು ಜನರಿಗೆ ತಲುಪಿಸಲು, ಹಸಿವು ಮುಕ್ತ ಸ್ವಾತಂತ್ರ ಭಯಮಕ್ತ ಸ್ವಾತಂತ್ರ, ಎಂಬ ಚಳುವಳಿಯನ್ನು ಸ್ಥಳೀಯ ಸಂಸ್ಥೆಗಳಾದ, ಪಂಚಾಯಿತಿ, ಕಾರ್ಪೊರೇಷನ್ ಹಾಗೂವಿಧಾನಸಭೆ, ಮತ್ತು ಲೋಕಸಭೆಯಲ್ಲೂ ನಮ್ಮ ಧ್ವನಿಯನ್ನು ಮೊಳಗಿಸಲು ನಮ್ಮ ಪಕ್ಷವನ್ನು ಮನೆಮನೆಗು ತಲುಪಿಸಲುವಂತೆ ಕಾರ್ಯನಿರ್ವಹಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಮೋಹಸಿನ್, ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಜಬಿ ಆಝಾದ್ ನಗರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಏಜಾಜ್ ಅಹಮದ್ ಮತ್ತು ಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಇತರರು ಹಾಜರಿದ್ದರು.




