ಸಿದ್ದರಾಮಯ್ಯ ಅವಧಿಯಲ್ಲಿ ಹಗರಣ ನಡೆದ ಆರೋಪ

5 years ago

ತನಿಖೆಗೆ ಮನವಿ ಮಾಡಿದ ಎನ್.ಆರ್.ರಮೇಶ್

ಬೆಂಗಳೂರು: 2013-18 ರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ರಸ್ತೆಗಳ ಅಭಿವೃದ್ಧಿ ಕಾರ್ಯಗಳು, ರಾಜಕಾಲುವೆ ಅಭಿವೃದ್ಧಿ / ಪುನಶ್ಚೇತನ ಕಾರ್ಯ, 110 ಹಳ್ಳಿಗಳ ಅಭಿವೃದ್ಧಿ ಕಾರ್ಯ, ತ್ಯಾಜ್ಯ ಸಂಸ್ಕರಣಾ ಘಟಕಗಳ ಅಭಿವೃದ್ಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ಮತ್ತು ನೆಲದಡಿಯ ಡಸ್ಟ್ ಬಿನ್ ಗಳ ಅಳವಡಿಕೆ ಕಾರ್ಯಗಳ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಸುಮಾರು ₹ 34,700 ಕೋಟಿ ಮೊತ್ತದ ಕಾಮಗಾರಿಗಳ ಹೆಸರಿನಲ್ಲಿ ಶೇ. 50 ಕ್ಕೂ ಹೆಚ್ಚು ಅನುದಾನಗಳನ್ನು ಲೂಟಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದರು.

ಈ ಹಗರಣಗಳಿಗೆ ಸಂಬಂಧಿಸಿದಂತೆ ಸುಮಾರು 4,300 ಪುಟಗಳ ದಾಖಲೆಗಳನ್ನು ಎನ್.ಆರ್.ರಮೇಶ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು.

ಜೊತೆಗೆ ಸಿದ್ದರಾಮಯ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್, NUHM, ಸಮಾಜ ಕಲ್ಯಾಣ ಇಲಾಖೆಯ ಹಾಸಿಗೆ – ದಿಂಬು, ವಿಶ್ವೇಶ್ವರಯ್ಯ ಜಲ ನಿಗಮದ, ಕಾವೇರಿ ನೀರಾವರಿ ನಿಗಮದ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ, PWD ಇಲಾಖೆಯ, BDA ನ ಬದಲಿ ನಿವೇಶನಗಳ ಮತ್ತು ಬಿಬಿಎಂಪಿ TDR ಸೇರಿದಂತೆ 97 ಯೋಜನೆಗಳಲ್ಲಿ ಹಗರಣ ನಡೆದಿದೆ ಎಂದಿರುವ ಅವರು, ಅವುಗಳಿಗೆ ಸಂಬಂಧಿಸಿದ ಸುಮಾರು 1,17,000 ಪುಟಗಳ ದಾಖಲೆಗಳನ್ನು ಒಳಗೊಂಡ Pen drive ಅನ್ನೂ ಸಹ ನೀಡಿದ್ದಾರೆ.

ಮೇಲ್ಕಂಡ ಹಗರಣಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳ ಆದೇಶಗಳನ್ವಯ ED, CBI, CID, ACB ಮತ್ತು BMTF ಗಳಲ್ಲಿ ಒಟ್ಟು 21 ಮಂದಿ ಅಂದಿನ ಸಚಿವರು / ಶಾಸಕರ ವಿರುದ್ಧ, 06 ಮಂದಿ ಬಿಬಿಎಂಪಿ ಸದಸ್ಯರ ವಿರುದ್ಧ, 114 ಮಂದಿ ಅಧಿಕಾರಿಗಳು ಮತ್ತು 97 ಮಂದಿ ಗುತ್ತಿಗೆದಾರರ ವಿರುದ್ಧ FIR ಗಳು ದಾಖಲಾಗಿದ್ದ ವಿವರಗಳನ್ನೂ ಸಹ ನೀಡಿದರು.

Leave a Reply