ಮೈಸೂರಿನ ಕನ್ನಡ ಶಾಲೆ ಉಳಿಸಲು ಬೆಂಗಳೂರಿನಲ್ಲಿ ಧರಣಿ

5 years ago

ಬೆಂಗಳೂರು: ಮೈಸೂರಿನ ಸಾಹಿತಿಗಳು, ಹೋರಾಟಗಾರರು ಬೆಂಗಳೂರಿನಲ್ಲಿ ಮೈಸೂರಿನ ಕನ್ನಡ ಶಾಲೆ ಉಳಿಸುವ ಪರವಾಗಿ ಪ್ರತಿಭಟನೆ ನಡೆಸಿದರು.  ಮೈಸೂರು ಮಹಾರಾಣಿ ಅವರು ಸ್ಥಾಪಿಸಿದ ೧೪೦ ವರ್ಷದಷ್ಟು ಹಳೆಯದಾದ ಹೆಣ್ಣುಮಕ್ಕಳ ಕನ್ನಡ ಶಾಲೆ ಶ್ರೀರಾಮಕೃಷ್ಣ ಮಠದ ವಶಕ್ಕೆ ಹೋಗಿದೆ. ಸ್ವಾಮಿವಿವೇಕಾನಂದರು ಅಲ್ಲಿಗೆ ಭೇಟಿ ನೀಡಿದರು ಎಂಬ ಒಂದೇ ಕಾರಣಕ್ಕೆ ಆ ಶತಮಾನದ ಶಾಲೆ ಕೆಡವಿ ಅಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಶ್ರೀರಾಮಕೃಷ್ಣ ಮಠದವರ ಅಪೇಕ್ಷೆ!

ಇದನ್ನು ವಿರೋಧಿಸಿ ಹಲವು ವರ್ಷ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅದಕ್ಕೆ ಬೆಂಬಲವಾಗಿ ಕವಿ, ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್, ಶೇಖರಗೌಡ ಮಾಲಿಪಾಟೀಲ, ಪ್ರೊ. ಬರಗೂರು ರಾಮಚಂದ್ರಪ್ಪ, ಲಲಿತಾನಾಯಕ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ದ್ವಾರನಕುಂಟೆ ಪಾತಣ್ಣ, ಬೂದನೂರು ಪುಟ್ಟಸ್ವಾಮಿ, ಬಚ್ಚೇಗೌಡ, ಅನೇಕ ಕನ್ನಡಪರ ಸಂಘಟನೆಗಳು, ಸಿ.ಕೆ. ರಾಮೇಗೌಡ, ಶ್ರೀಧರ್, ದಲಿತ ಸಂಘರ್ಷ ಸಮಿತಿಯ ಮಿತ್ರರು, ಮೈಸೂರಿನ ಇದರ ನಾಯಕತ್ವ ವಹಿಸಿದ ಪ. ಮಲ್ಲೇಶ, ಸ.ರ. ಸುದರ್ಶನ, ಮಡ್ಡಿಕೆರೆ ಗೋಪಾಲ, ಡಿ. ಹೊಸಳ್ಳಿ ಶಿವು ಮೊದಲಾದವರು ಬೆಂಗಳೂರಿನ ಮೌರ್ಯ ವೃತ್ತ – ಗಾಂಧಿ ಪ್ರತಿಮೆ ಬಳಿ ಧರಣಿಯಲ್ಲಿ ಭಾಗಿಯಾದರು.

Leave a Reply