ಮೋದಿ ಮತ್ತು ಅಮಿತ್ ಶಾ ಅವರಿಂದ ಬೇಹುಗಾರಿಕೆ: ರಾಹುಲ್ ಗಾಂಧಿ

5 years ago

ದೆಹಲಿ: ಪೆಗಾಸಸ್ ಅನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಕರ್ನಾಟಕ ರಾಜಕಾರಣಕ್ಕೂ ಇದನ್ನು ಬಳಸಲಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದರು.

ದೆಹಲಿ ವಿಜಯ್ ಚೌಕ್ ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತಾಡಿದ ಅವರು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪೆಗಾಸಸ್ ಗೂಢಚರ್ಯೆ ಕುರಿತು ತನಿಖೆ ನಡೆಸಬೇಕು. ಗೃಹ ಸಚಿವ ಅಮಿತ್ ಶಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇಸ್ರೇಲ್ ನಲ್ಲಿ ಪೆಗಾಸಸ್ ಅನ್ನು ಭಯೋತ್ಪದಾದನೆ ನಿಗ್ರಹ ಹಾಗೂ ದೇಶರಕ್ಷಣೆಯ ಸುಲುವಾಗಿ ಬಳಸಲಾಗುತ್ತದೆ. ಆದರೆ ನಮ್ಮದೇಶದಲ್ಲಿ ಈ ಅಸ್ತ್ರವನ್ನು ದೇಶದೊಳಗಿನ ಸಂಸ್ಥೆಗಳ ವಿರುದ್ಧ ಬಳಸಲಾಗಿದೆ. ಜೊತೆಗೆ, ನನ್ನ ಫೋನ್ ಕರೆಗಳನ್ನು ಕದ್ದು ಆಲಿಸಲಾಗಿದೆ ಎಂದು ಕೂಡ ಅವರು ಹೇಳಿದರು.

ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶ ಮತ್ತು ದೇಶದ ಸಂಸ್ಥೆಗಳ ವಿರುದ್ಧ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Leave a Reply