ಸಾವರ್ಕರ್ ಭಾವಚಿತ್ರ ವಿವಾದ: ವಾಗ್ವಾದ ಸಾಧ್ಯತೆ

3 years ago

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಾಳೆಯಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು, ಕಲಾಪ ಆರಂಭಕ್ಕೂ‌ ಮುನ್ನ ಸಭಾಧ್ಯಕ್ಷ‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಲವು ನಾಯಕರ ಭಾವಚಿತ್ರ ಅಳವಡಿಸಲಿದ್ದಾರೆ.

ಇದರಲ್ಲಿ ವಿ.ಡಿ. ಸಾವರ್ಕರ್ ಸೇರಿ ಏಳು ಮಂದಿ ಮಹನೀಯರ ಭಾವಚಿತ್ರಗಳು ಅನಾವರಣಗೊಳ್ಳಲಿವೆ.

ಸಭಾದ್ಯಕ್ಷರ ಸಚಿವಾಲಯ ವಿಧಾನಸಭೆಯ ಗೋಡೆಗಳ ಮೇಲೆ ಸಾವರ್ಕರ್‌ ಭಾವಚಿತ್ರ ಸೇರಿದಂತೆ 7 ಪ್ರಮುಖ ಗಣ್ಯರ ಫೋಟೋಗಳನ್ನು ಅಳವಡಿಸಿದೆ. ಇವುಗಳಿಗೆ‌ ಕವರ್ ಹಾಕಿ ಮುಚ್ಚಿಡಲಾಗಿದೆ. ಇನ್ನು ಸಾವರ್ಕರ್‌ ಫೋಟೋವನ್ನು ಸ್ಪೀಕರ್ ಆಸನದ ಎಡಭಾಗದಲ್ಲಿ ಅಳವಡಿಸಿದ್ದು, ಸಭಾಧ್ಯಕ್ಷರೇ ನಾಳೆ ಅನಾವರಣ ಮಾಡಲಿದ್ದಾರೆ.

ಇನ್ನು ಭಾವಚಿತ್ರ ಅನಾವರಣೆ ವೇಳೆ ಗಲಾಟೆಯಾಗುವ ಸಾಧ್ಯತೆ ಕಂಡುಬರುತ್ತಿದೆ. ಸಾವರ್ಕರ್ ಭಾವಚಿತ್ರ ಅಳವಡಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿವೆ. ಕಲಾಪ‌ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸದೆ ಸ್ಪೀಕರ್ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು, ಸದನದಲ್ಲಿ ತಮ್ಮ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮತ್ತೊಂದೆಡೆ ಸಾರ್ವಕರ್ ಸ್ವಾತಂತ್ರ ಹೋರಾಟಗಾರ ಅವರ ಭಾವಚಿತ್ರ ಅಳವಡಿಸಿದರೆ ತಪ್ಪೇನು ಎಂದು ಬಿಜೆಪಿ ನಾಯಕರು ತಿರುಗೇಟು ನೀಡಲು ಸಿದ್ಧರಾಗಿದ್ದಾರೆ.

Leave a Reply