ಜಸ್ಟ್ ಆಸ್ಕಿಂಗ್
ಭಗತ್ ಸಿಂಗ್ ನಮ್ಮ ನಾಯಕ ಎನ್ನುವ ಸಂಘಿಗಳೇ…….
RSS ಗೆ ಭಗತ್ ಸಿಂಗ್ ಆದರ್ಶವಲ್ಲ ಎಂದು ಘೋಷಿಸಿದ್ದ ನಿಮ್ಮ ಪಿತಾಮಹ ಗೋಲ್ವಳ್ಕರ್ ಅನ್ನು ಧಿಕ್ಕರಿಸುವಿರಾ…..?
ಆತ್ಮೀಯರೇ,
ಸ್ವಾತಂತ್ರ್ಯ ಹೋರಾಟದಲ್ಲಾಗಲೀ, ಸಾಮಾಜಿಕ ನ್ಯಾಯದ ಹೋರಾಟಗಳಲ್ಲಾಗಲೀ, ಎಂದೂ ಭಾಗವಹಿಸದ, ಎಂದೂ ಪ್ರಭುತ್ವವನ್ನು ಎದುರುಹಾಕಿಕೊಳ್ಳದ…
…ಒಂದೊಮ್ಮೆ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರೆ ಕಾಲಿಗೆ ಬಿದ್ದು ಕ್ಷಮೆಕೋರಿ ಹೊರಬರುವ ಇತಿಹಾಸವುಳ್ಳ RSS, ಇದೀಗ ತಾನೂ ಸ್ವಾತಂತ್ರ್ಯ ಹೋರಾಟದ ವೀರ ಎಂದೂ ತೋರಿಸಿಕೊಳ್ಳಲು ಇಲ್ಲದ ಇತಿಹಾಸ ಸೃಷ್ಟಿಸುತ್ತಿದೆ.
ಅದಕ್ಕಾಗಿ ಹಿಂದೊಮ್ಮೆ ಭಗತ್ ಸಿಂಗ್ ತಮ್ಮವನೇ ಎಂದು ತೋರಿಸಿಕೊಳ್ಳಲು, ಭಗತ್ ಸಿಂಗಿಗೂ ಶರ್ಟ್ ಕಳಚಿ ಜನಿವಾರ ಹಾಕಲು ಪ್ರಯತ್ನಿಸಿತ್ತು. ಆದರೆ ಭಗತ್ ಸಿಂಗ್ ಬದುಕು ಮತ್ತು ಬರಹಗಳು ಎಷ್ಟು ಪಾರದರ್ಶಕ ಹಾಗೂ ಕ್ರಾಂತಿಕಾರಿಯಾಗಿತ್ತೆಂದರೆ, RSS ತಂತ್ರ ಈಡೇರಲಿಲ್ಲ…
ಆದರೆ ಭಗತ್ ಸಿಂಗ್ ಬಗ್ಗೆ RSS ನ ಅಸಲೀ ಅಭಿಪ್ರಾಯವೇನಿತ್ತು?
ಅದನ್ನು RSS ನ ಎರಡನೇ ಸರಸಂಘ ಚಾಲಕ ಗೋಲ್ವಾಲ್ಕರ್ ಅವರು ತಮ್ಮ Bunch Of Thoughts ನಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ.
1996ರಲ್ಲಿ ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನ ಪ್ರಕಟಿಸಿರುವ “Bunch Of Thoughts” ನ ಪುಟ 282-283 ರಲ್ಲಿ ಭಗತ್ ಸಿಂಗ್ ಅವರ ಬಗ್ಗೆ ಈ ಕೆಳಗಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ:
“..ಭಗತ್ ಸಿಂಗ್ ಅಂತವರನ್ನು ನಮ್ಮ ಸಮಾಜದಲ್ಲಿ ಆದರ್ಶವೆಂದು ಪರಿಗಣಿಸಲಾಗದು.”
” ….ಮನುಷ್ಯ ಹುತಾತ್ಮನಾಗುವುದೇ ಒಬ್ಬ ಮನುಷ್ಯ ತಲುಪಲು ಬಯಸಬಹುದಾದ ಔನ್ನತ್ಯ ಎಂದು ನಾವು ಭಾವಿಸುವುದಿಲ್ಲ.”
….ಏಕೆಂದರೆ ಅಂತಿಮವಾಗಿ ಅವರು ತಮ್ಮ ಆದರ್ಶವನ್ನು ಸಾಧಿಸುವಲ್ಲಿ ಅವರು ವಿಫಲರಾಗಿರುತ್ತಾರೆ. ಮತ್ತು ವೈಫಲ್ಯವು ಅವರಲ್ಲಿರುವ ಮಾರಣಾಂತಿಕ ಲೋಪಗಳಿದ್ದವೆಂಬುದನ್ನೇ ಸಾಬೀತುಮಾಡುತ್ತದೆ”
“…..ಜೀವನದಲ್ಲಿ ವಿಫಲರಾದವರಲ್ಲಿ ಏನೋ ಒಂದು ಐಬು ಇರಲೇ ಬೇಕೆಂಬುದು ಸ್ಪಷ್ಟ.”
“……ಹೀಗೆ ಸೋತವರು ಬೇರೆಯವರಿಗೆ ಹೇಗೆ ಬೆಳಕನ್ನು ತೋರಬಲ್ಲರು? ಯಶಸ್ಸಿನ ಕಡೆಗೆ ಮುನ್ನೆಡೆಸಬಲ್ಲರು?”
(M. S. Golwalkar, Bunch of Thoughts, Sahitya Sindhu, Bangalore, 1996, p. 283)
ಇದು RSS ನ ಆದರ್ಶ, ವಿಜಯ, ವೀರತ್ವ ಹಾಗೂ ಸೋಲುಗಳ ವ್ಯಾಖ್ಯಾನ..
ಯಾವಾಗಲೂ ಗೆಲ್ಲಬೇಕೆಂದರೆ ಸದಾ ಗೆಲ್ಲುವ ಪಕ್ಷದ ಕಡೆ ಇರಬೇಕು.
ಅಂದರೆ ತನ್ನ ಪಕ್ಷ ಸೋಲುತ್ತದೆ ಎಂದಕೂಡಲೇ ಗೆಲ್ಲುವ ಕಡೆ ಸೇರಿಕೊಳ್ಳಬೇಕು..ಅಲ್ಲವೇ?
ಅಂದ ಹಾಗೆ ಸಾವರ್ಕರ್ ವೀರನಾಗಿದ್ದು ಹೀಗೆ ಅಲ್ಲವೇ?
ಜಸ್ಟ್ ಆಸ್ಕಿಂಗ್
– ಶಿವಸುಂದರ್, ಸಾಮಾಜಿಕ ಹೋರಾಟಗಾರರು




