ಸಮತೆಯ ತತ್ವಕ್ಕೆ ವಿರುದ್ಧವಾದ ಸನಾತನ ಧರ್ಮ ಎಂದರೆ.. Anti Constitution..

3 years ago

#SanatanaDharma #against #principle #equality #AntiConstitution #arunjaladakudligi #indiastandwithudaystalin

ವಿಜ್ಞಾನದ ಸೂತ್ರವಾದ ವಿಚಾರ- ತರ್ಕ-ಪ್ರಯೋಗ-ಫಲಿತಾಂಶಕ್ಕೆ  ವಿರುದ್ಧವಾಗಿ ವಿಚಾರವಿಲ್ಲದ, ತರ್ಕಕ್ಕೆ ಒಳಪಡದ, ಪ್ರಶ್ನೆ ಮಾಡುವುದನ್ನು ವಿರೋಧಿಸುವ, ಪ್ರಯೋಗಕ್ಕೆ ಒಳಗಾಗಿ ತನ್ನನ್ನು ಪರೀಕ್ಷಿಸಿಕೊಳ್ಳಲು ಸಿದ್ಧವಿರದ  ಅನುಭವಕ್ಕೆ ಬಾರದ-ಕಾಣದ-ಮುಟ್ಟಲಾರದ-ಸ್ಪರ್ಷಕ್ಕೂ ಸಿಗದ ಅಮೂರ್ತ-ಅದೃಶ್ಯ-ಅತಾರ್ಕಿಕ ಊಹಾತ್ಮಕವಾದ ಮೌಢ್ಯದ ನಂಬಿಕೆಗಳ ಮೊತ್ತವೇ ‘ಸನಾತನ ಧರ್ಮ’  ಹಾಗಾಗಿ ಸನಾತನ ಧರ್ಮ ಆಧುನಿಕ ವಿಜ್ಞಾನಕ್ಕೆ ವಿರುದ್ಧವಾದುದು. ಹಾಗಾಗಿಯೇ ಬಾಬಾ ಸಾಹೇಬರು ಹಿಂದೂ ಧರ್ಮದ ಒಗಟುಗಳನ್ನು ಬಿಡಿಸಿ  ಅಡಗಿಸಿದ್ದ ಸನಾತನತೆಯ ಕೊಳಕು ಮೌಢ್ಯವನ್ನು ಒಡೆದು ತೋರಿದರು.

ಇಂತಹ ವಿಜ್ಞಾನದ ನೆಲೆಗಟ್ಟಿನ ಮೇಲೆ ರಚಿತವಾದ ಭಾರತದ ಸಂವಿಧಾನಕ್ಕೂ ಸನಾತನ ಧರ್ಮ ವಿರುದ್ಧವಾದುದು. ಒಂದರ್ಥದಲ್ಲಿ ಸಂವಿಧಾನ ವಿರೋಧಿ ಸಂಗತಿಗಳೇ ಸನಾತನ ಧರ್ಮದಲ್ಲಿ ತುಂಬಿವೆ.. ಹೀಗಾಗಿ ಸನಾತನ ಧರ್ಮದ ಬಗ್ಗೆ ಆಡಿದ ಉದಯನಿಧಿ ಸ್ಟ್ಯಾಲಿನ್ ಅವರ ಮಾತುಗಳು ಪರೋಕ್ಷವಾಗಿ ಕುವೆಂಪು ಹೇಳುವ ವಿಜ್ಞಾನ ದೀವಿಗೆ ಹಚ್ಚುವ ಕಡೆಗಿದೆ.. ಮತ್ತೊಂದೆಡೆ ಸಂವಿಧಾನವನ್ನು ರಕ್ಷಿಸಬೇಕಾದ ಕಾಲದ ತುರ್ತಿನ ನೆಲೆಯಲ್ಲೂ ಸನಾತನ ಧರ್ಮ ನಾಶವಾಗಬೇಕು ಎಂದಿದ್ದಾರೆ.

ಉದಯನಿಧಿ ಅವರಿಗೆ ಪೆರಿಯಾರ್ ಆದಿಯಾದ ವೈಚಾರಿಕ ಹಿನ್ನೆಲೆಯಿದೆ. ಅಂತೆಯೇ ರಾಜಕಾರಣಿ ಆಗುವ ಮೊದಲು ಸ್ವತಃ ಒಬ್ಬ ಸಿನೆಮಾ ನಿರ್ಮಾಪಕ ಮತ್ತು ನಟ ಕೂಡ. ಹಾಗಾಗಿ ಕಲಾವಿದನ ಸೂಕ್ಷ್ಮತೆಯೂ ಇದೆ. ಉದಯನಿಧಿ ಅವರು ಆಡಿರುವ ಮಾತು ವೈಜ್ಞಾನಿಕವಾಗಿದೆ ಸಂವಿಧಾನ ಪರವಾಗಿದೆ.

– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು

Leave a Reply