ಬೆಂಗಳೂರು: ಇದೇ ಫೆಬ್ರವರಿ 4 ರಿಂದ ರೂಪೇ ಪ್ರೈಮ್ ವಾಲಿಬಾಲ್ ಲೀಗ್ ಫಾವರ್ಡ್ ಬೈ A23 ಸೀಸನ್ 2 ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ ಪ್ರಬಲ ತಂಡವಾಗಿ ಪ್ರಶಸ್ತಿ ಗೆಲ್ಲಲು ಸಜ್ಜಾಗಿರುವ ಬೆಂಗಳೂರು ತಂಡ ಬೆಂಗಳೂರು ಟೊರ್ಪೆಡೊಸ್.
ಇಂದು ಮಲ್ಲೇಶ್ವರದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ಪೂರ್ವಭಾವಿ ಅಭ್ಯಾಸ ನಡೆಸಿತು. ಕಳೆದ ಸೀಸನ್ ನಲ್ಲಿ ಸೆಮಿಫೈನಲ್ ಪ್ರವೇಶದಿಂದ ಕೇವಲ ಒಂದು ಅಂಕದಿಂದ ಬೆಂಗಳೂರು ಟೊರ್ಪೆಡೊಸ್ ಹಿಂದೆಬಿದ್ದಿತ್ತು.
ಕರ್ನಾಟಕ ಸರ್ಕಾರದ ಪ್ರೋತ್ಸಾಹದಿಂದ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದ ನಿರ್ವಹಣೆಯನ್ನು ಬೆಂಗಳೂರು ಟೊರ್ಪೆಡೊಸ್ ವಹಿಸಿಕೊಂಡಿದೆ. ಈ ಕೇಂದ್ರದಲ್ಲಿ ರಾಜ್ಯದ ಪ್ರತಿಭಾವಂತ ವಾಲಿಬಾಲ್ ಆಟಗಾರರಿಗೆ ಹೆಚ್ಷಿನ ತರಬೇತಿಯನ್ನು ಬೆಂಗಳೂರು ಟೊರ್ಪೆಡೊಸ್ ನೀಡಲಿದೆ. ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಬೆಳೆಯ ಬೇಕೆಂಬ ಉದ್ದೇಶದಿಂದ ಇಬ್ಬರು ಕೋಚ್ ಹಾಗೂ ಓರ್ವ ಫಿಸಿಯೋ ವ್ಯವಸ್ಥೆಯನ್ನು ಮಾಡಲಾಗಿದೆ.
ಬೆಂಗಳೂರು ಟೋರ್ಪೆಡೊಸ್ ತಂಡದ ನಾಯಕ ಪಂಕಜ್ ಶರ್ಮಾ ರವರು ಮಾತನಾಡಿ, ಬೆಂಗಳೂರು ತಂಡದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಆಟಗಾರರು ಇದ್ದಾರೆ. ಹಿಂದಿನ ಬಾರಿ ಒಂದು ಪಾಯಿಂಟ್ ನಿಂದ ಸಮಿಫೈನಲ್ ಗೆ ಏರಲು ಸಾಧ್ಯವಾಗಿರಲ್ಲಿಲ. ಈ ಬಾರಿ ಪೂರ್ವಭಾವಿ ಅಭ್ಯಾಸ, ಸಂಘಟಿತ ಹೋರಾಟ ಮಾಡಲು ನಮ್ಮ ತಂಡ ಸಜ್ಜಾಗಿದೆ ಎಂದರು.
ಒಲಂಪಿಕ್ಸ್ ನಲ್ಲಿ 2 ಬಾರಿ ಚಿನ್ನದ ಪದಕ ಗಳಿಸಿರುವ ಅಮೇರಿಕಾದ ಡೇವಿಡ್ ಲೀ ಇಂದ ಬೆಂಗಳೂರು ತಂಡ ತರಬೇತಿ ಪಡೆಯುತ್ತಿದೆ.
ಟಾರ್ಪಿಡೋಸ್ ತಂಡದಲ್ಲಿ ಅಲಿರಜಾ ಅಬಲೂಚ್, ಸ್ವಿಟೆಲಿನ್ ಸ್ವಿಟನೊವ್, ಟಿ.ಆರ್.ಸೇತು, ಎಂ.ಸಿ.ಮುಜೀಬ್, ಪಿ.ವಿ.ಜಿಷ್ಟು. ಎ.ನಿಸಾಮ್ ಮುಹಮ್ಮದ್, ಸುಧೀರ್ ಶೆಟ್ಟಿ, ಎಂ.ವೈಶಾಖ್ ರೆಂಜಿತ್, ಪಂಕಜ್ ಶರ್ಮಾ, ವಿನಾಯಕ ರೋಖಡೆ, ಇಬಿನ್ ಬೋಸ್ ಬಿ.ಮಿಥುನ್ ಕುಮಾರ್, ತರುಣ್ ಗೌಡ, ಸೃಜನ್ ಶೆಟ್ಟಿ ಇದ್ದಾರೆ. ತಂಡದ ಕೋಚ್: ಡೇವಿಡ್ ಲೀ.




