ಭಾರತದಲ್ಲಿ 147ನೇ ಮಳಿಗೆ ಉದ್ಘಾಟನೆ
ಬೆಂಗಳೂರಿನಾದ್ಯಂತ 40 ಮಳಿಗೆಗಳನ್ನು ತೆರೆಯಲು ಸಿದ್ಧತೆ
ಬೆಂಗಳೂರು: ಭಾರತದ ಪ್ರಮುಖ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್ ಓಕ್ ಫರ್ನಿಚರ್, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ 147ನೇ ಮಳಿಗೆಯನ್ನು ಆರಂಭಿಸುವುದರೊಂದಿಗೆ ಭಾರತದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿದೆ.

ವಿಜಯ್ಸುಬ್ರಮಣ್ಯಂ, ಅಧ್ಯಕ್ಷರು, ರಾಯಲ್‍ಓಕ್ ಫರ್ನಿಚರ್, ಮಥನ್ಸುಬ್ರಮಣ್ಯಂ, ವ್ಯವಸ್ಥಾಪಕ ನಿರ್ದೇಶಕರು, ಮಹೇಶ್ವರಿ ವಿಜಯ್, ನಿರ್ದೇಶಕರು, ಹೆಚ್.ಎಸ್. ಸುರೇಶ್, ರೀಟೈಲ್ಮುಖ್ಯಸ್ಥರು ಮತ್ತು ಪ್ರಶಾಂತ್ಎಸ್ಕೋಟ್ಯಾನ್, ಮುಖ್ಯಸ್ಥರು – ಮಾರಾಟ ಮತ್ತು ವ್ಯಾಪಾರೋದ್ಯಮ ಇವರ ಉಪಸ್ಥಿತಿಯಲ್ಲಿ ಜನಪ್ರಿಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಉಪೇಂದ್ರ ಮಳಿಗೆಯನ್ನು ಉದ್ಘಾಟಿಸಿದರು.

24,000 ಚದರ ಅಡಿಗಳಷ್ಟು ವಿಶಾಲವಾದ ಅಂಗಡಿಯು ಲಿವಿಂಗ್ರೂಮ್‌ಗಳು, ಮಲಗುವ ಕೋಣೆಗಳು, ಊಟದ ಕೋಣೆಗಳು ಮತ್ತು ಹೆಚ್ಚಿನವುಗಳಿಗಾಗಿ ಪೀಠೋಪಕರಣಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಗ್ರಾಹಕರು ಸೋಫಾಗಳು, ಹಾಸಿಗೆಗಳು, ಡೈನಿಂಗ್ಟೇಬಲ್‌ಗಳು, ಕುರ್ಚಿಗಳು, ರೀಕ್ಲೈನರ್‌ಗಳು, ಹಾಸಿಗೆಗಳು, ಒಳಾಂಗಣ ಅಲಂಕಾರಗಳು ಮತ್ತು ಕಚೇರಿ ಮತ್ತು ಹೊರಾಂಗಣ ಪೀಠೋಪಕರಣಗಳ ಸಮಗ್ರಶ್ರೇಣಿಯನ್ನು ಒಳಗೊಂಡಂತೆ ಸೊಗಸಾದ ಮತ್ತು ಕ್ರಿಯಾತ್ಮಕ ವಸ್ತುಗಳನ್ನುನಿರೀಕ್ಷಿಸಬಹುದು. ಮಾಗಡಿ ರಸ್ತೆಯ ಮಳಿಗೆಯು ಬೆಂಗಳೂರು ಪ್ರದೇಶದಲ್ಲಿ ರಾಯಾಲ್‍ಓಕ್‌ನ 29 ನೇಮಳಿಗೆಯಾಗಿದೆ. ಈ ಮಳಿಗೆಯು ಪ್ರತಿವರ್ಷ 1 ಲಕ್ಷಕ್ಕೂ ಹೆಚ್ಚುಸಂದರ್ಶಕರನ್ನುಆಕರ್ಷಿಸುವ ನಿರೀಕ್ಷೆಯಿದೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಯಲ್‍ಓಕ್ಫರ್ನಿಚರ್‌ನ ಅಧ್ಯಕ್ಷ ವಿಜಯ್ ಸುಬ್ರಮಣ್ಯಂ “ನಮ್ಮ ಇತ್ತೀಚಿನ ಮಳಿಗೆಯನ್ನು ಪ್ರಾರಂಭಿಸಲು ನಾವು ಬಹಳ ಉತ್ಸುಕರಾಗಿದ್ದೇವೆ, ಇದು ನಮ್ಮ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಪೀಠೋಪಕರಣಗಳನ್ನು ನೀಡುವ ರಾಯಲ್‍ಓಕ್ನ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ತಂಡವು ದಣಿವರಿಯದೆ ಕೆಲಸ ಮಾಡಿದೆ. ಈ ಮಳಿಗೆಯು ಸೊಗಸಾದ ಮತ್ತು ಕ್ರಿಯಾತ್ಮಕವಾಗಿರುವ ಉತ್ತಮ ಗುಣಮಟ್ಟದ ಪೀಠೋಪಕರಣಗಳ ವ್ಯಾಪಕ ಆಯ್ಕೆಯೊಂದಿಗೆ ನಿಜವಾದ ಅಸಾಧಾರಣ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ ಎಂದರು.

ಗ್ರಾಹಕರನ್ನು ಸ್ವಾಗತಿಸಲು ಮತ್ತು ಅವರಮನೆಗಳನ್ನು ಪೂರ್ಣಗೊಳಿಸಲು ಪರಿಪೂರ್ಣ ವಸ್ತುಗಳನ್ನು ಹುಡುಕಲು ಸಹಾಯ ಮಾಡುವುದಕ್ಕೆ ನಾವು ಎದುರು ನೋಡುತ್ತಿದ್ದೇವೆ. ಮಂಗಳೂರು ರಸ್ತೆ ಮತ್ತು ಕುಣಿಗಲ್ ನಡುವೆ ಇತ್ತೀಚೆಗಷ್ಟೇ ಪ್ರಮುಖ ಕೊಂಡಿಯಾಗಿ ಆರಂಭಗೊಂಡಿರುವುದರಿಂದ ನಮ್ಮ ಮುಂದಿನ ಮಳಿಗೆ ಬಿಡುಗಡೆಗೆ ಮಾಗಡಿ ರಸ್ತೆಯನ್ನು ಆಯ್ಕೆಮಾಡಿಕೊಂಡಿದ್ದೇವೆ. ನಗರದ ಈ ಭಾಗದಲ್ಲಿ ಬಹಳಷ್ಟು ಡೆವಲಪರ್‌ಗಳು ಹೆಚ್ಚು ಹೂಡಿಕೆ ಮಾಡಿರುವುದರಿಂದ ರಿಯಲ್ ಎಸ್ಟೇಟ್‌ನಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ನಾವು ಗಮನಿಸಿದ್ದೇವೆ ಎಂದರು.

ಇದು ಮಾಗಡಿ ರಸ್ತೆ ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿನ ಗ್ರಾಹಕರ ನೆಲೆಯನ್ನು ಪೂರೈಸಲು ಬ್ರ್ಯಾಂಡ್‌ಗೆ ಅವಕಾಶವನ್ನು ಸೃಷ್ಟಿಸುತ್ತದೆ. ಮಾಗಡಿ ರಸ್ತೆಯಲ್ಲಿರುವ ಮಳಿಗೆಯು ಯು.ಎಸ್., ಇಟಲಿ, ವಿಯೆಟ್ನಾಂ, ಟರ್ಕಿ, ಜರ್ಮನಿ, ಮಲೇಷ್ಯಾ ಮತ್ತು ಭಾರತದ ಅತ್ಯುತ್ತಮವಾದ ಮತ್ತು ವಿಶಿಷ್ಟವಾದ ಪೀಠೋಪಕರಣಗಳನ್ನುಒಳಗೊಂಡಿರುವವಿಶೇಷವಾದ ‘7 ದೇಶಗಳಸಂಗ್ರಹ’ವನ್ನುಹೊಂದಿದೆ ಎಂದರು.
ಉಪೇಂದ್ರ ಮಾತನಾಡಿ, ಗುಣಮಟ್ಟ ಮತ್ತು ಗ್ರಾಹಕರ ತೃಪ್ತಿಗಾಗಿ ಕಂಪನಿಯ ಸಮರ್ಪಣೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ನಿಮ್ಮ ಎಲ್ಲಾಪ್ರಯತ್ನಗಳಲ್ಲಿ ನಿಮಗೆ ನಿರಂತರವಾದ ಯಶಸ್ಸು ದೊರೆಯಲೆಂದು ನಾನುಬಯಸುತ್ತೇನೆ ಎಂದು ಶುಭಹಾರೈಸಿದರು.
ವಿಶೇಷವಾದ ಅದ್ವಿತೀಯ ಮಳಿಗೆಗಳೊಂದಿಗೆ, ರಾಯಲ್‍ಓಕ್ ತನ್ನ ಆಧುನಿಕ, ಐಷಾರಾಮಿ ಮತ್ತು ಕೈಗೆಟುಕುವ ಪೀಠೋಪಕರಣಗಳೊಂದಿಗೆ ಯಾವುದೇ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬ್ರ್ಯಾಂಡ್ ತನ್ನ 3 ಮಿಲಿಯನ್ ಗ್ರಾಹಕರ ಜೀವನಶೈಲಿಯ ಅಗತ್ಯಗಳನ್ನು ಪೂರೈಸುತ್ತಿದೆ.
ದೇಶಾದ್ಯಂತ 147 ಅನುಭವಾತ್ಮಕ ಮಳಿಗೆಗಳೊಂದಿಗೆ, ರಾಯಲ್‍ಓಕ್ ಪ್ರಸ್ತುತ ಮುಂಬೈ, ಕೋಲ್ಕತ್ತಾ, ಚೆನ್ನೈ, ರಾಂಚಿ, ನವದೆಹಲಿ, ಲಕ್ನೋ ಮತ್ತು ಅಹಮದಾಬಾದ್‌ನಂತಹ 116 ಕ್ಕೂ ಹೆಚ್ಚು ಸ್ಥಳಗಳಲ್ಲಿ ನೆಲೆಯನ್ನು ಹೊಂದಿದೆ.



