ಕರ್ನಾಟಕ ಸಿಂಹ ಎಂದೇ ಖ್ಯಾತಿ ಪಡೆದಿದ್ದ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದ ಹೆಮ್ಮೆಯ ಸುಪುತ್ರ, ಕೆಚ್ಚೆದೆಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಅವರೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲು ಮತ್ತು ಗಾಂಧೀಜಿ ಅಧ್ಯಕ್ಷತೆ ವಹಿಸಲು ಕಾರಣೀಕರ್ತರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗಂಗಾಧರರಾವ್ ಅವರ ಮುತ್ಸದ್ದಿತನ, ಸಮರ್ಥ ನಾಯಕತ್ವದ ಫಲವಾಗಿ ಬೆಳಗಾವಿ ಇತಿಹಾಸದಲ್ಲಿ ದಾಖಲಾಯಿತು. ಅಂದು ಕಾಂಗ್ರೆಸ್ ಪಕ್ಷದಲ್ಲಿ ಜವಾಹರಲಾಲ್ ನೆಹರು ಅವರಿಗೆ ಸರಿಸಮಾನವಾದ ಅಧಿಕಾರ ಹೊಂದಿದ್ದರು. ಗಂಗಾಧರರಾವ್ ಅವರು ಮನಸ್ಸು ಮಾಡಿದ್ದರೆ ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆಯುತ್ತಿದ್ದರು. ಆದರೆ, ನನ್ನ ಹೋರಾಟ ಮತ್ತು ಸೇವೆ ದೇಶದ ಸ್ವಾತಂತ್ರ್ಯಕ್ಕೆ ಮಾತ್ರ ಸಿಮೀತ ಎಂದು ಹೇಳಿ ಆಧ್ಯಾತ್ಮಿಕತೆ ಕಡೆಗೆ ಸಾಗಿದ ನಿಸ್ವಾರ್ಥಿಯಾಗಿದ್ದರು.
ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಶ್ರೀಮಂತ ಮನೆತನದ ಬಾಲಕೃಷ್ಣ ಮತ್ತು ರಾಧಾಬಾಯಿ ದಂಪತಿಗಳ ಉದರದಲ್ಲಿ 1871ರ ಮಾರ್ಚ 31ರಂದು ಜನಿಸಿದ ಗಂಗಾಧರರಾವ್ ದೇಶಪಾಂಡೆ ಅವರು, ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿ ಸರ್ದಾರ್ಸ್ ಹೈಸ್ಕೂಲ್ ನಲ್ಲಿ ಪಡೆದಿದ್ದಾರೆ. ಪುಣೆ ಡೆಕ್ಕನ್ ಕಾಲೇಜಿನಲ್ಲಿ ಪದವಿ ಮತ್ತು ಬಿಎ ಎಎಲ್ ಬಿ ಪೂರ್ಣಗೊಳಿಸಿದ್ದಾರೆ. ಪತ್ನಿ ಲಕ್ಷ್ಮೀಬಾಯಿ, ಪುತ್ರ ಬಾಲಕೃಷ್ಣ. 1960ರ ಜುಲೈ 30ರಂದು ಗಂಗಾಧರಾವ್ ಅವರು ನಿಧನರಾದರು.
1922ರಲ್ಲಿ ಚರಕ ಸಂಘ, 1937ರಲ್ಲಿ ಹುದಲಿಯಲ್ಲಿ ಗಾಂಧಿಸೇವಾ ಸಂಘ ಸ್ಥಾಪಿಸಿದ್ದರು. ಈಗಲೂ ಖಾದಿ ಗ್ರಾಮೋದ್ಯೋಗ ನೂರಾರು ಜನರಿಗೆ ಉದ್ಯೋಗ ಕೊಟ್ಟಿದೆ. 1920ರಲ್ಲಿ ಬೆಳಗಾವಿಯಲ್ಲಿ ಮುನ್ಸಿಪಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆರಂಭದಲ್ಲಿ ಗಂಗಾಧರಾವ್ ಅವರು, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ಟಿಳಕರ ಅನುಯಾಯಿಯಾಗಿದ್ದರು. ಅವರು ಕಾಲವಾದ ಬಳಿಕ ಮಹಾತ್ಮಾ ಗಾಂಧೀಜಿ ಸಂಪರ್ಕಕ್ಕೆ ಬರುತ್ತಾರೆ. ಗಾಂಧೀಜಿ ಐವರು ಅತ್ಯಾಪ್ತರಲ್ಲಿ ಇವರು ಒಬ್ಬರಾಗುತ್ತಾರೆ. ಅಪ್ಪಟ ಗಾಂಧಿವಾದಿಯಾಗಿದ್ದ ಗಂಗಾಧರರಾವ್ ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಶ್ರೀಮಂತಿಕೆ ಇದ್ದರೂ ಸರಳ ಜೀವನ ನಡೆಸಿದ ಹೆಗ್ಗಳಿಕೆ ಇವರದ್ದು.
ಗಾಂಧೀಜಿ ಮನವೊಲಿಸಿದ ದೇಶಪಾಂಡೆ: ಮಹಾತ್ಮ ಗಾಂಧೀಜಿ ಹಿಂದಿನ ಅಧಿವೇಶನದಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು. ನಾನು ಅಧ್ಯಕ್ಷ ಇರಲಿ, ಬಿಡಲಿ. ಜನ ನನ್ನ ಚಳುವಳಿಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ. ಆದರೆ, ಗಂಗಾಧರರಾವ್ ಅವರು ಮಾತ್ರ ಬಿಡಲಿಲ್ಲ. ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಇತಿಹಾಸ. ಬೆಳಗಾವಿ ಅಧಿವೇಶನದಲ್ಲೂ ಜವಾಹರಲಾಲ್ ನೆಹರು ಮತ್ತು ಗಂಗಾಧರಾವ್ ದೇಶಪಾಂಡೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಹುಟ್ಟೂರಿಗೂ ಗಾಂಧೀಜಿ ಕರೆಸಿದ್ದರು: ತಮ್ಮ ಹುಟ್ಟೂರು ಹುದಲಿಗೂ ಗಾಂಧೀಜಿ ಅವರನ್ನು ಗಂಗಾಧರಾವ್ ಕರೆಸಿದ್ದರು. ಏಳು ದಿನ ಅಲ್ಲಿಯೇ ಬಾಪು ವಾಸ್ತವ್ಯ ಹೂಡಿದ್ದರು. ಗಾಂಧಿ ಸೇವಾ ಸಂಘದ ಸಮ್ಮೇಳನ ಏರ್ಪಡಿಸಲಾಗಿತ್ತು. ಗಾಂಧೀಜಿ ಅವರ ಜೊತೆಗೆ ಡಾ.ಬಾಬು ರಾಜೇಂದ್ರಪ್ರಸಾದ್, ಅಬ್ದುಲ್ ಗಫಾರ್ ಖಾನ್ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಶೌಕತ್ ಅಲಿ, ಸರೋಜಿನಿ ನಾಯ್ಡು, ಹಿರಿಯ ಸಾಹಿತಿಗಳಾದ ಬೆಟಗೇರಿ ಕೃಷ್ಣಶರ್ಮ, ಜಿ. ನಾರಾಯಣ ಸೇರಿ ಅನೇಕ ನಾಯಕರ ದಂಡೇ ಹುದಲಿಗೆ ಬಂದಿತ್ತು. ಇನ್ನು ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತಾ ಗಂಗಾಧರರಾವ್ ದೇಶಪಾಂಡೆ ಧ್ವನಿ ಎತ್ತಿದ್ದರು.




