ಇದು ಯಾವಾಗಲೋ ಘಟಿಸಬೇಕಿತ್ತು. ತಡವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜ ಅವರು ಮಹೇಸ ಜೋಸಿ ಸರ್ವಾಧಿಕಾರ, ದಬ್ಬಾಳಿಕೆ, ಏಕಪಕ್ಷೀಯ ನಿರ್ಧಾರ ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಆಶ್ಚರ್ಯವೇನು ಆಗಿಲ್ಲ! ಅವರು ಎಂದೋ ಹೊರಗೆ ಬಂದಿದ್ದರೆ ಭೇಷ್ ಅನ್ನಬಹುದಿತ್ತು.
ಅದಕ್ಷ ಅಧ್ಯಕ್ಷನ ಎಲ್ಲಾ ತಪ್ಪುಗಳಿಗೆ ಇವರು, ಇನ್ನೊಬ್ಬ ಗೌ. ಕಾರ್ಯದರ್ಶಿ, ಖಜಾಂಚಿ (ಈತನದ್ದು ಅದಕ್ಷನದ್ದು ಗಂಡಾಗುಂಡಿ ವ್ಯವಹಾರ ಇದೆ ಎಂದು ಲೋಕ ಮಾತಾಡುತ್ತಿದೆ! ಅದರ ವಿಚಾರಣೆಯೂ ನಡೆಯಬೇಕು), ಪ್ರಕಟಣಾ ವಿಭಾಗದಿಂದ ಜಂಪ್ ಮಾಡಿ ಬಂದ ಒಕ್ಕಣೆ ನೀಡುವ ವ್ಯಕ್ತಿಯೂ “ಜೋಸಿ ಕೋಟೆ”ಯಿಂದ ಹೊರ ಬಂದರೆ ಒಂಟಿಯಾಗುವ “ಜೋಸಿ” RSS ವಟುಗಳನ್ನಿಟ್ಟುಕ್ಕೊಂಡು ಅದೇಗೆ ಅಧಿಕಾರ ನಡೆಸುತ್ತಾನೆ? ನೋಡಬೇಕು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆಗಲೆ ಜೋಸಿಯ ಕೋಟೆ ಬುಡ ಅಲ್ಲಾಡುತ್ತಿದೆ. ಬೆಂಗಳೂರು, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಮೊದಲಾದೆಡೆ ಜಾಗೃತ ವೇದಿಕೆಯ ಸಾಹಿತಿಗಳು, ಕನ್ನಡಪರ ಸಂಘಟಕರು ಜೋಸಿಯ ದುರಾಡಳಿತದ, ಆರ್ಥಿಕ ಅಶಿಸ್ತಿನ ಬಗ್ಗೆ ಜನಜಾಗೃತಿ ಸಭೆ ನಡೆಸಿ, ಜನಮನಕ್ಕೆ ಹತ್ತಿರವಾಗುತ್ತಿದ್ದಾರೆ.
ರಾಜ್ಯ ಸರ್ಕಾರ ಆಗಲೆ ಜೋಸಿಗೆ ಕೊಟ್ಟ ಸಚಿವ ದರ್ಜೆ ಸ್ಥಾನಮಾನ ವಾಪಾಸು ಪಡೆದಿದೆ. ಇದು ಈತನಿಗೆ ಹಿನ್ನಡೆಯಾಗಿದೆ. ಈಗ ಗೌ.ಕಾರ್ಯದರ್ಶಿ ಪದ್ಮಿನಿ ಅವರು ನಿರ್ಗಮಿಸಿದ್ದಾರೆ. ಮುಂದೆ ಮತ್ತೊಬ್ಬ ಗೌ. ಕಾರ್ಯದರ್ಶಿ ರಾಜಿನಾಮೆ ಕೊಟ್ಟರೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ಅತಿಯಾದ ಕೆಟ್ಟ ಬೈಗುಳ ತಿನ್ನುತ್ತಿರುವವರೇ ಈ ಮಾನ್ಯ ಮತ್ತೊಬ್ಬ ಗೌ. ಕಾರ್ಯದರ್ಶಿಗಳು! ಸ್ವಾಭಿಮಾನ ಒತ್ತೆ ಇಟ್ಟು ದರ್ಪದ ಅಧಕ್ಷನ ಜೊತೆ ಅವರು ಇರಬಾರದು.
ಈ ಅದಕ್ಷ ಕಚೇರಿಯ ನಿಷ್ಠಾವಂತ ಕೆಲಸಗಾರರನ್ನು ಕೆಲಸದಿಂದ ತೆಗೆದಿದ್ದಾನೆ. 30 ವರ್ಷ ದುಡಿದ ದಲಿತ ನೌಕರ ಮಹಿಳೆಯನ್ನು ಅವಮಾನಗೊಳಿಸಿದ್ದಾನೆ.
ಜೋಸಿ ಆಡಳಿತಾವಧಿಯಲ್ಲಿ ಬರಿ “ಬೈಲಾ ತಿದ್ದುಪಡಿ”ಗೆ ಒತ್ತು ನೀಡಿದ್ದು, ತನಗೆ ಆಗದವರಿಗೆ ನೋಟೀಸು ಕೊಟ್ಟು ಆಜೀವ ಸದಸ್ಯತ್ವದಿಂದ ಕಿತ್ತಾಕಿದ್ದು, ತನ್ನ ಅಧಿಕಾರಕ್ಕೆ ಹೆಚ್ಚಿನ ಶಕ್ತಿ ಬರಿಸಿಕೊಂಡಿದ್ದು, ಇವನ ಸಾಧನೆ! ಹಿಂದಿನ ಅಧಿಕಾರಿ ಅಧ್ಯಕ್ಷನೊಬ್ಬನ ಸ್ವಾರ್ಥ ಹಾಗೂ ದುರ್ಬುದ್ಧಿಯ ಪರಿಣಾಮ ಈಗ ಪರಿಷತ್ತಿಗೆ ಈ ದುರ್ಗತಿ ಬಂದಿದೆ. ಮೂರು ವರ್ಷದ ಅಧಿಕಾರದ ಅವಧಿಯನ್ನು ತನ್ನ ಅವಧಿಯಲ್ಲೆ 5 ವರ್ಷ ವಿಸ್ತರಿಸಿಕೊಂಡ ಭಂಡ ಇವನು. ಈ ಮುಖರಹಿತ ವ್ಯಕ್ತಿ ಮತ್ತೆ ಚುನಾವಣೆಗೆ ನಿಲ್ತಾನಂತೆ! ಅವನ ಠೇವಣಿ ಕಳೆಯಲು ಜನ ಕಾತುರರಾಗಿದ್ದಾರೆ.
ಮತ್ತೆ ಜೋಸಿ ವಿಚಾರಕ್ಕೆ ಬರೋದಾದ್ರೆ, ಆರ್ಥಿಕ ಅಶಿಸ್ತು, “ನಾಡೋಜ” ದುರ್ಬಳಕೆ, ಸರ್ವಾಧಿಕಾರ ಧೋರಣೆಗೆ ಸರ್ಕಾರ ಮೂಗುದಾರ ಹಾಕಿ, ಸಹಕಾರ ಕ್ಷೇತ್ರದಿಂದ ವರದಿ ಪಡೆದು ಆದಷ್ಟು ಬೇಗ ಆಡಳಿತಾಧಿಕಾರಿ ನೇಮಿಸುವುದು ಸೂಕ್ತ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಮನವಿ ಮಾಡಲಾಗಿದೆ. ಶುಭದಿನದ ಶುಭ ಸುದ್ದಿಗೆ ಕನ್ನಡ ಜನತೆ ಕಾಯುತ್ತಿದೆ.
– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ, ಪತ್ರಕರ್ತ




