ಬೆಂಗಳೂರು: ಸರ್ಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ ಟಿ ರವಿ, ಮತೀಯ ಆಧಾರದ ಮೇಲೆ ಮೀಸಲಾತಿ ಕೊಡುವುದು ಸಂವಿಧಾನ ವಿರೋಧಿ, ಅಂಬೇಡ್ಕರ್ ಚಿಂತನೆಗೆ ವಿರುದ್ಧವಾದ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ರಚನೆ ವೇಳೆಯೇ ಮತೀಯ ಆಧಾರದ ಮೇಲೆ ಮೀಸಲಾತಿ ಬಗ್ಗೆ ಚರ್ಚೆ ನಡೆಯಿತು. ಮತೀಯ ಆಧಾರದ ಮೇಲೆ ಮೀಸಲಾತಿಗೆ ಅಂಬೇಡ್ಕರ್ ಒಪ್ಪಿಕೊಳ್ಳುವುದಿಲ್ಲ. ಆದರೆ ಇವತ್ತು ಮಾತೆತ್ತಿದರೆ ಸಂವಿಧಾನ, ಅಂಬೇಡ್ಕರ್ ಹೆಸರು ಹೇಳುವವರು ಸಂವಿಧಾನಕ್ಕೂ, ಅಂಬೇಡ್ಕರ್ ಚಿಂತನೆಗೂ ವಿರುದ್ಧವಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ ಎಂದರು.
ಸಂವಿಧಾನ, ಅಂಬೇಡ್ಕರ್ ವಿರೋಧಿಗಳು, ಜಿನ್ನಾನ ಸಮರ್ಥನೆ ಮಾಡೋರು, ಪಾಕಿಸ್ತಾನ ಸಮರ್ಥನೆ ಮಾಡೋರು ಮಾತ್ರ ಇದನ್ನ ಪ್ರಸ್ತಾಪಿಸುತ್ತಾರೆ. ಪಾಕಿಸ್ತಾನದ ಅಪ್ಪಂದಿರಿಗೆ ಹುಟ್ಟಿರೋರು ಮಾತ್ರ ಇಂಥ ಯೋಚನೆ ಮಾಡ್ತಾರೆ. ಸಂವಿಧಾನದ ಮೇಲೆ ನಂಬಿಕೆ ಇರೋರು ಯಾರೂ ಇದನ್ನು ಯೋಚಿಸಲ್ಲ, ಪ್ರಸ್ತಾಪಿಸಲ್ಲ ಎಂದರು.




