ತಲಕಾವೇರಿಯನ್ನು ಜೆರುಸಲೇಮ್ ಮಾದರಿಯಲ್ಲಿ ಕೊಡವರ ಪವಿತ್ರ ಯಾತ್ರಾ ಸ್ಥಳವೆಂದು ಗುರುತಿಸಿ

6 months ago

ಆದಿಮಸಂಜಾತ ಕೊಡವರು 17 ಅಕ್ಟೋಬರ್ 2025ರಂದು ತಲಕಾವೇರಿಯ ಪವಿತ್ರ ಜಲಬುಗ್ಗೆಯಲ್ಲಿ ಶುಭ ಕಾರ್ಯಕ್ರಮವಾದ ತೀರ್ಥೋದ್ಭವವನ್ನು ಆಚರಿಸಲು ಸಜ್ಜಾಗಿದ್ದಾರೆ. ಆನಿಮಿಸ್ಟಿಕ್ ನಂಬಿಕೆಯುಳ್ಳ ಆದಿಮಸಂಜಾತ ಕೊಡವರು ಈ ಪವಿತ್ರ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಎನ್‍ಸಿ (ಕೊಡವ ನ್ಯಾಷನಲ್ ಕೌನ್ಸಿಲ್) ಕೊಡವರ ಆಧ್ಯಾತ್ಮಿಕವಾಗಿ ಮಹತ್ವದ ಮತ್ತು ಕಾನೂನುಬದ್ಧ ಆಕಾಂಕ್ಷೆಗಳನ್ನು ಭಾರತ ಸರ್ಕಾರ (GOI) ಮತ್ತು ಕರ್ನಾಟಕ ಸರ್ಕಾರ (GOK) ಮುಂದೆ ಮಂಡಿಸುತ್ತದೆ.

ಈ ಸಂಬಂಧ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿಗಳಿಗೆ ಜ್ಞಾಪನಾ ಪತ್ರ ರವಾನಿಸಲಾಗಿದೆ.

ಪ್ರಮುಖ ಹಕ್ಕೊತ್ತಾಯಗಳು:

1. ತಲಕಾವೇರಿಯನ್ನು ಜೆರುಸಲೆಮ್ ಮಾದರಿಯಲ್ಲಿ ಕೊಡವರ ಪವಿತ್ರ ಯಾತ್ರಾ ಸ್ಥಳವೆಂದು ಗುರುತಿಸುವುದು:

ಆದಿಮಸಂಜಾತ ಏಕ-ಜನಾಂಗೀಯ ಕೊಡವರು, ಆನಿಮಿಸ್ಟಿಕ್ ನಂಬಿಕೆಯುಳ್ಳವರಾಗಿದ್ದು, ಅವರ ಎಲ್ಲಾ ಜಾನಪದ ಆಚರಣೆಗಳು ಪವಿತ್ರ ಜಲದೇವತೆ ಮತ್ತು ಜೀವನಾಡಿಯಾದ ಕಾವೇರಿ ನದಿಯ ಸುತ್ತ ಸುತ್ತುತ್ತವೆ. ಆದ್ದರಿಂದ, ಸರ್ಕಾರವು ಜೆರುಸಲೆಮ್‍ನಲ್ಲಿರುವ ಯಹೂದಿಗಳ ದೇವಾಲಯ ಮೌಂಟ್ ಮೊರಿಯಾದ ಮಾದರಿಯಲ್ಲಿ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥಯಾತ್ರಾ ಸ್ಥಳವೆಂದು ಗುರುತಿಸಬೇಕು.

2. ಕಾವೇರಿ ನದಿಗೆ ಜೀವರಾಶಿ ಸ್ಥಾನಮಾನ (ಲಿವಿಂಗ್‍ಎಂಟಿಟಿ ವಿತ್ ಲೀಗಲ್ ಪರ್ಸನ್ ಸ್ಥಾನಮಾನ)

ಭರತ ವರ್ಷದ (ಸಿಂಧು, ಗಂಗಾ, ಯಮುನಾ, ಅದೃಶ್ಯ ಸರಸ್ವತಿ, ನರ್ಮದಾ, ಗೋದಾವರಿ ಮತ್ತು ಕಾವೇರಿ) ಏಳು ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ, ದಕ್ಷಿಣ ಭಾರತದ ಎಲ್ಲಾ ಜೀವ ರಾಶಿಗಳಿಗೆ ಜೀವನಾಡಿ/ಜಲಧಾತೆ ಮತ್ತು ನೀರಿನ ಮೂಲವಾಗಿದೆ. ಅದರ ಶಾಶ್ವತ ಜಲ ಮೂಲಗಳನ್ನು ರಕ್ಷಿಸಲು, ಅದರ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಸರ್ಕಾರಗಳು ಕಾವೇರಿ ನದಿಯನ್ನು ಕಾನೂನುಬದ್ಧ ವ್ಯಕ್ತಿ ಸ್ಥಾನಮಾನದೊಂದಿಗೆ ಜೀವಂತ ಅಸ್ತಿತ್ವವೆಂದು ಘೋಷಿಸಬೇಕು.

ನಮ್ಮ ದೈವಿಕ ತಾಯಿ, ಜೀವಸೆಲೆ ನದಿ ಕಾವೇರಿಗೆ ”ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ” ನೀಡುವ ಕುರಿತಾಗಿ ಜಗತ್ತಿನ ಧರ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಸಲುವಾಗಿ ಸಿಎನ್‍ಸಿ (ಕೊಡವ ನ್ಯಾಷನಲ್ ಕೌನ್ಸಿಲ್) 2018 ರಲ್ಲಿ ತಲಕಾವೇರಿ (ಕಾವೇರಿ ನದಿಯ ಜನ್ಮಸ್ಥಳ/ಮೂಲ) ದಿಂದ ಪೂಂಪುಹಾರ್ (ಕಾವೇರಿ ನದಿ ಬಂಗಾಳಕೊಲ್ಲಿಯೊಂದಿಗೆ ಸಂಗಮಿಸುವ ಸ್ಥಳ) ವರೆಗೆ ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡಿತ್ತು.

ಉದಾಹರಣೆಗೆ ನ್ಯೂಜಿಲೆಂಡ್‍ನ ಮಾವೋರಿ ಆದಿಮಸಂಜಾತ ಬುಡಕಟ್ಟು ಜನಾಂಗದವರಿಗೆ ಮಹತ್ವದ ನದಿಯಾದ “ವಂಗನುಯಿ” ನದಿಗೆ 2017 ರಲ್ಲಿ ಕಾನೂನುಬದ್ಧ ವ್ಯಕ್ತಿತ್ವ ನೀಡಲಾಯಿತು.

3. ಕೊಡವಲ್ಯಾಂಡ್‍ಗೆ ಕಾವೇರಿ ನೀರಿನ ಹಂಚಿಕೆ:

ಕಾವೇರಿ ನದಿಯು ಕೊಡವಲ್ಯಾಂಡ್‍ನ ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿ ಶ್ರೇಣಿಯ ಪರ್ವತ ಪ್ರದೇಶದಿಂದ ಒಂದು ಚಿಲುಮೆಯಾಗಿ ಹುಟ್ಟುತ್ತದೆ. ಇದು ಪೂರ್ವಾಭಿಮುಖವಾಗಿ ಹರಿಯುತ್ತದೆ ಮತ್ತು ತಮಿಳುನಾಡಿನ ಪೂಂಪುಹಾರ್‍ನಲ್ಲಿ ಬಂಗಾಳಕೊಲ್ಲಿ/ಸಾಗರದೊಂದಿಗೆ ಸಂಗಮವಾಗುತ್ತದೆ. ಕಾವೇರಿ ನೀರಿನ ವಾರ್ಷಿಕ ಇಳುವರಿ 740 ಟಿಎಂಸಿ (ತೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್) ಅಡಿ, ಅದರಲ್ಲಿ 200 ಟಿಎಂಸಿ ಕೊಡವಲ್ಯಾಂಡ್‍ನ ಕಾನೂನುಬದ್ಧ ಉತ್ಪತ್ತಿ. ಹೆಲ್ಸಿಂಕಿ ಕಾನೂನು (1966) ಪ್ರಕಾರ, ಉತ್ಪಾದಕ ಪ್ರದೇಶವು ಅದರ ಹಕ್ಕಿನ ಪಾಲನ್ನು ಪಡೆಯುತ್ತದೆ. ಆದ್ದರಿಂದ, ಕೊಡವಲ್ಯಾಂಡ್‍ಗೆ ಕಾವೇರಿ ನೀರಿನ ತನ್ನ ಪಾಲನ್ನು ನೀಡಬೇಕು. (ನ್ಯಾಯಮಂಡಳಿಯು ಕರ್ನಾಟಕಕ್ಕೆ 270 ಟಿಎಂಸಿ ನೀಡಿತು ಮತ್ತು ಸುಪ್ರೀಂ ಕೋರ್ಟ್ ತೀರ್ಪು ಹೆಚ್ಚುವರಿಯಾಗಿ 14 ಟಿಎಂಸಿ ನೀಡಿತು.)

ಕೊಡವರನ್ನು ಕೇವಲ ಕರ್ನಾಟಕದ ಅಧೀನ ಪ್ರಜೆಗಳೆಂದು ಪರಿಗಣಿಸಬಾರದು ಅಥವಾ ಕೊಡವ ಪ್ರದೇಶವನ್ನು ಆಕ್ರಮಿತ ಸಂಪನ್ಮೂಲ ಉತ್ಪಾದಿಸುವ ಆಂತರಿಕ ವಸಾಹತುಗಳೆಂದು ಪರಿಗಣಿಸಬಾರದು.

ಹಿನ್ನೆಲೆ: ಕೊಡವ ಸಮುದಾಯದ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗಾಗಿ ಸಿಎನ್‍ಸಿ ನಿರಂತರವಾಗಿ ಶ್ರಮಿಸುತ್ತಿದೆ, ಅವರ ವಿಶಿಷ್ಟ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಜನಾಂಗೀಯ ಪರಂಪರೆಯನ್ನು ಒತ್ತಿಹೇಳುತ್ತದೆ. ಕಾವೇರಿ ನದಿಯೊಂದಿಗೆ ಸಮುದಾಯದ ಆಳವಾದ ಬೇರೂರಿರುವ ಸಂಪರ್ಕವು ಅವರ ಆಚರಣೆಗಳು, ಜಾನಪದ ಮತ್ತು ಆಧ್ಯಾತ್ಮಿಕ ಜೀವನದ ಅಡಿಪಾಯವನ್ನು ರೂಪಿಸುತ್ತದೆ.

ಕೊಡವ ಜನರು, ಅವರ ಪವಿತ್ರ ತಾಣಗಳು ಮತ್ತು ಅವರ ಪೂರ್ವಜರ ಸಂಪನ್ಮೂಲಗಳ ನ್ಯಾಯ, ಸಮಾನತೆ ಮತ್ತು ಸರಿಯಾದ ಮನ್ನಣೆಗಾಗಿ ಸಿಎನ್‍ಸಿಯ ಮನವಿ – ಇದು ಬಹಳ ಕಾಳಜಿ ಮತ್ತು ನ್ಯಾಯಸಮ್ಮತತೆಯ ವಿಷಯವಾಗಿದೆ.
                                                                             
N U Nachappa Codava
BA, LLB, Advocate
Chairman, CNC
Codava National Council
P.B No-09, Madikeri- 571201
Residence: Noorokkanaad Hills, Codavaland
Southwest Karnataka,
India- Bharath, South Asia
Mobile: +919448721200, +919900101833
Email:  mailto:nachappa@codavanationalcouncil.in

Leave a Reply