ಪುನೀತ್ ಮೌಲ್ಯಗಳ ಮೂಲಕ ಜೀವಂತವಾಗಿಡೋಣ: ರಮ್ಯಾ

4 years ago

ಬೆಂಗಳೂರು: ಅಪ್ಪು ಜೊತೆಯಲ್ಲಿ ನಾನು ಕಳೆದ ಬಹಳಷ್ಟು ನೆನಪುಗಳು ಅತ್ಯಮೂಲ್ಯ. ನಿಮ್ಮನ್ನು ನಾವು ಎಂದೆಂದಿಗೂ ನೆನೆಯುತ್ತೇವೆ. ಈ ಕಷ್ಟದ ಸಮಯದಲ್ಲಿ ಭಗವಂತ ಅಶ್ವಿನಿ ಮತ್ತು ಕುಟುಂಬಕ್ಕೆ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮನ್ನು ಅಗಲಿರುವ ಇಂತ ಉನ್ನತ ವ್ಯಕ್ತಿಗೆ ಸಂತಾಪ ಸಲ್ಲಿಸುವ ಸಂದರ್ಭದಲ್ಲಿ ನಾನು ಅವರ ಅಭಿಮಾನಿಗಳ ಜೊತೆ ಇರುವೆನು ಎಂದು ಮಾಜಿ ಸಂಸದೆ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸುವ ಮೂಲಕ ಚಂದನವನ ಪ್ರವೇಶಿಸಿ ರಮ್ಯಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಅಪ್ಪು ಅವರ ಬಗ್ಗೆ ಹಲವರು ಬರೆದ ಎಲ್ಲಾ ಭಾವನಾತ್ಮಕ ಸಂದೇಶಗಳನ್ನು ಓದುತ್ತಿದ್ದೇನೆ ಮತ್ತು ಅವೆಲ್ಲವೂ ಅಕ್ಷರಶಹ ನಿಜ. ಕೆಲವಂತು ನನ್ನ ಕಣ್ಣಲ್ಲಿ ನೀರು ತಂದಿತು. ಅದುವೇ ಪುನೀತ್. ಹೌದು, ಅವರೇ ಅಪ್ಪು…  ಇವುಗಳನ್ನು ಓದಿದಾಗ ನನ್ನಲ್ಲಿ ಮೂಡಿದ ಕೆಲವು ಆಲೋಚನೆಗಳು ಇವು ಎಂದು ಅವರು ಹೇಳಿದ್ದಾರೆ‌.

ಒಬ್ಬ ವ್ಯಕ್ತಿಯನ್ನು ಜೀವಂತವಾಗಿಡಲು ಉತ್ತಮ ಮಾರ್ಗ ಯಾವುದು? ನೆನಪುಗಳಲ್ಲಿ ಅಲ್ಲ, ಏಕೆಂದರೆ ಅದು ಮಾಸಿ ಹೋಗುತ್ತವೆ, ಆದರೆ ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ-ಅವರು ಬದುಕಿದ ರೀತಿಯಲ್ಲಿ ಪ್ರತಿದಿನ ನಾವು ಬದುಕುವುದು. ಅವರಂತೆಯೇ ನಾವು ಪ್ರೀತಿ ಹಾಗೂ ಕರುಣಾಪೂರ್ಣ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಅವರನ್ನು ಜೀವಂತವಾಗಿ ಇಡುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಿನನಿತ್ಯ ನಾವು ಅವರ ವ್ಯಕ್ತಿತ್ವವನ್ನು ಅನುಸರಿಸುವುದರ ಮೂಲಕ ನಾವು ಅವರನ್ನು ನಮ್ಮಲ್ಲಿ ಜೀವಂತವಾಗಿ ಇಡಲು ಸಾಧ್ಯ. ಈ ರೀತಿ ನಾವು ಅವರ ಮೌಲ್ಯಗಳನ್ನು ಮುಂದುವರಿಸಬಹುದು. ನಾವೆಲ್ಲರು ಅಪ್ಪುರನ್ನು ಪ್ರತಿ ದಿನವೂ ಆರಾಧಿಸೋಣ ಎಂದಿದ್ದಾರೆ.

Leave a Reply