ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಹೀಗೆ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಗಾಯ: ರಾಮಲಿಂಗಾರೆಡ್ಡಿ

4 years ago

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಹೀಗೆ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಗಾಯ: ರಾಮಲಿಂಗಾರೆಡ್ಡಿ

ಬೆಂಗಳೂರು: ಬೇಸಿಗೆಯ ಬೇಗೆಯಲ್ಲಿ ಬೆಂದು ಹೋಗಿರುವ ರಾಜ್ಯದ ಜನತೆಗೆ ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ ಹೀಗೆ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಗಾಯ ಮಾಡಿದ್ದರೆ, ಇದೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (KERC) ವಿದ್ಯುತ್ ದರ ಏರಿಕೆಗೆ ಮುಂದಾಗುವ ಮೂಲಕ ಗಾಯದ ಮೇಲೆ ಬರೆಯೆಳೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಲೆಯೇರಿಕೆಯ ಭೂತವು ಜನರ ಬದುಕನ್ನು ಎಲ್ಲಾ ಕ್ಷೇತ್ರಗಳಲ್ಲೂ ಬರ್ಬರವಾಗಿಸುತ್ತಿದ್ದರೆ, ಸರ್ಕಾರ ಮಾತ್ರ ಕೋಮು ದ್ವೇಷವನ್ನು ಜನರಲ್ಲಿ ಬಿತ್ತುತ್ತಾ ಜನರ ಸೌಹಾರ್ದತೆಯ ಬದುಕನ್ನು ವಿಭಜಿಸುವ ನಶೆಯಲ್ಲಿ ಮುಳುಗಿಹೋಗಿದೆ ಎಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ‘ಬೆಲೆಯೇರಿಕೆಯ ಅಲೆಯಲ್ಲಿ’ ಜನರು ಕೊಚ್ಚಿ ಹೋಗುತ್ತಿದ್ದರೆ, ಅಸಮರ್ಥ ಬಿಜೆಪಿ ನಾಯಕರು ಕೋಮು ದಳ್ಳುರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದಿದ್ದಾರೆ.

ಬೆಲೆಯೇರಿಕೆಯ ಬವಣೆಯಿಂದ ಹೊರ ಬರಬೇಕಾದರೆ ಈ ಜನ ವಿರೋಧಿ ಸರ್ಕಾರವನ್ನು ರಾಜ್ಯದ ಪ್ರತಿಯೊಬ್ಬ ಪ್ರಜೆ ತಿರಸ್ಕರಿಸಬೇಕಿದೆ ಎಂದು ಕರೆನೀಡಿದ್ದಾರೆ.

Leave a Reply