ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ವಿಸ್ತರಣೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಇದುವರೆಗೂ 63 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ, ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ, Rahul Gandhi ಅವರೂ ಕೂಡ ತಮ್ಮೆಲ್ಲರ ಶ್ರಮವನ್ನು ಪ್ರಶಂಸಿದ್ದಾರೆ, ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಏಪ್ರಿಲ್ 14ರ ವರೆಗೆ ವಿಸ್ತರಣೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬಹುಮುಖ್ಯ ವಿಷಯವೇನೆಂದರೆ ಒಂದು ಫೋನ್ ನಂಬರ್‌ಗೆ 5 ಜನರನ್ನು ಸದಸ್ಯರನ್ನಾಗಿ ನೊಂದಾವಣೆ ಮಾಡಬಹುದು, ಆ ಅವಕಾಶ ಫೋನ್ ಇರದಂತಹ ಅವರದ್ದೇ ಕುಟುಂಬದ ಇತರ ಸದಸ್ಯರಿಗೆ ಮಾತ್ರ ಮೀಸಲಿರುತ್ತದೆ. ಹೊರಗಿನವರನ್ನು ನೋಂದಾಯಿಸಿದಲ್ಲಿ ಸದಸ್ಯತ್ವ ಹಾಗೂ ನೋಂದಾವಣೆದಾರರ ರದ್ದಾಗುತ್ತದೆ. ಸಂಖ್ಯೆಗಿಂತ ನೈಜ ಸದಸ್ಯರು ನಮಗೆ ಮುಖ್ಯವಾಗಿರುತ್ತದೆ ಎಂದರು.




