ಬಿ.ಬಿ.ಎಂ.ಪಿ.ಯಲ್ಲಿ 150 ಕೋಟಿ ಡಬಲ್ ಬಿಲ್ಲು ಪಾವತಿ: ರಾಮಲಿಂಗಾರೆಡ್ಡಿ

4 years ago

ಬಿ.ಬಿ.ಎಂ.ಪಿ.ಯಲ್ಲಿ 150 ಕೋಟಿ ಡಬಲ್ ಬಿಲ್ಲು ಪಾವತಿ: ರಾಮಲಿಂಗಾರೆಡ್ಡಿ

ರಾತ್ರೋರಾತ್ರಿ ಬಜೆಟ್ ಮಂಡನೆ ಪಾಲಿಕೆ ಇತಿಹಾಸಕ್ಕೆ ಕಪ್ಪು ಚುಕ್ಕೆ

ಬೆಂಗಳೂರು: 83ರಿಂದ 88ರವರಗೆ ಪಾಲಿಕೆ ಸದಸ್ಯನಾಗಿದ್ದೆ. 35ವರ್ಷ ಶಾಸಕನಾಗಿದ್ದೆ. 40 ಪಾಲಿಕೆ ಬಜೆಟ್ ಮಂಡನೆ ನೋಡಿದ್ದೇನೆ. ಪಾಲಿಕೆ ಬಜೆಟ್ ಮಂಡನೆಯಲ್ಲಿ ಪೂರ್ವಭಾವಿಯಾಗಿ ಸಂಘಸಂಸ್ಥೆಗಳ, ಅಧಿಕಾರಿಗಳು, ಜನರ ಅಭಿಪ್ರಾಯ ಸಂಗ್ರಹಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ ಇಂದು ಆನ್ ಲೈನ್ ಮೂಲಕ ರಾತ್ರೋರಾತ್ರಿ ಮಂಡನೆ ಮಾಡಿ, ಪಾಲಿಕೆ ಬಜೆಟ್ ಮಂಡನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಬಿ.ಎಂ.ಪಿ. ರಾತ್ರೋರಾತ್ರಿ ಮಂಡನೆ ಮತ್ತು ಬಜೆಟ್ ಲೋಪದೋಷಗಳ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಆನ್ ಲೈನ್ ಮತ್ತು ಅಫ್ ಲೈನ್ ಮೂಲಕ 150 ಕೋಟಿ ಅಷ್ಟು ಡಬಲ್ ಬಿಲ್ಲು ಪಾವತಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಬಜೆಟ್ ಅನ್ನು ರದ್ದುಗೊಳಿಸಿ, ಪುನರ್ ಪರಿಶೀಲಿಸಿ ವಾಸ್ತವಿಕ ಬಜೆಟ್ ಮಂಡಿಸಬೇಕು ಎಂದರು.

ಮಾಜಿ ಮೇಯರ್ ಗಳಾದ ರಾಮಚಂದ್ರಪ್ಪ, ಜೆ.ಹುಚ್ಚಪ್ಪ, ಜಿ.ಪದ್ಮಾವತಿ, ಗಂಗಾಬಿಕೆ ಮಲ್ಲಿಕಾರ್ಜುನ್, ಸಂಪತ್ ರಾಜ್, ಮಾಜಿ ಆಡಳಿತ ಪಕ್ಷದ ನಾಯಕರ ಎಮ್.ಶಿವರಾಜು, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

Leave a Reply