ಟೀಕೆಗಳಿಗೆ ಅಂಜದೆ, ಅಪಹಾಸ್ಯಗಳಿಗೆ, ಅವಮಾನಗಳಿಗೆ ಅಲುಗಾಡದೆ ಮುನ್ನುಗ್ಗಿದ ತಾಳ್ಮೆ ಮತ್ತು ಸಹನೆಯ ಪ್ರತೀಕ ರಾಹುಲ್ ಗಾಂಧಿ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಬಹುಷ್ಯ ರಾಹುಲ್ ಗಾಂಧಿ ರವರು ಅಲ್ಲದೆ ಬೇರೆ ಯಾರಾದರೂ ಇವರ ಸ್ಥಾನದಲ್ಲಿ ನಿಂತಿದ್ದರೆ ಕಳೆದ ಒಂದು ದಶಕದ ಅವಧಿಯಲ್ಲಿ ಮಾರಿಕೊಂಡಂತಹ ಮಾಧ್ಯಮದವರು ಮತ್ತು ಪೂರ್ವಗ್ರಹ ಪೀಡಿತ ಬರಹಗಾರರಿಂದ ರಾಹುಲ್ ಗಾಂಧಿ ಅವರ ಮೇಲೆ ನಡೆದಂತಹ ವ್ಯವಸ್ಥಿತವಾದಂತಹ ಟೀಕೆಗಳು ಮತ್ತು ಅವಮಾನಕರವಾದಂತಹ ಲೇಖನಗಳು, ರಾಜಕೀಯ ಪಿತೂರಿಗಳು ಎಲ್ಲವನ್ನ ಎದುರಿಸಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲವೇನು ಇವರಿಗಿರುವಂತಹ ತಾಳ್ಮೆ ಮತ್ತು ಸಹನೆ ಶಾಂತ ಸ್ವಭಾವದ ವ್ಯಕ್ತಿತ್ವ ಇವರನ್ನು ಇಂದು ಭಾರತ ದೇಶದಲ್ಲಿ ಭರವಸೆಯ ನಾಯಕರನ್ನಾಗಿ ಕಾಣಲು ಸಾಧ್ಯವಾಗಿದೆ
1988ರಿಂದ ಇಲ್ಲಿಯ ತನಕ ಇವರ ಕುಟುಂಬದವರು ಯಾವುದೇ ರಾಜಕೀಯ ಅಧಿಕಾರವನ್ನು ಅನುಭವಿಸದಿದ್ದರೂ ವಂಶ ಪಾರಂಪರ್ಯದ ಆಡಳಿತದ ನೆಪವನ್ನ ಮಾಡಿಕೊಂಡು ಅರ್ಥವಿಲ್ಲದ ಟೀಕೆಗಳನ್ನು ಮಾಡುವುದರಲ್ಲಿ ಅದೆಷ್ಟೋ ಮಂದಿ ಸಂತೋಷವನ್ನು ಕಂಡಿದ್ದಾರೆ ಇವರನ್ನು ಲಘುವಾಗಿ ವಿಮರ್ಶಿಸುವುದರ ಮೂಲಕ ತಾವು ಅತಿಬುದ್ದಿವಂತರೆಂದು ಕೆಲವರು ಅಹಂಕಾರದಿಂದ ಮೆರೆದಿದ್ದಾರೆ ಇಂತಹ ಎಲ್ಲ ಸನ್ನಿವೇಶಗಳನ್ನ ಎದುರಿಸಿ ಭಾರತ ಯಾತ್ರೆಯ ಮೂಲಕ ಇಡೀ ಭಾರತ ದೇಶವನ್ನು ಸುತ್ತಾಡಿ ಜನರ ಸಮಸ್ಯೆಗಳನ್ನ ಆಲಿಸುತ್ತಾ ಜನರ ನಡುವೆ ಬೆಳೆದು ಬಂದಂತಹ ನಿಜವಾದ ಜನನಾಯಕರಾಗಿದ್ದಾರೆ
ಅತ್ಯಂತ ಸರಳವಾದಂತ ಉಡುಪು ಸರಳ ವಾದಂತಹ ನಡವಳಿಕೆ ಪ್ರಾಮಾಣಿಕವಾದಂತಹ ಉತ್ತರಗಳು ಮತ್ತು ಸ್ಪಷ್ಟವಾದಂತಹ ಅಭಿಪ್ರಾಯಗಳ ಮೂಲಕ ದೇಶದ ಜನರ ಮನಸ್ಸನ್ನು ಗೆದ್ದಿದ್ದಾರೆ
ಕಾಂಗ್ರೆಸ್ ಪಕ್ಷ ಇಂದು ಲೋಕಸಭೆಯಲ್ಲಿ ಪ್ರಬಲವಾದಂತಹ ವಿರೋಧಪಕ್ಷವಾಗಿ ನೂರರ ಗಡಿಯನ್ನು ದಾಟಿದ್ದರೆ ಅದಕ್ಕೆ ಪ್ರಮುಖವಾಗಿ ರಾಹುಲ್ ಗಾಂಧಿ ರವರ ಭಾರತ್ ಜೋಡೋ ಯಾತ್ರೆ ಪ್ರಮುಖವಾದಂತಹ ಪಾತ್ರವನ್ನ ವಹಿಸಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಕಾಂಗ್ರೆಸ್ ಪಕ್ಷಕ್ಕೆ ಇವರು ಚೈತನ್ಯವನ್ನು ತುಂಬಿ ಭರವಸೆಯನ್ನ ಮೂಡಿಸಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ದಶಕಗಳ ಕಾಲ ಇದ್ದು ಅಧಿಕಾರವನ್ನು ಅನುಭವಿಸಿ ಕಷ್ಟದ ಕಾಲದಲ್ಲಿ ಕೈ ಚೆಲ್ಲಿ ಸ್ವಾರ್ಥಕ್ಕಾಗಿ ತೊರೆದಂತಹ ಅನೇಕ ನಾಯಕರುಗಳ ಕುತಂತ್ರದ ಆಟಗಳಿಗೆ ಉತ್ತರವಾಗಿ ತಮ್ಮ ಶ್ರಮದ ಮೂಲಕ ಪಕ್ಷವನ್ನ ಕಟ್ಟಿ ಮತ್ತೆ ಯಾರು ಇರಲಿ ಬಿಡಲಿ ಕಾಂಗ್ರೆಸ್ ಪಕ್ಷ ಎಂದೆಂದಿಗೂ ಭಾರತ ದೇಶದಲ್ಲಿ ಒಂದು ಪ್ರಬಲವಾದಂತಹ ಶಕ್ತಿಯಾಗಿ ಉಳಿದುಕೊಂಡಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ
ಪಪ್ಪು ಎಂದು ಛೇಡಿಸಿದವರಿಗೆ ತಮ್ಮ ಬಲಿಷ್ಠವಾದ ನಾಯಕತ್ವ ಮತ್ತು ಪ್ರಬುದ್ಧವಾದ ವ್ಯಕ್ತಿತ್ವದ ಮೂಲಕ ಉತ್ತರವನ್ನು ಕೊಟ್ಟಿದ್ದಾರೆ ಯಾವುದೇ ರೀತಿಯ ಅಂಜಿಕೆ ಅಳುಕು ಇಲ್ಲದೆ ಪ್ರತಿದಿನವೂ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಸಾಮರ್ಥ್ಯವನ್ನ ತೋರಿಸಿಕೊಟ್ಟಿದ್ದಾರೆ
ಅಧಿಕಾರದಲ್ಲಿ ಇದ್ದವರು ಮಾತ್ರ ದೊಡ್ಡವರಾಗುವುದಿಲ್ಲ ಹೋರಾಟದ ಸಾಗರದಲ್ಲಿ ಸಾಗುವವರು ಸಹ ಈ ದೇಶದ ಜನರ ಮನದಲ್ಲಿ ಅದೆಷ್ಟ ಮಂದಿ ಉಳಿದುಕೊಂಡಿದ್ದಾರೆ ರಾಹುಲ್ ಗಾಂಧಿ ರವರು ಅಧಿಕಾರ ಇರಲಿ ಬಿಡಲಿ ದೇಶದಲ್ಲಿ ಬಿಜೆಪಿಯ ನಾಯಕರಿಗೆ ಒಬ್ಬ ಪರ್ಯಾಯವಾದಂತಹ ನಾಯಕತ್ವವನ್ನ ಪ್ರದರ್ಶಿಸಿದ್ದಾರೆ
ಬಾಲ್ಯದಲ್ಲಿ ತಮ್ಮ ಅಜ್ಜಿಯ ದುರಂತದ ಸಾವನ್ನು ಕಂಡು ತದನಂತರದಲ್ಲಿ ಯುವಕರಾಗಿದ್ದಾಗ ತಂದೆಯ ಸಾವನ್ನು ಕಂಡು ಗಟ್ಟಿತನವನ್ನು ಮೈಗೂಡಿಸಿಕೊಂಡಿರುವ ಇವರು ಇಂದು ಎಂತಹ ಪರಿಸ್ಥಿತಿಯಲ್ಲಿಯೂ ತಮ್ಮ ಸಹನೆಯನ್ನ ಕಳೆದುಕೊಳ್ಳದೆ ನಗುವಿನ ಮೂಲಕ ಶತ್ರುಗಳಿಗೆ ಉತ್ತರವನ್ನು ಕೊಡುತ್ತಾ ಮುನ್ನುಗ್ಗುತ್ತಿದ್ದಾರೆ ಭಗವಂತ ಇವರಿಗೆ ಆರೋಗ್ಯ ಆಯುಷ್ಯ ಮತ್ತು ಮುಂದಿನ ದಿನಗಳಲ್ಲಿ ದೇಶದ ಚುಕ್ಕಾಣಿಯನ್ನು ಹಿಡಿಯುವ ಅವಕಾಶವನ್ನು ಒದಗಿಸಿ ಕೊಡಲಿ ಎಂದು ಕೋರಿಕೊಳ್ಳುತ್ತೇವೆ
– ಕೆ ಎಸ್ ನಾಗರಾಜ್, ಬೆಂಗಳೂರು




