ಮೋದಿ ನೇತೃತ್ವದ 3ನೇ ಎನ್ಡಿಎ ಸರ್ಕಾರದ ಮೊದಲ 15 ದಿನಗಳಲ್ಲಿ 10 ಸಮಸ್ಯೆಗಳನ್ನು ತೋರಿಸಿದ ರಾಹುಲ್ ಗಾಂಧಿ
ಪ್ರಧಾನಿ ಉತ್ತರದಾಯಿತ್ವವಿಲ್ಲದೆ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ
ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಹುಮತವನ್ನು ಸಾಧಿಸುವ ಮೂಲಕ ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಬಂದ ಹದಿನೈದು ದಿನಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳ ಪಟ್ಟಿ
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿನ ಪೋಸ್ಟ್ ನಲ್ಲಿ, ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ರೈಲು ಅಪಘಾತ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ಸರಣಿ ಸೇರಿದಂತೆ ಹತ್ತು ಸಮಸ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಧಾನಿಯನ್ನ ಗುರಿಯಾಗಿಸಿಕೊಂಡು ನಡೆಸಿರುವ ಈ ವಾಗ್ದಾಳಿಯಲ್ಲಿ, ರಾಹುಲ್ ಗಾಂಧಿ ಈ ಎಲ್ಲಾ ಘಟನೆಗಳ ಸಮಯದಲ್ಲಿ, ನರೇಂದ್ರ ಮೋದಿ ಅವರು ತಮ್ಮ ಸರ್ಕಾರವನ್ನು ಉಳಿಸುವಲ್ಲಿ ನಿರತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್ಡಿಎ ಸರ್ಕಾರದ ಮೊದಲ 15 ದಿನಗಳಲ್ಲಿ ಅವರು ಪ್ರಸ್ತಾಪಿಸಿದ 10 ಸಮಸ್ಯೆಗಳು ಇಲ್ಲಿವೆ: 1. 1. ಭೀಕರ ರೈಲು ಅಪಘಾತ
2. ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು
3. ರೈಲುಗಳಲ್ಲಿ ಪ್ರಯಾಣಿಕರ ಅವಸ್ಥೆ
4. NEET ಹಗರಣ
5. NEET ಪಿಜಿ ರದ್ದು
6. UGC ನೆಟ್ ಪೇಪರ್ ಸೋರಿಕೆ
7. ಹಾಲು, ಬೇಳೆಕಾಳುಗಳು, ಅನಿಲ ತೆರಿಗೆ ಏರಿಕೆ
8. ಬೆಂಕಿಯಿಂದ ಉರಿಯುತ್ತಿರುವ ಕಾಡುಗಳು
9. ನೀರಿನ ಬಿಕ್ಕಟ್ಟು ಮತ್ತು
10. ಬಿಸಿ ಗಾಳಿಯಿಂದ ಸಂಭವಿಸಿದ ಸಾವುಗಳು
ನರೇಂದ್ರ ಮೋದಿ ಮತ್ತು ಅವರ ಸರ್ಕಾರದಿಂದ ಸಂವಿಧಾನದ ಮೇಲಿನ ದಾಳಿ ನಮಗೆ ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಯಾವುದೇ ಸಂದರ್ಭದಲ್ಲೂ ನಾವು ಸಮರ್ಥಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
I.N.D.IA ಬಣದ ಬಲವಾದ ವಿರೋಧವು ಜನರ ಧ್ವನಿ ಎತ್ತುವುದನ್ನು ಮುಂದುವರೆಸುತ್ತದೆ. ಮೋದಿಯವರನ್ನು “ಜವಾಬ್ದಾರಿ ಇಲ್ಲದೆ ತಪ್ಪಿಸಿಕೊಳ್ಳಲು” ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್ ಬರೇಲಿ, ಕೇರಳದ ವಯನಾಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ರಾಹುಲ್ ಗಾಂಧಿ, ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು, ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಲ್ಲಿಂದ ಕಾಂಗ್ರೆಸ್ ಪ್ರಿಯಾಂಕ ಗಾಂಧಿ ಅವರಿಗೆ ಟಿಕೆಟ್ ನೀಡಲಿದೆ.




