ರಾಗಿಕಣಕ್ಕೆ ಐದರ ಸಂಭ್ರಮ..!

4 years ago

ರಾಗಿಕಣಕ್ಕೆ ಐದರ ಸಂಭ್ರಮ..!

14 ಮತ್ತು 15 ನೇ ಮೇ, 2022 ರಂದು

ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಆವರಣ,

ಬನ್ನೇರುಘಟ್ಟ ರಸ್ತೆಯ ಹತ್ತಿರ, ಗೊಟ್ಟಿಗೆರೆ, ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ bit.ly/AnniversarySanthe

ಬೆಂಗಳೂರಿನಲ್ಲಿ ಸತತ ಐದು ವರ್ಷಗಳಿಂದ ಪ್ರತಿ ಭಾನುವಾರ ರಾಗಿಕಣವೆಂಬ ಕೈಉತ್ಪನ್ನಗಳ ಸಂತೆಯನ್ನು ಗ್ರಾಮ ಸೇವಾ ಸಂಘದ ಕಾರ್ಯಕರ್ತರು ನಡೆಸಿಕೊಂಡು ಬಂದಿದ್ದಾರೆ. ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಾಗಿಕಣ, ಒಂದು ಸಾಂಸ್ಕೃತಿಕ ತಾಣವಾಗಿಯೂ ಕಾರ್ಯನಿರ್ವಹಿಸಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ವಾರ್ಷಿಕೋತ್ಸವದಲ್ಲಿ ಚರ್ಚಾಕೂಟ, ಕಾರ್ಯಾಗಾರ, ಕಥೆ-ಕವನ ವಾಚನ, ಅಡಿಗೆ ಪ್ರಾತ್ಯಕ್ಷಿಕೆ, ಸಂಗೀತ ಕಾರ್ಯಕ್ರಮ ಜೊತೆಗೆ ಚಿತ್ರಕಲಾವಿದರ ಆರ್ಟ್ ಪಾರ್ಕ್ ಹೀಗೆ ಹಲವು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಕಳೆದ ಐದು ವರ್ಷಗಳಿಂದ ರಾಗಿಕಣ, ರೈತರು, ನೇಕಾರರು, ಕುಶಲಕರ್ಮಿಗಳು ಮತ್ತು ನಗರದ ಜನರ ನಡುವಣ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರತಿ ಭಾನುವಾರ ಸಂತೆಯಲ್ಲಿ ಖಾದಿ, ಕೈಮಗ್ಗದ ಉತ್ಪನ್ನಗಳು, ಸಾವಯವ ತರಕಾರಿ ಮತ್ತು ಹಣ್ಣುಗಳು, ರಚನಾತ್ಮಕ ಕೆಲಸಗಳು, ಪ್ರಕೃತಿ ಸಂಬಂಧಿತ ವಿಷಯದ ಕುರಿತು ಚರ್ಚೆ ಮತ್ತು ಸಂವಾದ ನಡೆಯುತ್ತಾ ಬಂದಿದೆ. ಬೆಂಗಳೂರಿನ ಹಲವು ಜನರಿಗೆ ರಾಗಿಕಣದಲ್ಲಿ ನಡೆದ ಗೊಬ್ಬರ, ಕೈತೋಟ, ಅಡುಗೆ ಮಾಡುವ, ನೂಲು ತೆಗೆಯುವ ಕಾರ್ಯಾಗಾರಗಳಿಂದ ವೈಯಕ್ತಿಕವಾಗಿ ಕೌಶಲ್ಯ ವೃದ್ಧಿಸಿಕೊಳ್ಳಲು ಹಾಗೂ ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಏಪ್ರಿಲ್ 2017 ರಲ್ಲಿ ಗ್ರಾಮ ಸೇವಾ ಸಂಘವು ಹುಲ್ ಕುಲ್ ಮುನಿಸ್ವಾಮಪ್ಪ ಮತ್ತು ಮುನಿವೆಂಕಟಮ್ಮ ಧರ್ಮದತ್ತಿ ಇವರ ಸಹಯೋಗದೊಂದಿಗೆ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಗೊಟ್ಟಿಗೆರೆ, ಬೆಂಗಳೂರು ಇಲ್ಲಿ ಪ್ರಾರಂಭಿಸಲಾಯಿತು.

ಈ ಎರಡು ದಿನ ವಾರ್ಷಿಕೋತ್ಸವದಲ್ಲಿ ವಿವಿಧ ಬಗೆಯ ಖಾದಿ, ಕೈಮಗ್ಗದ ಬಟ್ಟೆಗಳು, ಕರಕುಶಲ ವಸ್ತುಗಳು, ಸಾವಯವ ಹಣ್ಣು ಮತ್ತು ತರಕಾರಿಗಳು ಇನ್ನೂ ಅನೇಕ ಉತ್ಪನ್ನಗಳ ಜೊತೆಗೆ ವಿಶೇಷ ಮಾವಿನ ಮೇಳವನ್ನು ಆಯೋಜಿಸಲಾಗಿದೆ.

14 ನೇ ತಾರೀಖಿನಿಂದು ಬೆಳಿಗ್ಗೆ 10:30 ಕ್ಕೆ, ಈ ನೆಲದ ದೇಸಿ ಗಾಯನಕ್ಕೆ ಹೆಸರಾದ ಪಿಚ್ಚಳ್ಳಿ ಶ್ರೀನಿವಾಸ್ ಅವರ ಹಾಡಿನ ಮೂಲಕ ಸಂತೆಯು ಆರಂಭವಾಗಲಿದೆ. ನಂತರ ಹೆಸರಾಂತ ನಟರು, ಭೋಜನ ಕಾರ್ಯಕ್ರಮಗಳ ಮೂಲಕವೇ ಹೆಚ್ಚು ಹತ್ತಿರವಾದ ಸಿಹಿ-ಕಹಿ ಚಂದ್ರುರವರ ಅಡಿಗೆ ಕಾರ್ಯಕ್ರಮ, ಹಿರಿಯ ರಂಗಕರ್ಮಿ ಬಿ.ಜಯಶ್ರೀ ಅವರಿಂದ ಮಕ್ಕಳಿಗಾಗಿ ಕಥಾವಾಚನದ ಜೊತೆಗೆ ಮೊದಲನೆಯ ದಿನ ಸಂಜೆ ವಿದ್ಯ ಮತ್ತು ಸುಂದರ್ ರವರಿಂದ ಕವನವಾಚನ ಕಾರ್ಯಕ್ರಮವಿರುತ್ತದೆ.

ಮೇ 15 ರಂದು ಹೆಸರಾಂತ ಕಲಾವಿದ ಎಸ್.ಜಿ. ವಾಸುದೇವ್ ಮತ್ತು ಅವರ ಕಲಾ ಸ್ನೇಹಿತರಿಂದ ಆರ್ಟ್ ಪಾರ್ಕ್ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಪರಿಸರ ತಜ್ಞರಾದ ಲಿಯೋ ಸಲ್ಡಾನ ಮತ್ತು ಡಾ. ಮೀರ ಇವರು “ನಗರಗಳ ಹಸಿರುಹಾಸು ಒಂದು ಜೀವಂತ ಪರಂಪರೆ” ಎಂಬ ವಿಷಯದ ಮೇಲೆ ಸಂವಾದ ನಡೆಸಲಿದ್ದಾರೆ. ಸಂಜೆ ಪ್ರಖ್ಯಾತ ಹಾಡುಗಾರ್ತಿಯಾದ ಎಂ.ಡಿ. ಪಲ್ಲವಿ ಮತ್ತು ಪ್ರವೀಣ್ ಡಿ ರಾವ್ ರವರ ಸಂಗೀತದ ಜುಗಲ್ಬಂದಿಯೊಂದಿಗೆ ಸಂತೆಯು ಮುಕ್ತಾಯವಾಗುತ್ತಿದೆ.

ಈ ಕಾರ್ಯಕ್ರಮಗಳ ಜೊತೆಜೊತೆಗೆ ಬುಟ್ಟಿ ಹೆಣೆಯುವುದು, ಬ್ಲಾಕ್ ಪ್ರಿಂಟಿಂಗ್, ಸಾಂಪ್ರದಾಯಿಕ ಆಟಗಳು, ಮಡಿಕೆ ಬೊಂಬೆ ಮಾಡುವ, ನೂಲು ತೆಗೆಯುವ ಕಾರ್ಯಾಗಾರಗಳೂ ನಡೆಯಲಿವೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕಾವೇರಿ ದಾಸ್ ಅವರನ್ನು ಸಂಪರ್ಕಿಸಿ ಬಹುದು: +919483852436

ರಾಗಿಕಣ ಕಾರ್ಯಕ್ರಮವು, ಬೆಂಗಳೂರಿನ, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಹತ್ತಿರದ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಹಚ್ಚಹಸಿರಿನ ತೋಟದಲ್ಲಿ ನಡೆಯಲಿದೆ. Map: https://g.page/ragikanasanthe?share

ರಾಗಿ ಕಣ | M: 9972676426 | E-mail: ragikana.culturalhub@gmail.com

Leave a Reply