ಮಕ್ಕಳ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶ ಆಹಾರ ಮುಖ್ಯ: ಸಿಹಿಕಹಿ ಚಂದ್ರು

4 years ago

ಬೆಂಗಳೂರು: ಖುಷಿ, ಸಂತೋಷ ಮತ್ತು ಪ್ರೀತಿಯಿಂದ ಅಡುಗೆ ಮಾಡಬೇಕು ಮತ್ತು ಪೌಷ್ಟಿಕಾಂಶ ಆಹಾರ ತಿಂಡಿಗಳನ್ನು ಮಾಡಬೇಕು.ನಾವು ಮಾಡಿದ ಅಡುಗೆ ಆಸ್ವಾದಿಸಿ ತಿನ್ನಬೇಕು ಎಂದು ನಟ ಸಿಹಿಕಹಿ ಚಂದ್ರು ಹೇಳಿದರು.

ಗ್ಲೋಬಲ್ ಮಾಲ್ಸ್ ಮತ್ತು ಲುಲು ಫನ್ ಟೂರಾ ಸಹಯೋಗದಲ್ಲಿ ಲುಲು ಫುಡ್ ಕಾರ್ನಿವಲ್ ಮತ್ತು ಲಿಟಲ್ ಶೆಫ್ ಮಕ್ಕಳ ಕೈ ಅಡುಗೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತಾಡಿದ ಅವರು, ಮನುಷ್ಯ ಜೀವನದಲ್ಲಿ ಕಷ್ಟಪಡುವುದು ಹೊಟ್ಟೆಗಾಗಿ ಅದನ್ನ ಸಮರ್ಪಕವಾಗಿ, ಸಮತೋಲನ ಆಹಾರ ಸೇವಿಸಿದರೆ ಮಾತ್ರ ನಾವು ಜೀವನ, ಶ್ರಮಪಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.

ಆಹಾರ ಮನುಷ್ಯನಿಗೆ ಬಹಳ ಮುಖ್ಯ ಆಹಾರದಿಂದ ಆರೋಗ್ಯ ಕಾಪಾಡುವುದು ಹೇಗೆ ಎಂಬುದು ಮಕ್ಕಳಿಗೆ ತಿಳಿಯಬೇಕು ಎಂದು ಸ್ಪರ್ಧೆ ಏರ್ಪಡಿಸಲಾಗಿದೆ. ಉತ್ತಮ ಪೌಷ್ಟಿಕಾಂಶ ಆಹಾರಗಳು ಸೇವನೆಯಿಂದ ಮಾನಸಿಕ, ದೈಹಿಕವಾಗಿ ಬಾಳಬಹುದು. ಮೇ 27ರಿಂದ ಜೂನ್ 5ನೇ ತಾರೀಖಿನವರಗೆ 10 ದಿನಗಳ ಕಾಲ ಆಹಾರ ಮೇಳ ಜರುಗಲಿದೆ ಸಾರ್ವಜನಿಕರು ಬಂದು ತಮಗಿಷ್ಟವಾದ ಆಹಾರ ಸೇವಿಸಬೇಕು ಎಂದರು.

ರೀಜಿನಲ್ ಮ್ಯಾನೇಜರ್ ಫಹಾಜ್ ಆಶ್ರಫ್ ಅಲಿ ಮತ್ತು ಖ್ಯಾತ ಬಾಣಸಿಗ ವಿಕಾಸ್ ಪಾಠಕ್ ಮೊದಲಾದವರು ಇದ್ದರು. ಲುಲು ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ದಕ್ಷಿಣ ಭಾರತ, ಉತ್ತರ ಭಾರತ ದೇಶ, ವಿದೇಶಿ ಖಾದ್ಯಗಳ ಆಹಾರ ಮೇಳದಲ್ಲಿ ಉತ್ತಮ ಬಾಣಸಿಗರಿಂದ  ಖಾದ್ಯಗಳ ತಯಾರಿಸಲಾಗುತ್ತಿದೆ. ಅತಿ ಉತ್ಸಾಹದಿಂದ ಸಾರ್ವಜನಿಕರು ತಮಗೆ ಇಷ್ಟವಾದ ತಿಂಡಿಗಳನ್ನು ಸವಿದರು.

ಉಚಿತವಾಗಿ ಮಕ್ಕಳಿಗೆ ಅಡುಗೆ ಸ್ಪರ್ಧೆ 5ರಿಂದ 15ವರ್ಷದ ಒಳಗಿನ ಮಕ್ಕಳಿಗೆ ಏರ್ಪಡಿಸಲಾಗಿದೆ. ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಲು ಈ ಮೊಬೈಲ್ ನಂಬರ್ ಗೆ ಕರೆ ಮಾಡಿ 9538204176 ನೋಂದಣೆ ಮಾಡಿಸಬಹುದು.

10 ದಿನಗಳ ಕಾಲ ಸ್ಪರ್ಧೆ ನಡೆಯಲಿದೆ. ವಿಜೇತ ಮಕ್ಕಳಿಗೆ ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 10ಸಾವಿರ, ತೃತೀಯ ಬಹುಮಾನ 5 ಸಾವಿರ ಮತ್ತು ಸಮಾಧಾನಕರ ಬಹುಮಾನವಿದೆ. ಇಂದಿನ ಅಡುಗೆ ಸ್ಪರ್ಧೆಯಲ್ಲಿ 350 ಮಕ್ಕಳು ಭಾಗವಹಿಸಿದ್ದರು.

Leave a Reply