ಬೆಂಗಳೂರು: ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಗೆಲ್ಲಲು, ಮತದಾರರಾದ ಶಿಕ್ಷಕರಿಗೆ ಬೆಳ್ಳಿಯ ಬಟ್ಟಲು ಹಂಚುವ ಮೂಲಕ Indian National Congress – Karnataka ಅಭ್ಯರ್ಥಿ ‘ಪುಟ್ಟಣ್ಣ ಅವರು ತಮ್ಮ ಪುಟ್ಟ ಬುದ್ದಿ’ ತೋರಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಕುರಿತು ಸುದ್ದಿ ತುಣುಕು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಜೆಡಿಎಸ್, ಈಗಾಗಲೇ ನಾಲ್ಕು ಬಾರಿ ಆಯ್ಕೆಯಾಗಿದ್ದರೂ ಮತದಾರರಿಗೆ ಗಿಫ್ಟ್ ಹೆಸರಿನಲ್ಲಿ ಈ ರೀತಿ ಬೆಳ್ಳಿ, ದುಬಾರಿ ಪೆನ್ ಇತ್ಯಾದಿ ವಸ್ತುಗಳು ಹಾಗೂ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದರೆ ಅವರು ಇಷ್ಟು ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು ಎಂಬುದು ಅರ್ಥವಾಗುತ್ತದೆ ಎಂದಿದೆ.
ಶಿಕ್ಷಕರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಇಂತಹ ಆಮಿಷಗಳಿಗೆ ಒಳಗಾಗದೆ, ಅಧಿಕಾರದ ಆಸೆಗೆ ಪಕ್ಷಾಂತರ ಮಾಡುವ ಪುಟ್ಟಣ್ಣನಂತವರಿಗೆ ತಕ್ಕ ಪಾಠ ಹೇಳಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.




