ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಮ ವರ್ಗ ಮತ್ತು ಬಡವರು ವಾಸ ಮಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರದ ಜನತೆಗೆ ರಸ್ತೆ, ಪಾರ್ಕ್ ಮತ್ತು ಶಾಲೆ ಆಸ್ಪತ್ರೆ, ಉದ್ಯಾನವನ, ಕುಡಿಯುವ ನೀರು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಡಾ. ರಾಜಕುಮಾರ್ ವಾರ್ಡಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಫ್ಲೈಓವರ್ ಕಾಮಗಾರಿ ಮತ್ತು ಪೊಲೀಸ್ ಕ್ವಾಟ್ರಸ್ ನಲ್ಲಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿವೀಕ್ಷಣೆ ನಡೆಸಿದ ನಂತರ ಪ್ರತಿಕ್ರಿಯಿಸಿದ ಅವರು, ಜನರ ಸಮಸ್ಯೆಗಳ ಅರಿತು, ಅವರ ಬೇಕಾದ ಸೌಲಭ್ಯಗಳನ್ನು ಯೋಜನೆಗಳನ್ನು ರೂಪಿಸಿ ಆನುಷ್ಠಾನಗೊಳಿಸಲಾಗುತ್ತಿದೆ ಎಂದರು
ಮಹಾಲಕ್ಷ್ಮೀಲೇಔಟ್, ರಾಜಾಜಿನಗರ, ಮಲ್ಲೇಶ್ವರಂ, ಆರ್.ಆರ್.ನಗರ, ಯಶವಂತಪುರ ಭಾಗಗಳಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ವಿಜಯನಗರ, ಮೈಸೂರು ರಸ್ತೆಗೆ ಹೋಗಲು ಸುಗಮ ವಾಹನ ಸಂಚಾರಕ್ಕೆ ಮೇಲು ಸೇತುವೆ ನಿರ್ಮಾಣ ಶರವೇಗದಿಂದ ಸಾಗುತ್ತಿದೆ ಮುಂದಿನ ತಿಂಗಳು ಲೋಕರ್ಪಣೆಯಾಗಲಿದೆ ಎಂದರು.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅವರ ಉತ್ತಮ ಶಿಕ್ಷಣ ವ್ಯವಸ್ಥೆ ಲಭಿಸಬೇಕು. ಪೊಲೀಸ್ ಕ್ವಾಟ್ರಸ್ ನಲ್ಲಿ ಮೂರು ಮಹಡಿಯ ಸುಸ್ಜಜಿತ ಹೈಟೆಕ್ ಶಾಲೆ ನಿರ್ಮಾಣ ಹಂತದಲ್ಲಿದೆ. ಸಾರ್ವಜನಿಕರ ಸಮಸ್ಯೆಗಳು ನಿವಾರಣೆ ನೆಮ್ಮದಿ ಜೀವನ ಸಾಗಿಸಬೇಕು ಅದುವೇ ನಮ್ಮ ಉದ್ದೇಶ. ಜನಪರ ಆಡಳಿತ ನೀಡಿದ, ಜನರ ಸರ್ಕಾರ ನಮ್ಮದು ನಮ್ಮ ಪ್ರತಿಯೊಂದು ಎಲ್ಲ ವರ್ಗ, ಧರ್ಮದವರಿಗೆ ತಲುಪುವಂತಹ ಯೋಜನೆಗಳಾಗಿವೆ ಎಂದರು.
ಮುಖ್ಯ ಅಭಿಯಂತರ ದೊಡ್ಡಯ್ಯ ಲೋಕೇಶ್ ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗಂಗಭೈರಯ್ಯ, ರೂಪಲಿಂಗೇಶ್ವರ್ ಮೊದಲಾದವರು ಭಾಗವಹಿಸಿದ್ದರು.



