ಇಂಧನ ಸಚಿವ ಸುನೀಲ್ ಕುಮಾರ್ ಗೆ ಅಭಿನಂದನೆ 

4 years ago

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಅರಮನೆ ಮೈದಾನ, ರಾಯಲ್ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸುನೀಲ್ ಕುಮಾರ್ ರವರು, ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಸಂಘದ ವೆಬ್ ಸೈಟ್ ಮತ್ತು ಲಾಂಛನ ಬಿಡುಗಡೆ ಮಾಡಿದರು.

ಇದೇ ವೇಳೆ ಮಾತಾಡಿದ ಸುನೀಲ್ ಕುಮಾರ್, ವಿದ್ಯುತ್ ಗುತ್ತಿಗೆದಾರಿಗೆ ನಮ್ಮ ಸರ್ಕಾರ ನೆರವು ನೀಡುತ್ತದೆ. ಇಂಧನ ಇಲಾಖೆ ಒಂದು ವರ್ಷದಿಂದ ಸುಧಾರಣೆ ಮಾಡಲಾಗಿದೆ. ನಮ್ಮ ಪಕ್ಷ ನನಗೆ ಅಧಿಕಾರ ನೀಡಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದ್ದಿದೇನೆ. ಗುತ್ತಿಗೆದಾರರ ಸಹಕಾರದಿಂದ ಇಂಧನ ಇಲಾಖೆ ಯಶ್ವಸಿಯತ್ತ ಸಾಗುತ್ತಿದೆ ಎಂದರು.

13 ಜಿಲ್ಲೆಗಳಲ್ಲಿ ಸಂಘದ ಸ್ವಂತ ಕಟ್ಟಡವಿದೆ. ಎಲ್ಲರಿಗೂ ಒಳ್ಳೆಯದು ಆಗಬೇಕು. ಸಾಮಾನ್ಯ ಕಾರ್ಯಕರ್ತ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಒಟ್ಟಾಗಿ ರಾಜ್ಯ ಮತ್ತು ಇಲಾಖೆಗೆ ಹೆಸರು ಬರುವಂತೆ ಕೆಲಸ ಮಾಡೋಣ. 1 ಲಕ್ಷ – 5 ಲಕ್ಷದವರೆಗೆ ಸ್ಥಳೀಯ ಗುತ್ತಿದಾರರಿಗೆ ನೀಡಿಕೆ, ಸಣ್ಣ ಗುತ್ತಿಗೆದಾರರು ಬದುಕಬೇಕು ಎಂದರು.

100 ದಿನ ವಿಶೇಷ ಯೋಜನೆಯಲ್ಲಿ ಕಾರ್ಯಕ್ರಮದಲ್ಲಿ ಬೆಳಕು ಯೋಜನೆ ವಿದ್ಯುತ್ ಇಲ್ಲದ ಮನೆಗಳಲ್ಲಿ ಸಂಪರ್ಕ ನೀಡಲು ಪಂಚಾಯ್ತಿ ಅನುಮತಿ ಕಡ್ಡಾಯವಲ್ಲ ಎಂದು ಆದೇಶ ನೀಡಲಾಗಿದೆ . ಹೆಸ್ಕಾಂ, ಬೆಸ್ಕಾಂ, ಚೆಸ್ಕಾಂ ಏಕ ದರ ನಿಗದಿ ಮಾಡಲಾಗುವುದು ಎಂದರು.

ವಿದ್ಯುತ್ ಸಂಪರ್ಕ ಪಡೆಯಲು ಓ.ಸಿ. ನೀಡಬೇಕು ಎಂದು ಹಿಂದಿನ ಸರ್ಕಾರ ನಿಲುವು ತೆಗೆದುಕೊಂಡಿದ್ದರು. ನಮ್ಮ ಸರ್ಕಾರ ವಾಸ ದೃಡೀಕರಣ ಪತ್ರ ರದ್ದು ಮಾಡಿದೆ. ಟ್ರಾನ್ಸ್ ಫಾರ್ಮರ್ 4 ಗಂಟೆಗಳಲ್ಲಿ ಬದಲಾವಣೆ ಕಾರ್ಯಾದೇಶ ನೀಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಮಾತನಾಡಿ, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ 100 ವರ್ಷಗಳ ಇತಿಹಾಸವಿದೆ. ವಿದ್ಯುತ್ ಗುತ್ತಿಗೆದಾರರ ಸಂಕಷ್ಟ,ಸಮಸ್ಯೆಗಳಿಗೆ ಸಂಘವು ಸದಕಾಲ ಶ್ರಮಿಸುತ್ತಿದೆ. 2022ರ ಸಾಲಿನಲ್ಲಿ ವಾಸ ದೃಡೀಕರಣ ಇಲ್ಲದಿದ್ದರು ವಿದ್ಯುತ್ ಸಂಪರ್ಕ ಕೊಡಬೇಕು ಎಂದು ರಾಜ್ಯ ಸರ್ಕಾರದ ಆದೇಶದಿಂದ ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡಿದೆ. ಾದ್ದರಿಂದ ನಮ್ಮ ಸಂಘದ ಮುಖ್ಯಮಂತ್ರಿಗಳಿಗೆ ಇಂಧನ ಸಚಿವರಿಗೆ ಅಭಿನಂದನೆಗಳು ಎಂದರು.

ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರು ಇದ್ದು ಅವರನ್ನ ನಂಬಿಕೊಂಡು 10 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. 1 ಲಕ್ಷದಿಂದ 5 ಲಕ್ಷದವರೆಗೆ ತುಂಡು ಗುತ್ತಿಗೆ ನೀಡಬೇಕು ಮತ್ತು ಪ್ಯಾಕೇಜ್ ಮಾಡುವುದರಿಂದ ಸಣ್ಣಮಟ್ಟದ ವಿದ್ಯುತ್ ಗುತ್ತಿಗೆದಾರರು ಬೀದಿ ಪಾಲಾಗುತ್ತಾರೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಸಾಮಾಜಿಕ ಸೇವೆ ಗುರುತಿಸಿ, ನಮ್ಮ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಇಂಧನ ಸಚಿವರಾದ ಸುನೀಲ್ ಕುಮಾರ್ ರವರಿಗೆ ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಪದಾಧಿಕಾರಿಗಳಾದ ಎಂ.ಎನ್.ರಮೇಶ್, ಊರ್ಬನ್ ಪಿಂಟೊ, ಚಂದ್ರಬಾಬು, ಅನ್ನರ್ ಮಿಯಾ, ಶಿವಾನಂದ್ ಬಾಲಪ್ಪನವರ್, ಚಂದ್ರಬಾಬು ಪಾಲ್ಗೊಂಡಿದ್ದರು.

Leave a Reply