ಪ್ರಜಾಕೀಯ ಬಿಜೆಪಿಯ B Team ಎಂದ ಜಗದೀಶ್
ಉಪೇಂದ್ರಗೆ ಮತ್ತೊಂದು ವಿಡಿಯೋ ಮೂಲಕ ತಿರುಗೇಟು!!!
ರೈತರ ಕೃಷಿ ಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸಿಕೊಂಡಿದ್ದೀರಿ ಎಂದು ಜಗದೀಶ್ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಕ್ಕೆ ಉಪೇಂದ್ರ ಕೂಡ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದರು. ಈ ಪ್ರತಿಕ್ರಿಯೆಗೆ ತೃಪ್ತಿಯಾಗದ ಜಗದೀಶ್ ಮತ್ತು ಒಂದು ವಿಡಿಯೋ ಮೂಲಕ ಮತ್ತೆ ಸ್ಪಷ್ಟೀಕರಣ ಕೇಳಿದ್ದಾರೆ.
ನನಗೆ ನಿಮ್ಮ ಮೇಲೆ ವೈಕ್ತಿಕ ದ್ವೇಷವಿಲ್ಲ. ನೀವು ನಾನು ಕೇಳಿದ ಒಂದೆರಡು ಪ್ರಶ್ನೆರಗೆ ಉತ್ತರಿಸಿದ್ದೀರಿ. ನೀವು ಯಾವ ಕೃಷಿ ಮಾಡುತ್ತಿದ್ದೀರಿ? ಕಿಶೋರ್ ಮತ್ತು ವಿನೋದ್ ರಾಜ್ ತರ ನೀವೂ ಕೃಷಿ ನಂಬಿಕೊಂಡು ಬದುಕುತ್ತಿದ್ದೀರಾ? ಎಂದು ಅವರು ಪ್ರಶ್ನಿಶಸಿದ್ದಾರೆ.
ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಅಭಿಮಾನಿಗಳು ಜಗದೀಶ್ ಅವರ ವಿಡಿಯೋಗೆ ವ್ಯಗ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಗದೀಶ್, ನಿಮ್ಮ ಅನುಯಾಯಿಗಳಿಗೆ ಸ್ವಲ್ಪ ತಾಳ್ಮೆ ಕಲಿಸಿ ಎಂದಿದ್ದಾರೆ.
ನಿಮ್ಮ ರಾಜಕೀಯ ಸಿದ್ಧಾಂತವೇನು? ಯಾವ ತಾತ್ವಿಕತೆಯ ತಳಹದಿಯ ಮೇಲೆ ನಿಮ್ಮ ರಾಜಕಾರಣ ನಿಂತಿದೆ? ಎಂದು ಕೇಳಿದ್ದೆ. ನೀವು ನೇರವಾಗಿ ಪ್ರತಿಕ್ರಿಯಿಸಿಲ್ಲ. ನಾನು ಯಾವುದೋ ಪಕ್ಷದವನು ಎನ್ನುವ ರೀತಿ ಹೇಳ್ತೀರ. ಒಂದು ಸ್ಪಷ್ಟೀಕರಣ ಕೊಡುತ್ತೇನೆ. ನಾನು ನನ್ನಂತಹ ಕೋಟ್ಯಂತರ ಜನ ಮೋದಿಯವರನ್ನ ವಿರೋಧಿಸ್ತಿದಾರೆ. 70ರ ದಶಕದಲ್ಲಿ ಇಂದಿರಾಗಾಂಧಿಯವರು ಈ ದೇಶದಲ್ಲಿ ಎಮರ್ಜೆನ್ಸಿ ಜಾರಿಗೆ ತಂದಾಗ ಅಂದಿನ ಮಹಾನ್ ಚೇತನಗಳು ಶಾಂತವೇರಿ ಗೋಪಾಲಗೌಡರು, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಜಯಪ್ರಕಾಶ್ ನಾರಾಯಣ್ ರಂತಹ ಮಹನೀಯರಲ್ಲ ಇಂದಿರಾಗಾಂಧಿಯವರ ಎಮರ್ಜೆನ್ಸಿಯನ್ನು ವಿರೋಧಿಸ್ತಾರೆ. ಮೋದಿಯವರನ್ನು ಟೀಕೆ ಮಾಡುವ ನೂರುಪಟ್ಟು ಟೀಕೆ ಕಾಂಗ್ರೆಸ್ ಅನ್ನು ಟೀಕೆ ಮಾಡ್ತಿರ್ತಾರೆ. ನಾವೆಲ್ಲ ಅವರ ಮಾತು, ಸಾಹಿತ್ಯಗಳನ್ನು ಓದಿಕೊಂಡು ಕೇಳಿಕೊಂಡು ಬೆಳೆದವರು ಎಂದು ಅವರು ಹೇಳಿದ್ದಾರೆ.
ನಮ್ಮದು ವೈಯಕ್ತಿಕ ದ್ವೇಷವಲ್ಲ. ಯಾರೆಲ್ಲ ಅಧಿಕಾರಕ್ಕೆ ಬಂದರೆ ಅವರನ್ನು ಪ್ರಶ್ನಿಸುತ್ತೇನೆ. ನಾಳೆ ನಿಮ್ಮ ಸರ್ಕಾರ ಬಂದರೂ ಅದನ್ನೇ ಮಾಡುತ್ತೇನೆ. ರಾಜ್ಯದಲ್ಲಿ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಂದದ್ದು 1983ರಲ್ಲಿ. ಗುಂಡೂರಾವ್ ವಿರುದ್ಧ ಜೀವಿಜಯ ಪರ ಲಂಕೇಶ್ ಪ್ರಚಾರ ಮಾಡುತ್ತಾರೆ. ಅಂದು ಬಂಗಾರಪ್ಪ, ದೇವೇಗೌಡ ಸಿಎಂ ಆಗಬೇಕಿತ್ತು. ಆದರೆ ಹೇಗೋ ತೂರಿಕೊಂಡು ಬಂದು ರಾಮಕೃಷ್ಣ ಹೆಗಡೆ ಸಿಎಂ ಆಗ್ತಾರೆ. ಅದುವರೆಗೂ ಕಾಂಗ್ರೆಸ್ ವಿರೋಧಿಸುತ್ತಿದ್ದ ಲಂಕೇಶ್ ಪತ್ರಿಕೆ ಮಾರನೇ ದಿನವೇ ಜನತಾಪಕ್ಷದ ವಿರುದ್ಧ ನಿಲ್ಲುತ್ತದೆ. ಅಂದ್ರೆ ವಿರೋಧ ಪಕ್ಷವಾಗಿ ನಿಲ್ಲುತ್ತೆ. ಹೆಗಡೆಯವರ ಬಾಟ್ಲಿಂಗ್ ಹಗರಣ ಮತ್ತೆಲ್ಲ ಹಗರಣವನ್ನ ಬಯಲಿಗೆ ತರುತ್ತೆ. ಇವತ್ತೂ ಸಾಕ್ಷಿಯಾಗಿದಾರೆ ರವೀಂದ್ರ ರೇಷ್ಮೆ ಪತ್ರಕರ್ತರು ಎಂದಿದ್ದಾರೆ.
ನಾನು ಯಾವ ಪಕ್ಷದ ಗುಲಾಮನಲ್ಲ. ನಾಡು ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರನ್ನೂ ವಿರೋಧಿಸಿದ್ದೇನೆ ಎಂದಿದ್ದಾರೆ. ಜೊತೆಗೆ, ನಿಮ್ಮ ಒಂದು ಮಾತು ನನಗೆ ಹಾಸ್ಯಾಸ್ಪದ ಎನಿಸಿತು. ನಾನು ಯಾವುದೇ ಹೋರಾಟ ಮಾಡಲ್ಲ. ಹೋರಾಟ ಮಾಡದೆ ರಾಜಕಾರಣ ಮಾಡ್ತೀನಿ. ನೋಡಿ ಸರ್ ಜಗತ್ತಲ್ಲಿ ಹೋರಾಟ ಮಾಡದೆ ಯಾವುದೂ ದಕ್ಕಿಲ್ಲ. ಈ ಮಾತನ್ನು ನಾನು ಹೇಳಿಲ್ಲ. ಕನ್ನಡದ ಶ್ರೇಷ್ಠ ಲೇಖಕ ಕೆ.ಪಿ.ಪೂರ್ಣಚಂದ್ರತೇಜಸ್ವಿಯವರು ಎಂದಿದ್ದಾರೆ.
ನೀವು ಎಬಿವಿಪಿಯಲ್ಲಿದ್ದವರು. ಎಬಿವಿಪಿ ಸಂಘಪರಿವಾರದ ಅಂಗಸಂಸ್ಥೆ. ಆದರೆ ನೀವು ಅದಾದ ನಂತರ ಯಾರ್ಯಾರ ಜೊತೆ ಕಾಣಿಸಿಕೊಂಡಿರಿ ಸರ್? ರಾಜಕಾರಣ ಅಂತ ಶುರುಮಾಡಿದಾಗ ನೀವು? ದೇಶದ ಮೇಧಾವಿಗಳನ್ನ, ಅರ್ಥಶಾಸ್ತ್ರಜ್ಞರನ್ನ, ಸಮಾಜ ವಿಜ್ಞಾನಿಗಳನ್ನ ಬೇರೆಬೇರೆಯವರ ಜೊತೆ ಸಂವಾದ ಮಾಡಿ ಸಲಹೆಗಳನ್ನು ಕೊಡಬಹುದಿತ್ತು. ಆದರೆ ನೀವು ಯಾರ ಜೊತೆ ಹೋದಿರಿ? ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ, ಕಿರಿಕ್ ಕೀರ್ತಿ ಅವರ ಜೊತೆ ಹೋದಿರಿ. ಸರ್ ಇವರೆಲ್ಲ ಯಾರು? ಇವರ ಹಿನ್ನೆಲೆ ಏನು? ಎಂದಿದ್ದಾರೆ.
ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯತೋಟ ಎಂಬುದಕ್ಕೆ ಬೆಂಕಿ ಹಚ್ಚಲು ಹೋದವರು ಪ್ರಮೋದ್ ಮುತಾಲಿಕ್. ಚಕ್ರವರ್ತಿ ಸೂಲಿಬೆಲೆಯವರು ಹಸಿಸುಳ್ಳುಗಳನ್ನು ಹೇಳುತ್ತಾ ಬಂದು, ಮೋದಿಯವರ ಬಗ್ಗೆ ಇಲ್ಲಸಲ್ಲದ ಕತೆಗಳನ್ನು ಕಟ್ಟಿ ಹಸಿಹಸಿ ಸುಳ್ಳುಗಳನ್ನು ಹೇಳಿ, ಇವತ್ತು ಅವರ ಕತೆಗಳನ್ನು ಕೇಳಿದವರೇ ತಿರುಗಿಬಿದ್ದು ಉಗೀತಾ ಇದ್ದಾರೆ. ಇವತ್ತು ಮುಖಾ ಎತ್ತಲಿಕ್ಕಾಗದೆ ನಾಚಿಕೊಂಡು ಎಲ್ಲೋ ಮೂಲೆ ಸೇರ್ಕೊಂಡಿದಾರೆ. ಈ ಕಿರಿಕ್ ಕೀರ್ತಿ ಆರು ಕೊಟ್ಟರೆ ಅತ್ತೆ ಕಡೀಕೆ ಮೂರು ಕೊಟ್ರೆ ಸೊಸೆ ಕಡೀಕೆ ಇಂತಾ ಮನುಷ್ಯ. ನೀವು ಇಂತವರ ಜೊತೆಯಲ್ಲ ಕಾಣಿಸ್ಕೋತೀರಿ. ನನಗೆ ಅನುಮಾನ ಬರುವುದೇ ಇದಕ್ಕೆ. ನೀವು ಬಿಜೆಪಿಯ ಬಿ ಟೀಮ್. ಸಂಘಪರಿವಾರ, ಬ್ರಾಹ್ಮಣ್ಯ ಈಥರ ಮಾತುಗಳನ್ನು ನಾನಾಡ್ತೀನಿ ಅಂತಂದ್ರೆ ನನಗೆ ಅನುಮಾನ ಬರೋದು ಸಹಜ ತಾನೇ? ಎಂದಿದ್ದಾರೆ.
ನಾನೊಬ್ಬ ಸಾಮಾನ್ಯ ಸ್ವಾಮಿ. ನಿಮ್ತರ ಅತಿ ಬುದ್ಧಿವಂತ ಅಲ್ಲ.ಯಾಕೆಂದರೆ ಬುದ್ಧಿವಂತರಿಗಾಗಿ ಸಿನಿಮಾ ಮಾಡಿದವರು ನೀವು. ನೀವು ದೊಡ್ಡದೊಡ್ಡ ವ್ಯಕ್ತಿಗಳ ಜೊತೆ ಸಂವಾದ ಮಾಡಿ. ಪ್ರತಿಭಾವಂತರ ಜೊತೆ ಸಂವಾದ ಮಾಡಿ. ನೀವು ಸರ್ಕಾರಕ್ಕೆ ಸಲಹೆ ಕೊಡಬಹುದಾಗಿತ್ತು. ಸಾಮಾನ್ಯರಿಗೆ ತಿಳಿಸಬಹುದಾಗಿತ್ತಲ್ವಾ? ಅದ್ಯಾವುದನ್ನೂ ನೀವು ಮಾಡಲಿಲ್ಲ. ನಿಮ್ಮ ಪ್ರಜಾಕೀಯ ಬಿಜೆಪಿಯ ಬಿ ಟೀಮ್ ಎನ್ನುವುದನ್ನು ಈಗಲೂ ನಾನು ಸಮರ್ಥಿಸಿಕೊಳ್ತೀನಿ ಎಂದಿದ್ದಾರೆ.



