ಅಂತರ್ಜಾತಿ ವಿವಾಹಿತರಿಗೆ ಅದ್ದೂರಿ ಸ್ವಾಗತ
ಸಾಮಾಜಿಕ ಬಹಿಷ್ಕಾರ ಪ್ರಕರಣ ಇತ್ಯರ್ಥ
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಎನ್.ದೇವರಹಳ್ಳಿ ಗ್ರಾಮದ ಜೋಗಿ ಜನಾಂಗದ ಅಲೆಮಾರಿ ಕಾಲೋನಿಯ ಯುವತಿ ಮತ್ತು ಆಂಧ್ರಪ್ರದೇಶ ಮೂಲದ ಯುವಕ ವಾಕ್- ಶ್ರವಣ ದೋಷ ಉಳ್ಳವರಾಗಿದ್ದು, ಬೆಂಗಳೂರಿನ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುವಾಗ ಪರಿಚಿತರಾಗಿ, ಪರಿಚಯ ಪ್ರೇಮವಾಗಿ, ಅಂತರ್ಜಾತಿ ವಿವಾಹ ಕೂಡ ಆಗಿದ್ದು ಒಂದೂವರೆ ತಿಂಗಳ ಪುಟ್ಟ ಮಗು ಕೂಡ ಇದೆ.
ಇತ್ತೀಚೆಗೆ ತನ್ನ ತವರು ಮನೆಗೆ ಬರುವ ಹಂಬಲ ಹೊಂದಿದ್ದ ಯುವತಿ ಪತಿಯನ್ನು ಕರೆದುಕೊಂಡು ತನ್ನ ಊರು ದೇವರಹಳ್ಳಿ ಗ್ರಾಮಕ್ಕೆ ಬಂದಿದ್ದಾಳೆ. ಆದರೆ ಇಲ್ಲಿ ನಡೆದಿದ್ದು ಮಾತ್ರ ಬೇರೆ.
ವಿವಾಹಿತರು ಬರುವುದನ್ನೇ ಕಾಯುತ್ತಿದ್ದವರಂತೆ ಇದ್ದ ಊರಿನ ಯಜಮಾನರು ಸಭೆ ಸೇರಿ ಅಂತರ್ಜಾತಿ ವಿವಾಹ ಮಾಡಿಕೊಂಡ ತಪ್ಪಿಗೆ ಯುವತಿಯ ಕುಟುಂಬದವರಿಂದ ಮೂವತ್ತು ಸಾವಿರ ದಂಡ ಮತ್ತು ಊರಿನಿಂದ ಸಾಮಾಜಿಕ ಬಹಿಷ್ಕಾರದ ಬರೆದಿಟ್ಟು ಕಳಿಸಿಕೊಟ್ಟಿದ್ದರು.
ಸಾಮಾಜಿಕ ಬಹಿಷ್ಕಾರದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಮಾಧ್ಯಮಗಳಿಗೂ ತಲುಪಿ ಬಹುದೊಡ್ಡ ಸುದ್ದಿ ಆಗುವ ಮೂಲಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತೀವ್ರವಾದ ತಲೆನೋವು ಆಗಿ ಪರಿಣಮಿಸಿತು.
ಮೇಲಿಂದ ಮೇಲೆ ಅಧಿಕಾರಿಗಳು ಸಭೆ ನಡೆಸಿ ಬಹಿಷ್ಕಾರ ಪ್ರಕರಣಕ್ಕೆ ಅಂತ್ಯಹಾಡುವ ಕೆಲಸವನ್ನು ಎಲ್ಲರೂ ಸೇರಿಕೊಂಡು ಮಾಡಿ ಮುಗಿಸಿದರು.
ಅಧಿಕಾರಿಗಳು ಮತ್ತು ಜೋಗಿ ಜನಾಂಗದವರು ಸಾಮಾಜಿಕವಾಗಿ ತಮ್ಮ ಮಾನ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನಿಸಿ ಯಶಸ್ವಿ ಕೂಡ ಆದರು.
ಮೂಕ-ವೇದನೆ; ವಾಕ್-ಶ್ರವಣ ದೋಷಕ್ಕೆ ಒಳಗಾಗಿರುವ ಅಂತರ್ಜಾತಿ ವಿವಾಹಿತರಿಗೆ ಸರ್ಕಾರದ ವಿಕಲಚೇತನರ ಇಲಾಖೆಯಿಂದ ನೆರವು ನೀಡಬಹುದೆಂದು ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಕಾದಿತ್ತು. ಮಹಿಳಾ ಇಲಾಖೆಯ ಅಧಿಕಾರಿ ಭಾರತಿ ಬಣಕಾರ ಜನರ ಮಧ್ಯೆ ಎಚ್ಚರಿಕೆ ನೀಡಿದ್ದು, ಇಂತಹ ಪ್ರಕರಣ ಮರುಕಳಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿ ಜನರ ಚಪ್ಪಾಳೆಗಿಟ್ಟಿಸಿಕೊಂಡರು.
ಹಾಗೆಯೇ ಹಿಂದುಳಿದ ಇಲಾಖೆಯ ಅಧಿಕಾರಿ ಸುಬ್ರಾಯನಾಯ್ಕ ಅವರು ಹಿಂದುಳಿದ ವರ್ಗಗಳ ಇಲಾಖೆಯಿಂದ ಏನು ನೆರವು ನೀಡಬಹುದೆಂದು ನೋಡೋಣ ಎಂದಷ್ಟೇ ಹೇಳಿದರು.
ಎನ್.ದೇವರಹಳ್ಳಿಗೆ ಹೋಗಿ ಜಿ.ಪಂ. CEO ಮಾಡಿದ್ದೇನು?
ಸಾಮಾಜಿಕ ಬಹಿಷ್ಕಾರಕ್ಕೊಳಗಾದವರಿಗೆ CEO ಇನ್ನೇನು ನೆರವು ನೀಡುತ್ತಾರೆ ಅಂದುಕೊಂಡವರಿಗೆ ನಿರಾಸೆ ಬಿಟ್ಟರೆ ಬೇರೇನೂ ಕಾಣಲಿಲ್ಲ. ಇದುವರೆಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ ಅಧಿಕಾರಿಗಳು ಎನ್.ದೇವರಹಳ್ಳಿಗೆ ಹೋಗಿ ಮಾಡಿದ್ದಾದರೂ ಏನು? ಎಂದು ಇದುವರೆಗೂ ಕಾಡುತ್ತಿರುವ ಪ್ರಶ್ನೆ !
ಈ ಮಧ್ಯೆ? ಅಧಿಕಾರಿಗಳು ಹೋರಾಟಗಾರರು ಹೋಗಿ ಬಂದ ಮಧ್ಯೆಯೇ ಯುವ ವಕೀಲರು ಹಾಗೂ ಜೋಗಿ ಸಮುದಾಯದ ಯುವನಾಯಕ ಪ್ರಾಮಾಣಿಕ ಪ್ರಯತ್ನವೊಂದನ್ನು ನಡೆಸಿ ನೊಂದಜೀವಿಗಳಿಗೆ ತಮ್ಮ ಕೃೆಲಾದ ಸಹಯ ಹಸ್ತ ಚಾಚಿ ನೆರವು ನೀಡುವ ಮೂಲಕ ಪ್ರತಾಪ್ ಜೋಗಿ ಜನರ ಪ್ರೀತಿಗೆ ಪಾತ್ರರಾದರು.
ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಂಧಾನ ಸಭೆಯಲ್ಲಿ ಚಳ್ಳಕೆರೆ ತಹಶಿಲ್ದಾರ, ಸರ್ಕಲ್ ಇನ್ಸ್ಪೆಕ್ಟರ್ ನಾಯಕನಹಟ್ಟಿ ಸಬ್ ಇನ್ಸ್ಪೆಕ್ಟರ್ ತಾಲ್ಲೂಕು ಪಂಚಾಯಿತಿ EO ಹೀಗೆ ಹತ್ತು ಹಲವು ಅಧಿಕಾರಿಗಳು ಮತ್ತು ಪ್ರತಾಪ್ ಜೋಗಿ, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್ ಮತ್ತು ಗ್ರಾಮಸ್ಥರು ಹಾಜರಿದ್ದರು.




