ರಾಯಚೂರು: ರಾಜಕೀಯ ನಿಂತ ನೀರಲ್ಲ. ಕೃಷ್ಣಾ ನದಿ ಹರಿದು ವಿಜಯವಾಡದ ಬಳಿ ಸಮುದ್ರ ಸೇರಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸರ್ಕಾರದಲ್ಲಿ ಏರಿಳಿತಗಳು ಸಾಮಾನ್ಯ. ಹಿಂದೆ ಬಿಜೆಪಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದರು. ನಮ್ಮಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸಚಿವರ ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂದರು.
ಬಹಳಷ್ಟು ಮಂದಿ ಹಿರಿಯರು ನಮಗೂ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಹೊಸ ನಾಯಕತ್ವ ಬಳಸಲು ಬಿಜೆಪಿಯಲ್ಲಿ ಮೊದಲ ಬಾರಿ ಗೆದ್ದವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ವಿಧಾನಪರಿಷತ್ನ ಆಯ್ಕೆಯಲ್ಲೂ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಆ ಮಾದರಿ ನಮ್ಮಲ್ಲೂ ಅನುಷ್ಠಾನಕ್ಕೆ ಬರಬೇಕು ಎಂದರು.
ನಮ್ಮ ಪಕ್ಷದ ನಾಯಕರು ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಅಲ್ಲಿ ಯಾವ ಚರ್ಚೆಯಾಗಿದೆಯೋ ಗೊತ್ತಿಲ್ಲ. ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಮಾಡುವುದು ವರಿಷ್ಠರ ನಿರ್ಧಾರ. ನಾವು ಸಂಪುಟದ ಭಾಗವಷ್ಟೆ. ಬೇರೆಯವರನ್ನು ಸೇರಿಸಿಕೊಳ್ಳುವುದು, ಬಿಡುವುದು ನಮ್ಮ ಕೈಲಿಲ್ಲ. ನಮ್ಮ ಸ್ಥಾನಗಳನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದರು.
ನಾವು ಯಾರನ್ನಾದರೂ ತೆಗೆದು ಬೇರೆಯವರನ್ನು ಹಾಕುವುದಿದೆ. ರಾಜಕೀಯ ನಿಂತ ನೀರಲ್ಲ, ಹರಿಯುತ್ತಲೇ ಇರುತ್ತದೆ. ಹೀಗೆ ಹರಿದು ಕೃಷ್ಣಾ ನದಿ ನೀರು ವಿಜಯವಾಡದ ಅರಬ್ಬಿ ಸಮುದ್ರ ಕೂಡಬೇಕು ಎಂದರು.
ನಮ್ಮಲ್ಲಿ ಐದೈದು ಬಾರಿ ಗೆದ್ದು ಬಂದಿದ್ದೇವೆ, ಅವಕಾಶ ಕೊಡಿ ಎನ್ನುತ್ತಿದ್ದಾರೆ. ಬೇರೆಯವರಿಗೆ ಅವಕಾಶ ಕೊಡಬೇಕಾಗುತ್ತದೆ. ಭವಿಷ್ಯದಲ್ಲಿ ಆಗಬಹುದು. ನಾಯಕತ್ವ ಬೆಳಸಬೇಕು. ಆ ರೀತಿ ಬಿಜೆಪಿಯವರು ಈ ಸ್ಟಾಟರ್ಜಿ ಮಾಡುತ್ತಾರೆ. ನಮ್ಮಲ್ಲಿ ಆ ಮಾದರಿಯಲ್ಲಿ ಆಗಬೇಕು ಎಂದರು.
ಶಿವಗಂಗಾ ಬಸವರಾಜ್ ರಿಂದ ಪದೇಪದೇ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಸ್ಟೇಟ್ ಮೆಂಟ್ ಅವರದ್ದು. ಅವರ ವೈಯಕ್ತಿಕ ಹೇಳಿಕೆ ಅದು. 10ನೇ ಸಲ ಹೇಳಿದ್ದು ಅವರು. ಪದೇ ಪದೇ ಹೇಳುತ್ತಿದ್ದಾರೆ. ಡಿಸಿಎಂ ಆಗಬೇಕು ಅಂತಲೂ ಹೇಳಿದ್ದರು. ಪಕ್ಷದ ನಿರ್ಣಯ ಹೈಕಮಾಂಡ್ ನಿಂದ ಬರಬೇಕು ಎಂದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಇದ್ದೇ ಇರುತ್ತಾರೆ. ಈಗಂತೂ ಇದ್ದಾರೆ. ಅವರನ್ನು ತೆಗೆಯುವಂತಹ ಸನ್ನಿವೇಶ ಎಲ್ಲಿದೆ? ಅವರೇ ಇರುತ್ತಾರೆಂಬ ಭಾವನೆ ನಮ್ಮದು ಎಂದರು.




