10 ರೂ. ಇದ್ದ ಪ್ಲಾಟ್ ಫಾರಂ ಟಿಕೆಟ್ 50 ರೂ.ಗೆ ಏರಿಕೆ

5 years ago

ಮುಂಬೈ: ಮಧ್ಯರೈಲ್ವೇ ವಲಯ ಮುಂಬೈನ ಮೆಟ್ರೊಪಾಲಿಟನ್ ವಲಯದಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 50 ರೂ.ಗೆ ಏರಿಸಿದೆ. ಇಷ್ಟು ದಿನಗಳ ಕಾಲ 10 ರೂ. ಇದ್ದ ದರವನ್ನು ಏಕಾಏಕಿ 40 ರೂ. ಏರಿಸಲಾಗಿದೆ. ಈ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.

ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಆಗದಂತೆ ತಡೆಯಲು ಪ್ಲಾಟ್ ಫಾರಂ ದರ ಏರಿಸಲಾಗಿದೆ ಎಂಬ ಸಮಾಜಿಯಿಷಿಯನ್ನು ಇಲಾಖೆ ನೀಡಿದೆ. ಕೊರೊನಾ ಅವಧಿಯಲ್ಲಿ ಜನ ಹೆಚ್ಚಾಗಿ ಗುಂಪು ಸೇರಬಾರದು ಎಂಬ ನಿಯಮವೇ ಇದೆ. ಆದರೆ, ಇದೇ ನೆಪವನ್ನಿಟ್ಟುಕೊಂಡು ದರ ಏರಿಕೆ  ಮಾಡಲಾಗಿದೆ.

ಅವೈಜ್ಞಾನಿಕ ಲಾಕ್ ಡೌನ್ ಹೇರಿಕೆಯ ಕಾರಣದಿಂದಾಗಿ ದೇಶದಲ್ಲಿ ತೀವ್ರವಾಗಿ ಆರ್ಥಿಕ ಕುಸಿತ ಕಂಡುಬಂದಿದೆ. ಜೊತೆಗೆ, ನಿರೀಕ್ಷಿತ ಪ್ರಮಾಣದಲ್ಲಿ ಹೊಸ ಉದ್ಯೋಗ ಕೂಡ ಸೃಷ್ಟಿಯಾಗಿಲ್ಲ. ಇಂತಹ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಕೂಡ ಗಗನಕ್ಕೇರಿದೆ. ಆಯ್ದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ತಲುಪುತ್ತಿದೆ. ಇವೆಲ್ಲವುಗಳ ನಡುವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ ಕೂಡ ಗಗನಕ್ಕೇರಿದೆ.

ಅಚ್ಛೇದಿನಗಳ ನಿರೀಕ್ಷೆಯಲ್ಲಿ ಎರಡು ಅವಧಿಗೆ ಬಿಜೆಪಿಗೆ ಅಧಿಕಾರ ಕೊಟ್ಟ ಜನ ಬುರೇದಿನಗಳನ್ನೇ ನೆನೆದು ಸಮಾಧಾನಪಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply