ಮೈಸೂರು: ನಂಜನಗೂಡು ಪಟ್ಟಣದ ಕಾರ್ಮೆಲ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಎಂಬ ಶೈಕ್ಷಣಿಕ ಪ್ರಗತಿಯ ಸಮಾರಂಭವನ್ನು ಆಯೋಜಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಶಾಸಕ ಬಿ.ಹರ್ಷವರ್ಧನ್, ತಾಲ್ಲೂಕಿನ ಎಲ್ಲಾ 364 ಶಾಲೆಗಳಿಗೂ ತಮ್ಮ ಸ್ವಂತ ಹಣದಿಂದ ಮಾಡಿಸಿದ್ದ ಭಾರತದ ಸಂವಿಧಾನದ ಪ್ರಸ್ತಾವನೆ ಪ್ರತಿಯನ್ನೊಳಗೊಂಡ (Photo Frame) ಚಿತ್ರಪಟವನ್ನು ಕೊಡುಗೆಯಾಗಿ ನೀಡಿದರು.
ಬಳಿಕ ಮಾತನಾಡಿದ ಅವರು, ಜನವರಿ 26ರ ಸಂವಿಧಾನ ದಿನಾಚರಣೆಯಂದು ಈ ಕುರಿತು ಪ್ರಸ್ತಾಪ ಮಾಡಿದ್ದೆ. ಅದರಂತೆ ಈಗ ಕಾರ್ಯರೂಪಗೊಳಿಸಿದ್ದೇನೆ. ಶಾಲಾ ಮಕ್ಕಳಲ್ಲಿ ಸಂವಿಧಾನದ ಆಶಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯ ಮಾಡಿದ್ದೇನೆ ಎಂದರು.
ಬಹುಷ ರಾಜ್ಯದಲ್ಲಿ ಈ ರೀತಿಯ ವಿನೂತನ ಕಾರ್ಯಕ್ಕೆ ಕೈ ಹಾಕಿರುವ ಮೊದಲ ಶಾಸಕ ಬಿ.ಹರ್ಷವರ್ಧನ್ ಇರಬಹುದು.





