ಮಹಾಲಕ್ಷ್ಮಿ ಲೇಔಟ್: ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಉದ್ಯೋಗ ಅರಸಿ ಬಂದ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಹಲವಾರು ನಾಗರಿಕ ಸಮಸ್ಯೆಗಳಿವೆ. ಇವುಗಳಿಗೆಲ್ಲ ತಕ್ಷಣಕ್ಕೆ ಸ್ಪಂದಿಸಿ ಪರಿಹಾರ ಕಲ್ಪಿಸುವಲ್ಲಿ ಶ್ರಮಿಸಿದ ಹೆಗ್ಗಳಿಕೆಯೊಂದಿಗೆ ಮತ್ತೊಮ್ಮೆ ಕಣದಲ್ಲಿರುವ ಸಚಿವ ಗೋಪಾಲಯ್ಯ ಎಲ್ಲರಿಗಿಂತಲೂ ಜನಪ್ರಿಯತೆಯಲ್ಲಿ ಮುಂದಿದ್ದಾರೆ.
ಈ ಮೊದಲು ಜೆ ಡಿ ಎಸ್ ನಿಂದ ಆಯ್ಕೆ ಆಗಿದ್ದ ಗೋಪಾಲಯ್ಯ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿ ಮರು ಆಯ್ಕೆಯಾಗಿದ್ದಾರೆ. ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿದಿರುವ ಅವರಿಗೆ ಕಾಂಗ್ರೆಸ್ಸಿನ ಕೇಶವಮೂರ್ತಿ ಎದುರಾಳಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತ ಬ್ಯಾಂಕ್ ಹೊಂದಿದೆಯಾದರೂ ಗೋಪಾಲಯ್ಯ ಅವರ ನಾಗಾಲೋಟದ ಮುಂದೆ ಲೆಕ್ಕಕ್ಕಿಲ್ಲ. ಜೆಡಿಎಸ್ ಕೂಡ ಕೆ.ಸಿ.ರಾಜಣ್ಣ ಅವರನ್ನು ಕಣಕ್ಕಿಳಿಸಿದೆ. ಅವರು ಕೂಡ ತನ್ನ ಸಾಂಪ್ರದಾಯಿಕ ಮತ ಬ್ಯಾಂಕನ್ನು ನೆಚ್ಚಿಕೊಂಡಿದ್ದಾರೆ. ಇಲ್ಲಿ ಇಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಇದ್ದರೂ ಕೂಡ ಗೋಪಾಲಯ್ಯ ಅವರ ವೈಯಕ್ತಿಕ ವರ್ಚಸ್ಸು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.



