ಪದ ಪದ ಕಟ್ಟುಪದ ಪುಸ್ತಕ ಬಿಡುಗಡೆ ಸಮಾರಂಭ

4 years ago

ಕನ್ನಡ ಭಾಷೆ ಮಾತೃ ಸಮಾನವಾಗಿದೆ, ಮಕ್ಕಳು ತಾಯಿಗೆ ಸೇವೆ ಸಲ್ಲಿಸುವಂತೆ ಮಾತೃ ಭಾಷೆಗೂ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗುತ್ತದೆ: ಜಂಟಿ ಪೋಲಿಸ್ ಆಯುಕ್ತ ರವಿಕಾಂತೇಗೌಡ

ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಶಾರದಾ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಷ್ಠಾನದ ಚೊಚ್ಚಲ ಕೃತಿ ಬಿಡುಗಡೆ ಸಮಾರಂಭ

ಬೆಂಗಳೂರು: ಕನ್ನಡ ಭಾಷೆ ಮಾತೃ ಸಮಾನವಾಗಿದೆ. ಮಕ್ಕಳು ತಾಯಿಗೆ ಸೇವೆ ಸಲ್ಲಿಸುವಂತೆ ಮಾತೃ ಭಾಷೆಗೂ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕವಾಗುತ್ತದೆ. ಕಲೆ ಸಾಹಿತ್ಯ ಲೋಕಕ್ಕೆ ಹಲವಾರು ಸಂಘ, ಸಂಸ್ಥೆಗಳು ಶ್ರಮಿಸುತ್ತಿವೆ. ಇಂದಿನ ದಿನಮಾನಗಳಲ್ಲಿ ಸಾಹಿತ್ಯ, ಕಲೆ ಬಗ್ಗೆ ಆಸಕ್ತಿ ಕಡಿಮೆ ಇದೆ. ಕನ್ನಡ ಭಾಷೆ ಬೆಳಯಲು ಸಾಹಿತಿಗಳ ಕೊಡುಗೆ ಅಪಾರ. ರವಿ ಕಾಣದ್ದು ಕವಿ ಕಂಡ ಎಂಬಂತೆ ಸಮಾಜದ ಬದಲಾವಣೆಗೆ ಸಾಹಿತ್ಯ ಮಹತ್ವ ಪಾತ್ರವಹಿಸಿದೆ. ಮಹನೀಯರುಗಳಾದ ಅಣ್ಣ ಬಸವಣ್ಣ, ಅಲ್ಲಮಪ್ರಭು ಅವರ ವಚನಗಳು ಜನರ ಜೀವನಕ್ಕೆ ಸರ್ವಕಾಲಿಕ ಸತ್ಯ ಸಂಗತಿಗಳನ್ನು ಹೇಳುತ್ತಿವೆ. 12 ಶತಮಾನದ ವಚನಗಳು ನಾಡಿಗೆ ಡೊಡ್ಡ ಕಾಣಿಕೆ ನೀಡಿವೆ. ಎಲ್ಲರು ವಚನದ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮಾತನಾಡಿ ಹೇಳಿದರು.

ಕನ್ನಡ ಭಾಷೆ ಉಳಿಸಿ, ಬೆಳಸಲು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳಸುವುದು ಶಾರದಾ ಪ್ರತಿಷ್ಠಾನದ ಉದ್ದೇಶವಾಗಿದೆ. ಕನ್ನಡ ಕಟ್ಟುಪದಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಅದನ್ನ  ಮುಂದಿನ ಯುವ ಪೀಳಿಗೆ ಉಪಯೋಗವಾಗಲಿ, ಅರಿತುಕೊಳ್ಳಲಿ ಮತ್ತು  ಕನ್ನಡ ಸಾಹಿತ್ಯ, ಸಂಸ್ಕೃತಿ ಇತಿಹಾಸ ಎಲ್ಲರಿಗೂ ತಿಳಿಯಬೇಕು ನಶಿಸಿ ಹೋಗಬಾರದು ಎಂದು ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಮಾಗಡಿ ಗಿರೀಶ್ ಹೇಳಿದರು.

ರವಿಕಾಂತೇಗೌಡ, ಮಾಗಡಿ ಗಿರೀಶ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಹಿರಿಯ ರಂಗಕರ್ಮಿ ಗುಂಡಣ್ಣ, ಶಾರದಾ ಪ್ರತಿಷ್ಠಾನ ಅಧ್ಯಕ್ಷ, ಪ್ರಕಾಶಕ ಮಾಗಡಿ ಗಿರೀಶ್, ಸಾಹಿತಿಗಳಾದ ರಾಜಶೇಖರ್ ಮಠಪತಿ, ಕವಿ ಮತ್ತು ನಾಟಕಕಾರ ಡಾ.ಬೇಲೂರು ರಘುನಂದನ್, ಸುರಭಿರವರು ಮೊದಲಾದವರು ಪದ ಪದ ಕಟ್ಟುಪದ ಪುಸ್ತಕ ಲೋಕರ್ಪಣೆ ಮಾಡಿದರು.

Leave a Reply