ಜಾತಿವಾರು ಜನಗಣತಿ ಬಹಿರಂಗಕ್ಕೆ ಪರ ವಿರೋಧ

3 years ago

ಬೆಂಗಳೂರು: ಬಿಹಾರದಲ್ಲಿ ಜಾತಿವಾರು ಜನಗಣತಿ ವರದಿ ಬಹಿರಂಗ ಪಡಿಸಿದ ಬೆನ್ನಲ್ಲೇ ರಾಜ್ಯದಲ್ಲೂ ಜಾತಿಗಣತಿ ವರದಿ ಬಹಿರಂಗಕ್ಕೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಇದರ ಬೆನ್ನಲ್ಲೇ ಜಾತಿ ಜನಗಣತಿ‌ ವರದಿ ಬಹಿರಂಗಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಈ ವರದಿ ಅವೈಜ್ಞಾನಿಕವಾಗಿದೆ. ಆಯೋಗದ ಹಿಂದಿನ ಅಧ್ಯಕ್ಷರು ಸಿದ್ದ ಪಡಿಸಿದ ವರದಿಯಲ್ಲಿ ಹಲವು ಲೋಪಗಳಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವರದಿ ಸ್ವೀಕರಿಸಿ ಅದನ್ನು ಜಾರಿಗೆ ತರುವುದನ್ನು ವಿರೋಧಿಸಿ ತೆರೆಮರೆಯಲ್ಲಿ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಈ ವರದಿಯನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದು ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಇವರ ಜೊತೆಗೆ ಒಕ್ಕಲಿಗರ ಸಂಘ ಕೂಡ ಇದೇ ನಿಲುವು ತಳೆದಿದೆ.

ಈ ಹಿನ್ನೆಲೆಯಲ್ಲಿ ಲಿಂಗಾಯತ ನಾಯಕರ ಜೊತೆಗೆ ಒಕ್ಕಲಿಗ ನಾಯಕರ ಮಾತುಕತೆ ಕೂಡ ನಡೆಯುತ್ತಿದೆ.  ಜಾತಿ ಜನಗಣತಿ ವಿರೋಧಿಸಿ ಜಂಟಿ ಹೋರಾಟಕ್ಕೆ ಸಿದ್ದತೆ ಆರಂಭ ಆಗಿದೆ. ವರದಿ ಜಾರಿ ಕ್ರಮ ವಿರೋಧಿಸಿ ಒಕ್ಕಲಿಗ ಸಮಯದಾಯದ ನಾಯಕರು ಹೋರಾಟದ ರೂಪ ನೀಡಲು ಸಜ್ಜಾಗಿದ್ದಾರೆ.

Leave a Reply