ಕೆ.ಎಸ್.ಈಶ್ವರಪ್ಪ ವಿರುದ್ದ ಎನ್.ಎಸ್.ಯು.ಐ. ವಿದ್ಯಾರ್ಥಿ ಕಾಂಗ್ರೆಸ್ ನಿಂದ ಪ್ರತಿಭಟನೆ

5 years ago

ಅರೆಹುಚ್ಚನಂತೆ ವರ್ತಿಸುತ್ತಿರುವ ಸಚಿವ ಈಶ್ವರಪ್ಪರವರನ್ನ ನಿಮ್ಯಾನ್ಸ್ ಆಸ್ಪತ್ರೆಗೆ ದಾಖಲಿಸಿ: ಕೀರ್ತಿ ಗಣೇಶ್

ಬೆಂಗಳೂರು: ಭಾರತಮಾತೆ, ಸಂಸ್ಕೃತಿ, ದೇಶಭಕ್ತಿ ಎಂದು ಹೇಳುವ ಹಿರಿಯ ರಾಜಕಾರಣಿ ಸಚಿವ ಕೆ.ಎಸ್.ಈಶ್ವರಪ್ಪ ಅವರದು ಯಾವ ಸಂಸ್ಕೃತಿ ಎಂಬುದು ಅವರು ಆಡುವ ಮಾತುಗಳಿಂದ ಗೊತ್ತಾಗುತ್ತದೆ, ಅವರದು ಯಾವ ಸಂಸ್ಕೃತಿ ಎಂದು ತಿಳಿಯುತ್ತದೆ ಎಂದು ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಕಿಡಿಕಾರಿದರು.

ಗ್ರಾಮೀಣಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಕುರಿತು ಕೀಳುಮಟ್ಟದ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಎನ್.ಎಸ್.ಯು.ಐ. ಸಂಘಟನೆ ರೇಸ್ ಕೋರ್ಸ್ ಕಾಂಗ್ರೆಸ್ ಭವನ, ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಹಾಗೂ ಸಚಿವರ ಮನೆ ಮುತ್ತಿಗೆ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮದಲ್ಲಿ ಮಾತಾಡಿದ ಕೀರ್ತಿ ಗಣೇಶ್, ಅರೆ ಹುಚ್ಚನಂತೆ ಮಾತನಾಡುತ್ತಿರುವ ಸಚಿವ ಈಶ್ವರಪ್ಪರವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು. ಈ ಹಿಂದೆ ಹಲವಾರು ಕಾಂಗ್ರೆಸ್ ನಾಯಕರ ವಿರುದ್ಧ ಕೀಳುಮಟ್ಟದ ಪದಗಳನ್ನು ಬಳಸಿದ್ದಾರೆ. ಇದುಸಚಿವ ಸ್ಥಾನಕ್ಕೆ ಶೋಭೆಯಲ್ಲ. ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಈಶ್ವರಪ್ಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೆ ಸಚಿವ ಸಂಪುಟದಿಂದ ಈಶ್ವರಪ್ಪರವರನ್ನು ವಜಾ ಮಾಡಬೇಕು ಎಂದು ಒತ್ತಾಯ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ರಫೀಕ್, ಮಾರುತಿ ಸೂರಜ್, ಮಹಮದ್, ಎರಿಕ್ ಸ್ಪೀಫನ್, ನಿಯಾಜ್, ಪ್ರಜ್ವಲ್ ಮತ್ತು ವಿದ್ಯಾರ್ಥಿ ಸಂಘಟನೆಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಚಿವ ಈಶ್ವರಪ್ಪರವರ ಮನೆ ಮುತ್ತಿಗೆ ಹಾಕಲು ಹೋದಾಗ ಪೊಲೀಸರು ಎನ್.ಎಸ್.ಯು.ಐ. ಕಾರ್ಯಕರ್ತರನ್ನ ಬಂಧಿಸಿದರು.

Leave a Reply