ಜಾತಿ ರಾಜಕಾರಣ ಮಾಡಲ್ಲ ,ಕಾಂಗ್ರೆಸ್ ಪಕ್ಷವೆ ನನ್ನ ಜಾತಿ: ಬಿ.ಕೆ.ಹರಿಪ್ರಸಾದ್

4 years ago

ಬೆಂಗಳೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿರುವ ಬಿ.ಕೆ.ಹರಿಪ್ರಸಾದ್ ರವರು ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದರು. ರಾಷ್ಟಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬೆಂಗಳೂರುನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜ್ ಕುಮಾರ್, ಜಿ.ಶೇಖರ್, ಜಿ.ಕೃಷ್ಣಪ್ಪ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಾತಾಡಿದ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೋನಿಯಗಾಂಧಿ, ರಾಹುಲ್ ಗಾಂಧಿಯವರು ನನ್ನ ಮೇಲೆ ವಿಶ್ವಾಸವಿಟ್ಟು ವಿರೋಧ ಪಕ್ಷಕ್ಕೆ ನೇಮಕ ಮಾಡಿದ್ದಾರೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ ಜಾತಿ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷವೆ ನನ್ನ ಜಾತಿ. 17ರಾಜ್ಯಗಳಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ಬಿ.ಜೆ.ಪಿ. ಸರ್ಕಾರ ನಿಶಕ್ತಿಯಾಗಿದೆ. ಲೋಕಸಭಾ ಸದಸ್ಯರು, ಮಂತ್ರಿಗಳು, ಶಾಸಕರು ಕೇಂದ್ರದ ಬಳಿ ಮಾತನಾಡಲು ಆಶಕ್ತರಾಗಿದ್ದಾರೆ. ನಾಡಿನ ಸ್ವಾಭಿಮಾನಕ್ಕೆ ಬಿ.ಜೆ.ಪಿ. ಪಕ್ಷದಿಂದ ಧಕ್ಕೆಯಾಗಿದೆ ಎಂದರು.

ಕಾಂಗ್ರೆಸ್ ಭವನದಲ್ಲಿ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರಿಗೆ ಸನ್ಮಾನಿಸಲಾಯಿತು.

Leave a Reply