ಬೆಂಗಳೂರು: ರಾಜ್ಯದಲ್ಲಿ ಯಾವುದೇ ಹೊಸ ಮಧ್ಯದಂಗಡಿಗಳಿಗೆ ಪರವಾನಗಿ ನೀಡುವುದಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಮದ್ಯದ ಶಾಪ್ ತೆರೆಯದೆ ಇದ್ದರೆ ಅಂತಹ ಲೈಸೆನ್ಸ್ ಗಳನ್ನು ಹರಾಜು ಮೂಲಕ ಮರುಹಂಚಿಕೆಗೆ ಅಬಕಾರಿ ಇಲಾಖೆ ಮುಂದಾಗಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಹರಾಜು ಹಾಕುವ ಸಮಯದಲ್ಲಿ ಮೀಸಲಾತಿ ನೀಡಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಕರಡು ಪ್ರಸ್ತಾವನೆ ಸಿದ್ಧಗೊಂಡಿದ್ದು ಸಿಊ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪರವಾನಿಗೆದಾರರು ಸತ್ತಿರುವ ಪ್ರಕರಣ ಹಾಗೂ ಪರವಾನಗಿ ನವೀಕರಣ ಮಾಡದೇ ಇರುವ ಕಾರಣದಿಂದ ಬಾಕಿ ಇರುವ ಲೈಸೆನ್ಸ್ ಹರಾಜು ಮಾಡಲು ತೀರ್ಮಾನ ಮಾಡಲಾಗಿದೆ. ಇದನ್ನು ಬಿಟ್ಟರೆ ಹೊಸದಾಗಿ ಯಾವುದೇ ಮದ್ಯದ ಅಂಗಡಿಗಳನ್ನು ನೀಡುವುದಿಲ್ಲ ಎಂದರು.
ಪೆಂಡಿಂಗ್ ಇರುವ CL-2,(ಎಂಆರ್ಪಿ) CL-9, (ಬಾರ್ ಅಂಡ್ ರೆಸ್ಟೋರೆಂಟ್) CL-11ಲೈಸೆನ್ಸ್ ಹರಾಜು ಮಾಡಲಾಗುತ್ತದೆ. ಸುಮಾರು 579 ಲೈಸನ್ಸ್ ಹರಾಜಿಗೆ ಅಬಕಾರಿ ಇಲಾಖೆ ನೋಟಿಫಿಕೇಷನ್ ಹೊರಡಿಸಿದೆ. ಹೊಸ ಸಿಎಲ್2 ಲೈಸೆನ್ಸ್ ಹಂಚಿಕೆ 1992ರಿಂದಲೇ ಸರ್ಕಾರ ನಿಲ್ಲಿಸಿತ್ತು. ಇಲ್ಲಿಯವರೆಗೆ CL-2, CL-9, CL-11 ಲೈಸೆನ್ಸ್ ಪಡೆದು ಅಂಗಡಿ ತೆರೆಯದೇ , ಲೈಸೆನ್ಸ್ ರಿನಿವಲ್ ಮಾಡದೇ ಇರುವ 579 ಲೈಸೆನ್ಸ್ ಹರಾಜು ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಸದ್ಯ ಈ ಹರಾಜಿನ ಕುರಿತು ನೋಟಿಫಿಕೇಷನ್ ಅಬಕಾರಿ ಇಲಾಖೆ ಹೊರಡಿಸಲಿದೆ. 10 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಮುಂದೆ ನವೀಕರಣ ಮಾಡದ ಲೈಸೆನ್ಸ್ ಗಳನ್ನ 5 ವರ್ಷಕ್ಕೊಮ್ಮೆ ಹರಾಜು ಹಾಕಲು ತೀರ್ಮಾನ ಮಾಡಲಾಗಿದೆ ಎಂದರು.
ಉಳಿಕೆ ಲೈಸೆನ್ಸ್ ಗಳನ್ನು ಹರಾಜು ಮಾಡುವುದರಿಂದ ಎರಡು ಸಾವಿರ ಕೋಟಿ ಆದಾಯ ನಿರೀಕ್ಷೆ ಇದೆ, ಅದಕ್ಕಾಗಿಯೇ ಹರಾಜು ಮಾಡುತ್ತಿದ್ದೇವೆ ಎಂದರು.



