ಬಿಜೆಪಿ ಮುಳುಗುತ್ತಿರುವ ಹಡಗು, ಚಿತ್ತಾಪುರದಿಂದ ಚಾಮರಾಜನಗರದವರೆಗೂ ಕಾಂಗ್ರೆಸ್ ಬಾವುಟ ಹಾರುವುದು ನಿಶ್ಚಿತ. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರನ್ನು ಕಣ್ಣೀರು ಹಾಕಿಸಿ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಯಿತು. ಅಲ್ಲೇ ಇದ್ದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಕೀಳಾಗಿ ನಡೆಸಿಕೊಂಡಿದ್ದರಿಂದ ಅವರಿಬ್ಬರು ನಮ್ಮ ಪಕ್ಷಕ್ಕೆ ಬಂದಿದ್ದಾರೆ.
ನಮ್ಮ ಪಕ್ಷದಲ್ಲಿ ನಾಯಕತ್ವದ ಕೊರತೆಯಿಲ್ಲ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇದ್ದಾರೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಇದ್ದಾರೆ. ಇದಕ್ಕಿಂತ ನಾಯಕತ್ವ ಬೇಕೇ? ಇಂತಹ ನಾಯಕತ್ವ ಬಿಜೆಪಿಯಲ್ಲಿ ಇದಿಯೇ?
ಬಿಜೆಪಿಗರು ಸಿಎಂ ಹೆಸರಿನಲ್ಲಿ ಮತಕೇಳುವ ಧೈರ್ಯ ಇದಿಯೇ? ಆದರೆ ಬಿಜೆಪಿಗರು ಇಂದು ಓಟು ಕೇಳುತ್ತಿರುವುದು ಪ್ರಧಾನಿ ಮೋದಿಯ ಹೆಸರಿನಲ್ಲಿ.ಇತ್ತೀಚೆಗೆ ಪ್ರಧಾನಿ ಮೋದಿ ಅವರು ನಾರಾಯಣಪುರ ಗೆಟ್ ಉದ್ಘಾಟನೆ ಮಾಡುವುದಕ್ಕೆ ಬಂದಿದ್ದರು, ಆದರೆ ಅದನ್ನು ಕಟ್ಟಿದ್ದು AICC ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರು.
ಈ ಸರ್ಕಾರದಲ್ಲಿ ಹಳ್ಳಿಯಿಂದ ದಿಲ್ಲಿಯವರಿಗೆ ಮಾರಾಟ ಮಾಡುವುದಕ್ಕೆ ಇಟ್ಟಿದ್ದಾರೆ.KKRDBಯಲ್ಲಿ ಅವ್ಯಾಹತವಾದ ಭ್ರಷ್ಟಾಚಾರ ನಡೆದಿದೆ. ಜನಸಾಮಾನ್ಯರ ದುಡ್ಡು ಲೂಟಿ ಮಾಡಿದ ಅಧಿಕಾರಿಗಳನ್ನು ನಾವು ಅಧಿಕಾರಕ್ಕೆ ಬಂದ ನಂತರ ಜೈಲಿಗೆ ಕಳಿಸುತ್ತೇವೆ. ಇದು ನಾನು ನಿಮಗೆ ಕೊಡುವ ಗ್ಯಾರೆಂಟಿ ಆಗಿದೆ




