ಬೆಂಗಳೂರು : ದೂರದರ್ಶನದ ಉಪ ಮಹಾ ನಿರ್ದೇಶಕರಾಗಿ 2008-2012ರ ಅವಧಿಯಲ್ಲಿ ದೂರದರ್ಶನದ ಉಪಮಹಾ ನಿರ್ದೇಶಕರಾಗಿ ತಾವು ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ದೂರದರ್ಶನದ ಉಪನಿರ್ದೇಶಕರಾಗಿದ್ದ ಮೋಹನ್ ರಾಮ್ ನನ್ನ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡಿ, ಮಾನನಷ್ಟ ಉಂಟು ಮಾಡಿದ್ದರೆಂದು ಆರೋಪಿಸಿ ಡಾ.ಮಹೇಶ ಜೋಶಿ ಭಾರತೀಯ ದಂಡ ಸಂಹಿತೆ 499 ಮತ್ತು 500ರಡಿ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧ ಪಟ್ಟಂತೆ ದಾಖಲಿಸಿದ್ದ ಮಾನನಷ್ಟ ಪ್ರಕರಣದ ತೀರ್ಪು ಪ್ರಕಟವಾಗಿದೆ.
ಮೋಹನ ರಾಮ್ ಇವರು “ಅಪರಾಧಿ” ಎಂದು 8ನೆಯ ಮೆಟ್ರೋ ಪಾಲಿಟನ್ ಹೆಚ್ಚುವರಿ ನ್ಯಾಯಾಲಯ ತೀರ್ಮಾನಿಸಿದ್ದು , ಒಂದು ವರ್ಷದ ಜೈಲು ಮತ್ತು ರೂ 10,000 ಗಳ ದಂಡ ಪಾವತಿ ಮಾಡಲು ವಿಫಲರಾದಲ್ಲಿ, ಮೂರು ತಿಂಗಳ ಹೆಚ್ಚುವರಿ ಜೈಲುವಾಸ ಅನುಭವಿಸ ಬೇಕೆಂದು ನ್ಯಾಯಾಧೀಶರಾದ ನಾಗೇಶಾ ತೀರ್ಪು ನೀಡಿದ್ದಾರೆ.
ಮೋಹನ ರಾಮ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿರುವ ಘನ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ 499 ಮತ್ತು 500ರ ಶಿಕ್ಷಾರ್ಹ ಅಪರಾಧಗಳ ಅಪರಾಧಿ ಎಂದು ಪರಿಗಣಿಸಿ ಅಪರಾಧಿ ದಂಡ ಸಂಹಿತೆ 255(2)ರ ಅವಕಾಶದಡಿ ಒಂದು ವರ್ಷಗಳ ಜೈಲು ಮತ್ತು ರೂ 10,000ಗಳ ದಂಡ ಪಾವತಿಸುವ ಶಿಕ್ಷೆ ವಿಧಿಸಿದೆ. ಒಂದು ವೇಳೆ ದಂಡ ಪಾವತಿ ಮಾಡಲು ವಿಫಲರಾದರೆ ಇನ್ನೂ ಮೂರು ತಿಂಗಳ ಹೆಚ್ಚಿನ ಜೈಲುವಾಸದ ಶಿಕ್ಷೆಯನ್ನು ಅನುಭವಿಸ ಬೇಕೆಂದು ನ್ಯಾಯಾಲಯವು ಆದೇಶಿಸಿದೆ.ಈ ಕುರಿತ ತೀರ್ಪಿನ ಪ್ರತಿಯನ್ನು KABC030152462011 ಈ ಸಂಖ್ಯೆ ಮೂಲಕ ಪಡೆಯ ಬಹುದು.
ಈ ಶಿಕ್ಷೆಯು ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಕುತ್ಸಿತ ಮನೋಭಾವದಿಂದ ದ್ವೇಷವನ್ನು ಸಾಧಿಸುವವರಿಗೆ ಒಂದು ಪಾಠವಾಗಲಿದೆ ಎಂದು ನ್ಯಾಯಾಂಗ ಪರಿಣಿತರು ವ್ಯಾಖ್ಯಾನಿಸಿದ್ದು ಶಿಕ್ಷೆಗೆ ಗುರಿಯಾದ ಅಪರಾಧಿಯು ಪೆನ್ ಷನ್ ಸೇರಿದಂತೆ ಸರ್ಕಾರಿ ಸೌಲಭ್ಯವನ್ನು ಪಡೆಯಲಾಗದು ಎಂದು ವಿಶ್ಲೇಷಿಸಿದ್ದಾರೆ.
ಡಾ.ಮಹೇಶ ಜೋಶಿಯವರ ಪರವಾಗಿ ವಕೀಲರಾದ ಸಿ.ವಿ.ಸುಧೀಂದ್ರ ಅವರು ಯಶಸ್ವಿಯಾಗಿ ವಾದವನ್ನು ಮಂಡಿಸಿದ್ದು, ಆರೋಪಿಯ ಪರವಾಗಿ ವಕೀಲರಾದ ಕೆ.ದಿವಾಕರ್ ವಾದವನ್ನು ಮಂಡಿಸಿದ್ದಾರೆ.



