ನಿರ್ಮಾಪಕನಿಗೆ ಹನಿಟ್ರ್ಯಾಪ್ ಗಾಳ: ನಿರ್ದೇಶಕ ಬಂಧನ

2 years ago

#Honeytrap #producer #Director #arrested #Mahadev #Ravindra

ಬೆಂಗಳೂರು: ನಿರ್ದೇಶಕ ಹಣಕ್ಕಾಗಿ ನಿರ್ಮಾಪಕರೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕುವಂತೆ ಮಾಡಿದ ಘಟನೆ ನಡೆದಿದೆ.

ಹನಿಟ್ರ್ಯಾಪ್‌ ಮಾಡಿ ಯುವತಿಯರ ಮೂಲಕ ನಿರ್ಮಾಪಕರೊಬ್ಬರಿಂದ ಹಣ ಸುಲಿಗೆ ಮಾಡಿದ ನಿರ್ದೇಶಕನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿರ್ದೇಶಕ ರವೀಂದ್ರ ಬಂಧಿತ ಆರೋಪಿಯಾಗಿದ್ದು, ನಿರ್ಮಾಪಕ ಚಿಂಗಾರಿ ಮಹಾದೇವ್ ಹನಿಟ್ರ್ಯಾಪ್ ಗೆ ಒಳಗಾದವರು.

ರವೀಂದ್ರ ನಿರ್ಮಾಪಕರಿಗೆ ಹುಡುಗಿಯರ ಮುಖಾಂತರ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಮಾತ್ರವಲ್ಲ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.

ನಿರ್ಮಾಪಕ ಮಹಾದೇವ್ ಅನ್ನಪೂರ್ಣೇಶ್ಮರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀಂದ್ರ ವಿರುದ್ಧ ದೂರು ನೀಡಿದ್ದರು. ಮಹಾದೇವ್ ಚಿಂಗಾರಿ, ಶ್ರೀಕಂಠ, ಶಿಶಿರ ಸಿನಿಮಾಗಳನ್ನು  ನಿರ್ಮಾಣ ಮಾಡಿದ್ದಾರೆ.

ಬಾರಬಾತ್‌ ಸಿನಿಮಾ ನಿರ್ದೇಶಕ ರವೀಂದ್ರ ಯುವತಿಯರ ಮೂಲಕ ಹನಿಟ್ರ್ಯಾಪ್‌ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply