ಮಾಲಗತ್ತಿಯಲ್ಲಿ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆ

4 years ago

ಕೆಂಭಾವಿ: ಶಿಕ್ಷಣ ಪದ್ಧತಿಯಲ್ಲಿ ನಮ್ಮ ಮಕ್ಕಳಿಗೆ ಜೀವನ ಪಾಠದ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಮಾಲಗತ್ತಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕೇಂದ್ರ ತೆರೆಯಲಾಗಿದೆ ಎಂದು ನಗನೂರ ವಲಯ ಮೇಲ್ವಿಚಾರಕಿ ಕುಮಾರಿ ಸಾವಿತ್ರಿ ಗಾಳಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಮಂಜೂರಾಗಿರುವ ಮಾಲಗತ್ತಿಯ ನಾಲ್ಕನೆಯ ಅಂಗನವಾಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಹೊಸ ಅಂಗನವಾಡಿ ಕೇಂದ್ರ ತೆರೆಯಲಾಗಿದೆ. ಸದರಿ ಕೇಂದ್ರವೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ಗ್ರಾ.ಪಂ. ಸದಸ್ಯ ಆರ್. ಎಸ್ ಮಾಲಗತ್ತಿ‌ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ ಹಾಗೂ ಅಂಗನವಾಡಿ ಕೇಂದ್ರವೇ ಮೊದಲ ಶಿಕ್ಷಣ ಕೇಂದ್ರವಾಗಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಮೂರರಿಂದ ಆರು ವರ್ಷದೊಳಗಿನ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡುವ ಜವಾಬ್ದಾರಿಯು ಅಂಗನವಾಡಿ ಶಿಕ್ಷಕಿಯರ ಮೇಲಿದೆ ಎಂದರು.

ವಿಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ದೊರೆ, ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರಾದ ಮಹಾಂತೇಶ ಸತ್ಯಂಪೇಟೆ, ವೆಂಕೋಬ ದೊರೆ, ಮಾಜಿ ಸದಸ್ಯ ದೌಲತ್ ಪಟೆಲ್ ಮುಖಂಡರಾದ ಹೈಯ್ಯಾಳಪ್ಪ ಸಾಹುಕಾರ, ಸಮತಾ ಸೈನಿಕ ದಳದ ಅಧ್ಯಕ್ಷ ಪರಶುರಾಮ ಗಡ್ಡದ, ಬಸವರಾಜ ದೇವಾಪುರ, ಶಂಕ್ರಯ್ಯ ಸ್ವಾಮಿ ಹಿರೆಮಠ, ಶರಮತ್ ಸಾಬ್ ಮಕಾಂದಾರ, ಮೇಲ್ವಿಚಾರಕಿಯರಾದ ಶಶಿಕಲಾ ಗಾಳಿ, ಪದ್ಮಾವತಿ ಡಿ. ನಾಯಕ, ಜಯಶ್ರಿ ಬಿರಾದಾರ, ಅಂಗನವಾಡಿ ಶಿಕ್ಷಕಿಯರಾದ ಬಸಮ್ಮ ಗುತ್ತೆದಾರ, ಸುವರ್ಣ ಸಿ ಯನಗುಂಟಿ, ಶಿಲ್ಪಾ ಆರ್. ಮಾಲಗತ್ತಿ ಸೇರಿದಂತೆ ಹಲವರು ಹಾಜರಿದ್ದರು.

Leave a Reply