ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಎನ್.ಚಂದ್ರಬಾಬು ನಾಯ್ಡು

2 years ago

ಹೈದರಾಬಾದ್: ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ನಾಲ್ಕನೇ ಅವಧಿಗೆ ಸಿಎಂ ಆಗಿ ಅಧಿಕಾರಕ್ಕೆ ಏರಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ, ನಿತಿನ್ ಗಡ್ಕರಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಾಯ್ಡು ಅವರೊಂದಿಗೆ 24 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ 17 ಸಚಿವರು ಹೊಸಬರು. ನಾಯ್ಡು ಅವರ ಸಂಪುಟದಲ್ಲಿ ಮೂವರು ಮಹಿಳೆಯರು, ಎಂಟು ಹಿಂದುಳಿದ ವರ್ಗಗಳ ನಾಯಕರು, ಇಬ್ಬರು ಎಸ್‌ಸಿ, ಒಬ್ಬ ಎಸ್‌ಟಿ ಮತ್ತು ಒಬ್ಬ ಮುಸ್ಲಿಂ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆಂಧ್ರದ ನೂತನ ಸಚಿವರ ಸಂಪೂರ್ಣ ಪಟ್ಟಿ:

ಪವನ್ ಕಲ್ಯಾಣ್
ನಾರಾ ಲೋಕೇಶ್
ಕಿಂಜರಾಪು ಅಚ್ಚನ್ನಾಯ್ಡು
ಕೊಲ್ಲು ರವೀಂದ್ರ
ನಾದೆಂಡ್ಲ ಮನೋಹರ್
ಪೊಂಗೂರು ನಾರಾಯಣ
ಅನಿತಾ ವಂಗಲಪುಡಿ
ಸತ್ಯ ಕುಮಾರ್ ಯಾದವ್
ಡಾ. ನಿಮ್ಮಾ ರಾಮಾನಾಯ್ಡು
ನಸ್ಯಂ ಮೊಹಮ್ಮದ್ ಫಾರೂಕ್
ಆನಂ ರಾಮನಾರಾಯಣ ರೆಡ್ಡಿ
ಪಯ್ಯಾವುಳ ಕೇಶವ
ಅನಗಣಿ ಸತ್ಯ ಪ್ರಸಾದ್
ಕೊಲುಸು ಪಾರ್ಥಸಾರಥಿ
ಡಾ. ಡೋಲಾ ಬಾಲ ವೀರಾಂಜನೇಯ ಸ್ವಾಮಿ
ಗೊಟ್ಟಿಪಾಟಿ ರವಿಕುಮಾರ್
ಕಂದುಲ ದುರ್ಗೆಸ್ಜ್
ಗುಮ್ಮಡಿ ಸಂಧ್ಯಾ ರಾಣಿ
ಬಿ.ಸಿ.ಜನಾರ್ದನರೆಡ್ಡಿ
ಟಿ ಜಿ ಭರತ್
ಎಸ್.ಸವಿತಾ
ವಾಸಮಶೆಟ್ಟಿ ಸುಭಾಷ್
ಕೊಂಡಪಲ್ಲಿ ಶ್ರೀನಿವಾಸ್
ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ

Leave a Reply