ಪರಪ್ಪನ ಅಗ್ರಹಾರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕೊಲೆ ಆರೋಪಿ

2 years ago

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಅನ್ನ, ನೀರು ಸ್ವೀಕರಿಸಲು ನಿರಾಕರಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾನೆ.

ಉಡುಪಿಯ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲಿನಲ್ಲಿರುವ ಚೌಗಲೆ ನಿನ್ನೆ ಬೆಳಿಗ್ಗೆಯಿಂದ ತಿಂಡಿ ಮಧ್ಯಾಹ್ನ ಊಟ ಮಾಡದೆ ಹಠ ಮಾಡುತ್ತಾ ಉಪವಾಸ ಕುಳಿತಿರುವ ಆತನನ್ನು ನಿಭಾಯಿಸಲು ಜೈಲು ಸಿಬ್ಬಂದಿ ಹರಸಾಹಸಪಟ್ಟರು.

ಕಳೆದ 2023ರಲ್ಲಿ ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ ಉಡುಪಿಯಲ್ಲಿನ ಮನೆಗೆ ನುಗ್ಗಿ ಹಸೀನಾ (48) ಮತ್ತು ಆಕೆಯ ಮಕ್ಕಳಾದ ಅಫ್ಸಾನ್(23), ಅಸೀಮ್ (12) ಮತ್ತು ಅಯ್ನಾಜ್ (21) ಕೊಲೆ ಮಾಡಿದ್ದ. ಸದ್ಯ ಈಗ ಆರೋಪಿ ಪ್ರವೀಣ್ ಸೆಂಟ್ರಲ್ ಜೈಲ್ ನ ಪ್ರತ್ಯೇಕ ಸೆಲ್ ನಲ್ಲಿ ಸೆರೆವಾಸದಲ್ಲಿದ್ದಾನೆ.

ತನ್ನ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನಗರದ ನ್ಯಾಯಾಲಯಕ್ಕೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಬೆಳಗ್ಗಿನ ತಿಂಡಿ, ಮಧ್ಯಾಹ್ನ ಊಟ ಮಾಡದೆ ಉಪವಾಸ ನಡೆಸುತ್ತಿದ್ದಾನೆ. ಈತನಿಗೆ ಜೀವ ಬೆದೆರಿಕೆ ಇರುವ ಹಿನ್ನೆಲೆ ಪ್ರತ್ಯೇಕ ಸೆಲ್ ನಲ್ಲಿ ಇಡಲಾಗಿದೆ.

ಪ್ರತ್ಯೇಕ ಸೆಲ್ ನಲ್ಲಿ ಇರಲು ತಕರಾರು ಎತ್ತಿದ್ದು, ಸೆಂಟ್ರಲ್ ಜೈಲ್ ನ ಪ್ರಧಾನ ಬ್ಲಾಕ್ ಗೆ ತನ್ನನ್ನು ವರ್ಗಾವಣೆ ಮಾಡುವಂತೆ  ಮನವಿ ಮಾಡಿದ್ದಾನೆ. ಆದರೆ ಪ್ರವೀಣ್ ಚೌಗುಲೆಗೆ ಜೀವ ಬೆದರಿಕೆ ಇರುವುದರಿಂದ ಪ್ರತ್ಯೇಕ ಸೆಲ್ ನ ಅಗತ್ಯ ಇದೆ ಎಂದು ಜೈಲ್ ನ ಸಹಾಯಕ ಅಧೀಕ್ಷಕರು ಕೋರ್ಟ್ ಗೆ ಸ್ಪಷ್ಟನೆ ನೀಡಿದ್ದಾರೆ.

2023ರ ನವೆಂಬರ್ 12ರಂದು ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಆರೋಪಿ ಅರುಣ್ ಚೌಗುಲೆ ಕೊಲೆ ಮಾಡಿ ಕುಟುಂಬದ ವೃದ್ಧೆ ಹಾಜಿರಾ ಹತ್ಯೆಗೆ ಯತ್ನಿಸಿದ್ದ. ಜೀವ ಬೆದರಿಕೆ ಹಿನ್ನೆಲೆ ನವೆಂಬರ್ 27ರಂದು ಉಡುಪಿಯಿಂದ ಬೆಂಗಳೂರಿಗೆ ಆರೋಪಿಯನ್ನು ಪೊಲೀಸರು ವರ್ಗಾಯಿಸಿದ್ದರು.

ಪ್ರಕರಣದ ವಿವರ: 2023ರ ನವೆಂಬರ್ 12ರಂದು ಏಕಾಏಕಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು  ಕೇವಲ  15 ನಿಮಿಷಗಳಲ್ಲಿ ಹತ್ಯೆ ಮಾಡಿ ಅರುಣ್ ಚೌಗುಲೆ  ಪರಾರಿಯಾಗಿದ್ದ. ನೇಜಾರು ನಿವಾಸಿ ಹಸೀನಾ (48) ಅವರ ಮಕ್ಕಳಾದ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) ಹಾಗೂ 8 ನೇ ತರಗತಿಯ ಅಸೀಮ್(12) ಕೊಲೆಯಾಗಿದ್ದರು.

ಹತ್ಯೆಗೀಡಾದ ಯುವತಿ ಅಫ್ನಾನ್ ಹಾಗೂ ಕೊಲೆ ಮಾಡಿದ ಆರೋಪಿ ಇಬ್ಬರೂ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕೊಲೆಯಾದ ಯುವತಿಗೂ ಆರೋಪಿಗೂ ಪರಿಚಯವಿತ್ತು.

Leave a Reply