ಈ ಕ್ಷಣಕ್ಕೂ ಜಾತೀಯ ಅಸಮಾನತೆಯ ಕೂಪವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದೇ, ಅಸಮಾನತೆಯನ್ನೇ ಪೋಷಿಸಿಕೊಂಡು ಬದುಕಿರುವ ಮೋಹನ್ ಭಾಗವತ್ ಅಂತಹವರು, ಆಗಾಗ್ಗೆ ಪ್ರತ್ಯಕ್ಷರಾಗಿ, ಭಾರತ ಹಿಂದೂ ರಾಷ್ಟ್ರ ಆಗಲಿದೆ ಎಂದು ಹೇಳುವುದು ಹಾಸ್ಯಾಸ್ಪದ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಭಾರತವು ಸರ್ವ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಒಳಗೊಂಡಂತಹ ಜಾತ್ಯಾತೀತ ದೇಶ. ಇದನ್ನೇ ನಮ್ಮ ದೇಶದ ಸಂವಿಧಾನ ಸ್ಪಷ್ಟವಾಗಿ ಹೇಳಿದೆ.ಆದರೆ ಒಂದು ದಿನವೂ ಈ ದೇಶದ ಸಂವಿಧಾನದ ಪುಟಗಳಲ್ಲಿ ಏನಿದೆ ಎಂಬುದನ್ನು ಕಣ್ಣೆತ್ತಿಯೂ ನೋಡದೇ ಬರೀ ಮನುಸ್ಮೃತಿಯನ್ನೇ ಭಾಗವತ್ ಅವರಿಗೆ ಧರ್ಮ ಎಂದರೆ ಏನೆಂಬುದು ಈವರೆಗೂ ತಿಳಿದಿಲ್ಲ.
ಈ ನೆಲದಲ್ಲಿ ಸ್ವಾಮಿ ವಿವೇಕಾನಂದರಿಂದ ಹಿಡಿದು ಬಹಳಷ್ಟು ಮಂದಿ ಸಂತರು, ಧರ್ಮ ಎಂದರೆ ಏನು ಎಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಿ ಹೋಗಿದ್ದಾರೆ.
ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅಂತಹ ಮಹನೀಯರೂ ತಮಗೆ ಕುಡಿಯಲು ನೀರು ಕೊಡದ, ತಮ್ಮನ್ನು ಸಮಾನವಾಗಿ ಕಾಣದ ಹಿಂದೂ ಧರ್ಮದ ಅಮಾನವೀಯತೆಯನ್ನು ಪ್ರಶ್ನಿಸಿ, ಆ ಧರ್ಮವನ್ನೇ ತೊರೆದಿದ್ದಾರೆ.
ಹೀಗಿರುವಾಗ ಭಾರತ ಹಿಂದೂ ರಾಷ್ಟ್ರ ಆಗುತ್ತದೆ ಎಂದು ಆಗಾಗ್ಗೆ ಹೇಳುತ್ತಲೇ ಇರುವ ಮೋಹನ್ ಭಾಗವತ್ ಅವರು ಮೊದಲು ದೇಶದ ಜನರ ಕ್ಷಮೆ ಯಾಚಿಸಲಿ.
ನೊಂದಾಯಿತವಲ್ಲದ ಮತ್ತು ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದುಕೊಂಡು ಇರುತ್ತಿದ್ದ ಸಾವರ್ಕರ್ ಸಿದ್ಧಾಂತ ಪ್ರೇರಿತ RSS ಸಂಸ್ಥೆಯ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸಿ ದೇಶದ ಐಕ್ಯತೆ ಮತ್ತು ಸಾಮರಸ್ಯದ ಆತ್ಮವನ್ನು ಹಾಳು ಮಾಡುತ್ತಿರುವ ಮೋಹನ್ ಭಾಗವತ್ ಅವರು Extra Constitutional Authority ಆಗಿ ವರ್ತಿಸುವ ಪ್ರವೃತ್ತಿಯನ್ನು ಮೊದಲು ನಿಲ್ಲಿಸಲಿ!
– ಡಾ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




