ಬೆಂಗಳೂರು: ಜಾಲಹಳ್ಳಿ ವಾರ್ಡ್-16ರಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹುಟ್ಟುಹಬ್ಬದ ಪ್ರಯುಕ್ತ ಅನಾಥ ಮಕ್ಕಳ ವಸತಿ ಶಾಲೆ ಮಕ್ಕಳು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಅಚರಿಸಿದರು.
ಕೋವಿಡ್-19 ಲಸಿಕಾ ಅಭಿಯಾನ ಮತ್ತು ಆಟೋ ಚಾಲಕರಿಗೆ ಸುರಕ್ಷತಾ ಕಿಟ್ ವಿತರಣೆ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ದಿನಸಿ ಸಾಮಗ್ರಿಗಳ ವಿತರಣೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಂಪ್ಯೂಟರ್ ಲ್ಯಾಬ್, ರಸಾಯನ ಶಾಸ್ತ್ರ ವಿಭಾಗ ಉದ್ಘಾಟನೆಗಳನ್ನು ಜಾಲಹಳ್ಳಿ ಬಿ.ಬಿ.ಎಂ.ಪಿ. ಸದಸ್ಯ ಶ್ರೀನಿವಾಸಮೂರ್ತಿ(ಜಾನಿ), ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀರಾಮ್, ಪ್ರಾಂಶುಪಾಲ ಭೈರೇಗೌಡ ಮತ್ತು ತಿಮ್ಮರಾಯಪ್ಪ, ನಾರಾಯಣಸ್ವಾಮಿ ಮುನಿರಾಜು ಹಾಗೂ ಲಾವಣ್ಯ, ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತಾಡಿದ ಶ್ರೀನಿವಾಸಮೂರ್ತಿ, ಬಡವರ ಪರ ಕಾಳಜಿವುಳ್ಳ ವ್ಯಕ್ತಿತ್ವ, ಅಭಿವೃದ್ದಿಯ ಹರಿಕಾರ ಶಾಸಕ ಮುನಿರತ್ನರವರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೋವಿಡ್-19 ಸಾಂಕ್ರಮಿಕ ರೋಗದಿಂದ ಕಳೆದ 18 ತಿಂಗಳಿಂದ ಬಡವರಿಗೆ ಉದ್ಯೋಗವಿಲ್ಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಬಡವರು ಹಸಿವಿನಿಂದ ಬಳಲಬಾರದು ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ಗಗಳಲ್ಲಿ ಲಕ್ಷಾಂತರ ದಿನಸಿ ಕಿಟ್ ಗಳನ್ನು ಮುನಿರತ್ನ ವಿತರಿಸಿದ್ದಾರೆ. ಕೋವಿಡ್-19 ಲಸಿಕಾ ಅಭಿಯಾನವನ್ನು ಮುನಿರತ್ನ ನೇತೃತ್ವದಲ್ಲಿ ಯಶ್ವಸಿಯಾಗಿ ನಡೆಯುತ್ತಿದೆ ಎಂದರು.
ಕೊವಿಡ್ ಸೋಂಕಿತರಿಗೆ ಆಕ್ಸಿಜನ್ ವ್ಯವಸ್ಥೆ ಮತ್ತು ಉಚಿತವಾಗಿ ಔಷಧಿ ವಿತರಣೆಯನ್ನು ಅವರು ಮುನಿರತ್ನರವರು ನೀಡಿದ್ದಾರೆ. ಸತತ ಜನ ಸಂಪರ್ಕದಲ್ಲಿ ಇರುವ ಆಟೋ ಚಾಲಕರಿಗೆ ತಮ್ಮ ಆರೋಗ್ಯ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಲಿ ಎಂದು ಕೊವಿಡ್ ಸುರಕ್ಷತಾ ಕಿಟ್ ಗಳನ್ನು ಸಹ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
ಜಾಲಹಳ್ಳಿ ಸರ್ಕಾರಿ ಶಾಲೆ ರಾಜ್ಯದಲ್ಲಿ ಉತ್ತಮ ಶಾಲೆಯಂದು ಹೆಗ್ಗಳಿಕೆಗೆ ಪಾತ್ರವಾಗಿದೆ .ಶಾಲೆ ಉನ್ನತಿಕರಣಕ್ಕೆ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಬಡವರ ಪರ ಸದಾ ಚಿಂತನೆ ಮಾಡುವ ಮುನಿರತ್ನ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಉನ್ನತ ಸ್ಥಾನ ಸಿಗಲಿ ಎಂದು ಜಾಲಹಳ್ಳಿ ವಾರ್ಡ್ ನಾಗರಿಕರ ಪರವಾಗಿ ಶುಭ ಕೋರುತ್ತೇನೆ ಎಂದರು.




