ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಸಂಘಗಳ ರಾಜ್ಯಾಧ್ಯಕ್ಷ ಎ.ಅಮೃತ್ ರಾಜ್ ಗೆ ಅಭಿನಂದನೆ

5 years ago

ಬೆಂಗಳೂರು: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎ.ಅಮೃತ್ ರಾಜ್ ಅವರಿಗೆ ಮಹಾಲಕ್ಷ್ಮೀ ಲೇಔಟ್ ಕಛೇರಿ ಸಂಕೀರ್ಣ ಸಭಾಂಗಣದಲ್ಲಿ ಮಹಾಲಕ್ಷ್ಮೀ ಲೇಔಟ್ ವಲಯದ ಕಂದಾಯ, ಇಂಜಿನಿಯರಿಂಗ್ ಮತ್ತು ಆರೋಗ್ಯ ವಿಭಾಗದ ಅಧಿಕಾರಿ, ನೌಕರರಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಕಾರ್ಯಾಕ್ರಮದಲ್ಲಿ ಮಾತಾಡಿದ ಎ.ಅಮೃತ್ ರಾಜ್, ಅಧಿಕಾರಿ ಮತ್ತು ನೌಕರರ ಹಿತ ಕಾಯುವುದು ಸಂಘದ ಕೆಲಸ. ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದ ನೌಕರರಲ್ಲಿ ಕೆಲಸದಲ್ಲಿ ಒತ್ತಡವಿರುತ್ತದೆ ಮತ್ತು ಬಡ್ತಿ ವರ್ಗಾವಣೆ ಮತ್ತು ನೌಕರರ ಮೇಲೆ ದೌರ್ಜನ್ಯಗಳ ವಿರುದ್ದ ಹೋರಾಟಕ್ಕೆ ಸದಾ ಮುಂದೆ ಇದ್ದು ನ್ಯಾಯ ಒದಗಿಸುವ ಜವಾದ್ದರಿ ನಮ್ಮದು ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದೆ. ಕೊಡಗಿನಲ್ಲಿ ಪ್ರವಾಹ ಬಂದಾಗ ಸಂಘದ ವತಿಯಿಂದ 100 ಪೌರ ಕಾರ್ಮಿಕರ ಜೊತೆಯಲ್ಲಿ ಪ್ರವಾಹ ಸಂತಸ್ಥರ ನೆರವಿಗೆ ಹೋದೆವು. ಧರ್ಮಸ್ಥಳ ಕುಡಿಯುವ ನೀರಿನ ಅಭಾವವಾದಾಗ ಲಕ್ಷಾಂತರ ಲೀಟರ್ ನೀರನ್ನು ನೀಡಲಾಯಿತು ಮತ್ತು ಉತ್ತರ ಕರ್ನಾಟಕ ಬಾಗಲಕೋಟೆ, ಬೆಳಗಾಂ ಜಿಲ್ಲೆ ಪ್ರವಾಹದಿಂದ ಜನ ಸಂಕಷ್ಟದಲ್ಲಿ ಇದ್ದರು. ಅವರಿಗೆ ಸಹಾಯಹಸ್ತ ನೀಡಲು ಆಹಾರ ಕಿಟ್ ಗಳನ್ನು ವಿತರಿಸಲಾಯಿತು ಎಂದರು.

ಕೋವಿಡ್ ಸಂದರ್ಭದಲ್ಲಿ 600ಕ್ಕೂ ಹೆಚ್ಚು ಅನಾರೋಗ್ಯ ಪೀಡಿತರಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು. ಪರಿಸರ ಸ್ನೇಹಿ ಗಣೇಶ ಹಬ್ಬ ಮತ್ತು ಮತದಾನ ಬಗ್ಗೆ ಜನಜಾಗೃತಿ ಅಭಿಯಾನವನ್ನು ಪ್ರತಿ ವರ್ಷ ಹಮ್ಮಿಕೊಂಡು ಬರಲಾಗುತ್ತಿದೆ. ಜನರ ಮತ್ತು ನೌಕರರ ನಡುವೆ ಸಂಪರ್ಕ ಸೇತುವಾಗಿ ಸಂಘ ಕೆಲಸ ಮಾಡುತ್ತಿದೆ ಎಂದರು.

ಕೋವಿಡ್-19ಸಾಂಕ್ರಮಿಕ ರೋಗದಿಂದ ಬಿ.ಬಿ.ಎಂ.ಪಿ. 30ಕ್ಕೂ ಹೆಚ್ಚು ನೌಕರರು ಮೃತಪಟ್ಟರು. ನಮ್ಮ ಸಂಘದ ಸತತ ಹೋರಾಟದಿಂದ ಮೃತಪಟ್ಟ ಕುಟುಂಬಗಳಿಗೆ 30 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು ಹಾಗೂ ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಆಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕೆ ಸಂಘದ ವತಿಯಿಂದ ನೀಡಲಾಯಿತು ಎಂದರು.

ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಅವರಣದಲ್ಲಿ ಡಾ.ರಾಜ್ ಕುಮಾರ್ ಅವರ ಪ್ರತಿಮೆ ಪಕ್ಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಜನವರಿ ತಿಂಗಳಲ್ಲಿ ರಾಜ್ ಕುಟುಂಬದವರಿಂದ ಲೋಕರ್ಪಣೆ ಮಾಡಿಸಲಾಗುವುದು ಎಂದರು.

11 ಮಹಾನಗರ ಪಾಲಿಕೆಗಳ ಒಕ್ಕೂಟದ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಸಂಘಗಳ ರಾಜ್ಯಾಧ್ಯಕ್ಷರಾಗಿ ನನ್ನನು ಆಯ್ಕೆ ಮಾಡಿದ ಎಲ್ಲ ಪಾಲಿಕೆ ಅಧಿಕಾರಿ, ನೌಕರರಿಗೆ ಧನ್ಯವಾದಗಳು ಎಂದರು.

ಕಾರ್ಯಪಾಲಕ ಇಂಜಿನಿಯರ್ ತಿಮ್ಮರಸು, ರಂಗನಾಥ್, ಸಾಯಿ ಶಂಕರ್ ಕೆ.ಜಿ.ರವಿ, ಲಿಂಗರಾಜು ಮಂಜೇಗೌಡ, M.L.A ಮಂಜು, ಸಂತೋಷ್ ಕುಮಾರ್ ನಾಯಕ್, ನರಸಿಂಹಮೂರ್ತಿ, ನರಸಿಂಹ,  ಲಲಿತಾ, ಸುನಂದಮ್ಮ, ಮಂಜುಳಾರವರು ಹಾಗೂ ಅಧಿಕಾರಿ, ನೌಕರರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Leave a Reply