ಲೋಕಸಭೆ ಚುನಾವಣೆ: ಗೆದ್ದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

2 years ago

ಬೆಂಗಳೂರು: ಎರಡು ಹಂತಗಳಲ್ಲಿ ನಡೆದ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಕಡಿಮೆಸ್ಥಾನ ಗಳಿಸಿದ್ದು, ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವಿನ ನಗೆಬೀರಿದೆ. ಜೊತೆಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಸಹ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 28ರ ಪೈಕಿ 25 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ನಡುವೆ ಕೂಡ 17 ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕಳೆದ ಲೋಕಸಭಾ ಕ್ಷೇತ್ರಗಳ ಪೈಕಿ 1ರಲ್ಲಿ ಮಾತ್ರ ಗೆಲುವು ದಾಖಲಿಸಿತ್ತು. ಆದರೆ ಈ ಬಾರಿ ಅದೇ ಕ್ಷೇತ್ರದಲ್ಲಿ ಸೂತರೂ 9 ಕ್ಷೇತ್ರಗಲ್ಲಿ ಗೆಲುವು ದಾಖಲಿಸಿ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ. 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಹಾಸನ ಮತ್ತು ಕೋಲಾರ ಮೀಸಲು ಕ್ಷೇತ್ರಗಳಲ್ಲಿ ಗೆಲುವಿನ ಕೇಕೆ ಹಾಕಿದೆ.

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಜಗದೀಶ್ಶೆಟ್ಟರ್, ಬಸವರಾಜ ಬೊಮ್ಮಾಯಿ ಜಯಗಳಿಸಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವ ಭಗವಾನ್ಕೂಬಾ ಬೀದರ್ನಲ್ಲಿ ಸೋಲನುಭವಿಸಿದರೆ, ಇಲ್ಲಿ ಅರಣ್ಯ ಸಚಿವ ಈಶ್ವರ್ಖಂಡ್ರೆ ಪುತ್ರ ಸಾಗರ್ಖಂಡ್ರೆ ಗೆಲುವು ದಾಖಲಿಸಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸೋತರೆ, ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಶ್ರೀರಾಮುಲು ಸಹ ಸೋಲುಂಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರ ಪುತ್ರ, ಪುತ್ರಿ, ಪತ್ನಿ ಕಣಕ್ಕಿಳಿದಿದ್ದು, ಈ ಪೈಕಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಿಂದ, ಚಾಮರಾಜನಗರದಿಂದ ಕಣಕ್ಕಿಳಿದಿದ್ದ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪುತ್ರ ಸುನಿಲ್ಬೋಸ್, ಬೀದರ್ ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಚಿಕ್ಕೋಡಿಯಿಂದ ಸಚಿವ ಸತೀಶ್ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಗೆಲುವು ಸಾಧಿಸಸಿದ್ದಾರೆ.

  1. ಮಂಡ್ಯ – ಜೆಡಿಎಸ್ – ಎಚ್.ಡಿ.ಕುಮಾರಸ್ವಾಮಿ
  2. ಬೆಂಗಳೂರು ಗ್ರಾಮಾಂತರ – ಬಿಜೆಪಿ – ಡಾ. ಸಿ.ಎನ್ ಮಂಜುನಾಥ್
  3. ಹಾಸನ – ಕಾಂಗ್ರೆಸ್ – ಶ್ರೇಯಸ್ಪಟೇಲ್
  4. ಶಿವಮೊಗ್ಗ – ಬಿಜೆಪಿ – ಬಿ.ವೈ ರಾಘವೇಂದ್ರ
  5. ಚಿತ್ರದುರ್ಗ – ಬಿಜೆಪಿ – ಗೋವಿಂದಕಾರಜೋಳ
  6. ತುಮಕೂರು – ಬಿಜೆಪಿ – ವಿ.ಸೋಮಣ್ಣ
  7. ಬಳ್ಳಾರಿ – ಕಾಂಗ್ರೆಸ್ – ಈ.ತುಕಾರಾಮ್
  8. ಚಿಕ್ಕಬಳ್ಳಾಪುರ – ಬಿಜೆಪಿ – ಡಾ.ಕೆ. ಸುಧಾಕರ್
  9. ಧಾರವಾಡ – ಬಿಜೆಪಿ – ಪ್ರಲ್ಹಾದ್ಜೋಷಿ
  10. ಬೆಳಗಾವಿ – ಬಿಜೆಪಿ – ಜಗದೀಶ್ಶೆಟ್ಟರ್
  11. ಬಾಗಲಕೋಟೆ – ಬಿಜೆಪಿ – ಪಿ.ಸಿ ಗದ್ದಿಗೌಡರ್
  12. ಚಾಮರಾಜನಗರ – ಕಾಂಗ್ರೆಸ್ – ಸುನಿಲ್ಬೋಸ್
  13. ದಾವಣಗೆರೆ – ಕಾಂಗ್ರೆಸ್ – ಡಾ.ಪ್ರಭಾ ಮಲ್ಲಿಕಾರ್ಜುನ್
  14. ಕೊಪ್ಪಳ – ಕಾಂಗ್ರೆಸ್ – ರಾಜಶೇಖರ ಹಿಟ್ನಾಳ್
  15. ಕೋಲಾರ – ಜೆಡಿಎಸ್ ಮಲ್ಲೇಶ್ಬಾಬು
  16. ಕಲಬುರಗಿ – ಕಾಂಗ್ರೆಸ್ – ರಾಧಾಕೃಷ್ಣ ದೊಡ್ಡಮನಿ
  17. ಉತ್ತರ ಕನ್ನಡ – ಬಿಜೆಪಿ – ವಿಶ್ವೇಶ್ವರಹೆಗಡೆ
  18. ರಾಯಚೂರು – ಕಾಂಗ್ರೆಸ್ – ಕುಮಾರನಾಯಕ್
  19. ಉಡುಪಿ – ಚಿಕ್ಕಮಗಳೂರು – ಬಿಜೆಪಿ ಕೋಟಾಶ್ರೀನಿವಾಸಪೂಜಾರಿ
  20. ದಕ್ಷಿಣ ಕನ್ನಡ – ಬಿಜೆಪಿ – ಬ್ರಿಜೇಶ್ ಚೌಟ
  21. ಮೈಸೂರು – ಕೊಡಗು – ಬಿಜೆಪಿ – ಯದುವೀರ್ಒಡೆಯರ್
  22. ಬೀದರ್ – ಕಾಂಗ್ರೆಸ್ – ಸಾಗರ್ಖಂಡ್ರೆ
  23. ಬಿಜಾಪುರ – ಬಿಜೆಪಿ – ರಮೇಶ್ಜಿಗಜಿಣಗಿ
  24. ಬೆಂಗಳೂರು ಉತ್ತರ – ಬಿಜೆಪಿ – ಶೋಭಾಕರಂದ್ಲಾಜೆ
  25. ಬೆಂಗಳೂರು ದಕ್ಷ್ಷಿಣ – ಬಿಜೆಪಿ – ತೇಜಸ್ವಿಸೂರ್ಯ
  26. ಬೆಂಗಳೂರು ಕೇಂದ್ರ – ಬಿಜೆಪಿ – ಪಿ.ಸಿ ಮೋಹನ್
  27. ಚಿಕ್ಕೋಡಿ – ಕಾಂಗ್ರೆಸ್ – ಪ್ರಿಯಾಂಕ ಜಾರಕಿಹೊಳಿ
  28. ಹಾವೇರಿ – ಬಿಜೆಪಿ – ಬಸವರಾಜ ಬೊಮ್ಮಾಯಿ

ಸುರಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವು: ಲೋಕಸಭಾ ಚುನಾವಣೆ ಜೊತೆಗೆ ನಡೆದ ಸುರಪುರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಿದೆ. ಶಾಸಕ ರಾಜಾವೆಂಕಟಪ್ಪ ನಾಯಕ್ ಅವರ ಪುತ್ರ ವೇಣುಗೋಪಾಲನಾಯಕ ಬಿಜೆಪಿಯ ರಾಜುಗೌಡ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply