ದೆಹಲಿ / ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ಅಖಾಡ ಸಜ್ಜಾಗಿದ್ದು, 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಮೂರು ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಮೈತ್ರಿ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಯಾರಿಗೆ ಎಲ್ಲಿ ಟಿಕೆಟ್?
- ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ (ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಶಾಸಕಿ) – ರಮೇಶ್ ಕತ್ತಿ ಬಂಡಾಯ ಸಾಧ್ಯತೆ
- ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
- ಬಿಜಾಪುರ – ರಮೇಶ್ ಜಿಗಜಿಣಗಿ
- ಗುಲಬರ್ಗಾ – ಉಮೇಶ್ ಜಾಧವ್
- ಬೀದರ್ – ಭಗವಂತ ಖೂಬಾ
- ಕೊಪ್ಪಳ – ಡಾ.ಬಸವರಾಜ ತ್ಯಾವಟೂರು
- ಬಳ್ಳಾರಿ – ಬಿ.ಶ್ರೀರಾಮುಲು (ಜನಾರ್ದನ ರೆಡ್ಡಿ, ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ ಸಂಬಂಧಿ)
- ಹಾವೇರಿ – ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಪುತ್ರ)
- ಧಾರವಾಡ – ಪ್ರಹ್ಲಾದ್ ಜೋಷಿ
- ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್ (ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ) – ಎಂ.ಪಿ.ರೇಣುಕಾಚಾರ್ಯ ಬಂಡಾಯ ಸಾಧ್ಯತೆ
- ಶಿವಮೊಗ್ಗ – ಬಿ.ವೈ.ರಾಘವೇಂದ್ರ – ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಂಡಾಯ ಸಾಧ್ಯತೆ
- ಉಡುಪಿ-ಚಿಕ್ಕಮಗಳೂರು – ಕೋಟ ಶ್ರೀನಿವಾಸ ಪೂಜಾರಿ – ಸಿ.ಟಿ.ರವಿ ಒಳೇಟು ಕೊಡುವ ಸಾಧ್ಯತೆ
- ದಕ್ಷಿಣ ಕನ್ನಡ – ಕ್ಯಾಪ್ಟನ್ ಬ್ರಿಜೇಶ್ ಚೌಟಾ – ನಳಿನ್ ಕುಮಾರ್ ಕಟೀಲ್ ಒಳೇಟು ಕೊಡುವ ಸಾಧ್ಯತೆ
- ತುಮಕೂರು – ವಿ.ಸೋಮಣ್ಣ – ಹಾಲಿ ಸಂಸದ ಬಸವರಾಜ್ ಒಳೇಟು ಕೊಡುವ ಸಾಧ್ಯತೆ
- ಮೈಸೂರು – ಕೊಡಗು – ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
- ಚಾಮರಾಜನಗರ – ಎಸ್.ಬಾಲರಾಜು
- ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್.ಮಂಜುನಾಥ (ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಳಿಯ)
- ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
- ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಸಂಬಂಧಿ)




