ಸಾಹಿತ್ಯ ಹುಣ್ಣಿಮೆ ೨೦೭ ನೆಯ ತಿಂಗಳ ಕಾರ್ಯಕ್ರಮ

3 years ago

ಶಿವಮೊಗ್ಗ: ಜಿಲ್ಲೆ ಸೇರಿದಂತೆ ಅನೇಕ ಊರುಗಳಲ್ಲಿ ಚಂಡಮಾರುತ ಪರಿಣಾಮ ತಂಡಿ, ಮಳೆ ಅಕಾಲಿಕ ಪರಿಣಾಮ. ಆದರೂ ನಮ್ಮ ಕೃಷಿ ನಗರ, ಬಸವೇಶ್ವರ ನಗರ ನಿವಾಸಿಗಳ ಸಂಘದವರು ಕುಗ್ಗದೆ ಸಾಹಿತ್ಯ ಹುಣ್ಣಿಮೆಯ ೨೦೭ ತಿಂಗಳ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸುವಲ್ಲಿ ಯಶಸ್ವಿಯಾದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಕೃಷಿ ನಗರ ಮಹಿಳಾ ಸಮಾಜ, ಕೃಷಿ ನಗರ ಶಕ್ತಿ ಗಣಪತಿ ದೇವಸ್ಥಾನ ಸಮಿತಿಯ ಸಹಕಾರ ದಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು.

ಕಸಾಸಾಂ ವೇದಿಕೆ, ಕಸಾಪ, ಕಜಾಪ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಉಂಬಳೇಬೈಲು ಮೋಹನ್, ಡಾ ವಿರೂಪಾಕ್ಷ, ಬಳ್ಳೇಕೆರೆ ಸಂತೋಷ, ಲೀಲಾ ವಿರೂಪಾಕ್ಷಪ್ಪ, ಟಿ. ಡಿ. ಅರವಿಂದ, ಕಸಾಪ ತಾಲ್ಲೂಕು ಅಧ್ಯಕ್ಷೆ ಮಹಾದೇವಿ, ಸುಮಾ ನಟರಾಜ, ಸಾವಿತ್ರಮ್ಮ, ಅನ್ನಪೂರ್ಣಮ್ಮ, ಕುಮುದಾ ಎಸ್‌. ವೈ. , ಸರೋಜಮ್ಮ ಪುಷ್ಪ ಸಂಗಡಿಗರು, ಜಾನಕಮ್ಮ ಶೈಲಾಕಾಮತ್ ಅಂಬಿಕಾ ಸುವರ್ಣಾ ಭಾಗವಹಿದ್ದರು. ಚಂದ್ರಪ್ಪ ಸ್ವಾಗತಿಸಿದರು, ಗಣಪತಿ ವಂದಿಸಿದರು, ಲೀಲಾಪ್ರಭು ನಿರೂಪಿಸಿದರು.

ಡಿ. ಗಣೇಶ್, ಎಂ. ಎಂ. ಸ್ವಾಮಿ, ಶ್ರೀನಿವಾಸ ನಗಲಾಪುರ, ಭೈರಾಪುರ ಶಿವಪ್ಪಗೌಡ, ಲೀಲಾವತಿ , ಲಲಿತಮ್ಮ, ಮೇರಿ ಡಿಸೋಜ, ತಾರಾ, ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply