ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಣ್ಯರು ಭಾಗಿ

3 years ago

ಬೆಂಗಳೂರು: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನಲೆಯಲ್ಲಿ ಅಭೂತಪೂರ್ವ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗಿದೆ.

ಇಂದು ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಮನಗರ, ಮೈಸೂರು, ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಲಕ್ಷಾಂತರ ಮಂದಿ ಆಗಮನ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ  ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅಷ್ಟ ದಿಕ್ಕುಗಳಲ್ಲಿ  ಬಿಗಿಭದ್ರತೆಗೆ ಕೈಗೊಳ್ಳಲಾಗಿದೆ.

ಕಾರ್ಯಕ್ರಮದ ವೇಳೆ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಪ್ರಮುಖವಾಗಿ ಕಂಠೀರವ ಸ್ಟೇಡಿಯಂನ ಎರಡು ಗೇಟ್‌ಗಳಲ್ಲಿ ವಿವಿಐಪಿಗೆ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೊಲೀಸ್ ಕಮಿಷನರ್, ಟ್ರಾಫಿಕ್ ವಿಶೇಷ ಕಮಿಷನರ್, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿ ಇಬ್ಬರು ಜಂಟಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ

ಸುಮಾರು 1500ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಿದೆ. ಕ್ರೀಡಾಂಗಣದ 8 ಗೇಟ್‌ಗಳಲ್ಲಿ ಓರ್ವ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಜೊತೆಗೆ ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ.

ಇನ್ನೊಂದೆಡೆ ರಾಜ್ಯಾದ್ಯಂತ ಲಕ್ಷಾಂತರ ಜನರು ಆಗಮಿಸಲಿರುವ ಹಿನ್ನೆಲೆಯಲ್ಲಿ ಸುಮಾರು 500 ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಿದ್ದಾರೆ. ಹಲಸೂರು, ಎಂಜಿ ರೋಡ್, ರಿಚ್ ಮಂಡ್ ನಿಂದ ಕಾರ್ಪೊರೇಷನ್ ಮೂಲಕ  ಬರುವ ವಾಹನಗಳನ್ನ ಹಲಸೂರು ಕೆರೆ ಮೂಲಕ ಶಿವಾಜಿನಗರ, ವಿಧಾನಸೌಧ ಮೆಜೆಸ್ಟಿಕ್, ಮಾರ್ಕೆಟ್ ಮೂಲಕ ಬರುವ ವಾಹನಗಳನ್ನ ರಿಚ್ಮಂಡ್  ರೋಡ್ ನಿಂದ ಲಾಲ್ ಬಾಗ್ ರೋಡ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. 

ಮೆಜೆಸ್ಟಿಕ್ ಮಾರ್ಗದಿಂದ ಕಾರ್ಪೊರೇಷನ್ ಗೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರೋಡ್, ಇನ್ ಪೆಂಟ್ರಿ ರಸ್ತೆ ಮೂಲಕ ಸಂಚಾರ. ಕೇಂದ್ರ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹಿನ್ನಲೆಯಲ್ಲಿ ಮೈಸೂರ್ ಬ್ಯಾಂಕ್ ಸರ್ಕಲ್ ,ರಿಚ್ಮಂಡ್ ರೋಡ್,ಟೌನ್ ಹಾಲ್ ರಸ್ತೆ ಮೂಲಕ ತೆರಳಬಹುದು.

ಭದ್ರತೆಗೆ ಸಿಬ್ಬಂದಿ ಕೊರತೆ: ಪ್ರಮಾಣವಚನ ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿ, ಗಣ್ಯರಿಗೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮನಿಸುವ ಗಣ್ಯರಿಗೆ ಭದ್ರತೆ ವಹಿಸುವ ವಿವಿಐಪಿ ಸೆಕ್ಯುರಿಟಿ ಸಿಬ್ಬಂದಿ ಕೊರತೆ ಎದುರಾಗಿದೆ. ಸಿಬ್ಬಂದಿ ಕೊರತೆ ನಿವಾರಿಸಲು ಸಿಎಆರ್ ಘಟಕಗಳಿಂದ ಸಿಬ್ಬಂಧಿ ನಿಯೋಜನೆ ಮಾಡಲಾಗುತ್ತಿದೆ.

ಝಡ್  ಶ್ರೇಣಿಯ ಭದ್ರತೆ ಹೊಂದಿರುವ ಹಲವು ಗಣ್ಯರಿಗೆ ಅವರ ಶ್ರೇಣಿಗೆ ತಕ್ಕಂತೆ ಭದ್ರತೆ ನೀಡಲು ನಗರ ಪೊಲಿಸರು ಕ್ರಮ ಕೈಗೊಂಡಿದ್ದಾರೆ

ಇದಕ್ಕಾಗಿ ನಗರದ ಸಿಎಆರ್ ಘಟಕದಿಂದ ಸಿಬ್ಬಂದಿ ನಿಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ.ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗಣ್ಯರಿಗೆ ಆಹ್ವಾನ ನೀಡಿದ್ದು ಅವರಿಗೂ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು: ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾ, ಸಿಎಂಗಳಾದ ಮಮತಾ ಬ್ಯಾನರ್ಜಿ, ಅಶೋಕ್ ಗೆಹಲೋಟ್,  ಭೂಪೇಶ್ ಭಗೇಲ್ , ನಿತೀಶ್ ಕುಮಾರ್ , ಸುಕವಿಂದರ್ ಸಿಂಗ್ , ಎನ್ ರಂಗಸ್ವಾಮಿ , ಎಂ ಕೆ ಸ್ಟಾಲಿನ್, ಹೇಮಂತ್ ಸೋರೆನ್‌.

Leave a Reply